Arecanut And Copra Price: ಕುಸಿತ ಕಂಡ ಅಡಿಕೆ ಮತ್ತು ಕೊಬ್ಬರಿ ಧಾರಣೆ

50 ಸಾವಿರ ತಲುಪಿದ್ದ ರಾಶಿ ಅಡಿಕೆ ಧಾರಣೆ ಮತ್ತೆ ಕುಸಿತ ಕಂಡಿದ್ದು ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ವಾರ 50 ಸಾವಿರ ತಲುಪಿದ್ದ ಕ್ವಿಂಟಾಲ್ ರಾಶಿ ಅಡಿಕೆ ಬೆಲೆ ರೈತರಲ್ಲಿ ಸಂತಸ ಮೂಡಿಸಿತ್ತು, ಆದರೆ ಈ ವಾರ ಕುಸಿತ ಕಂಡಿದೆ.

ಶುಕ್ರವಾರ ಸಿದ್ಧಾಪುರ, ಶಿರಸಿ, ತುಮಕೂರು, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 48 ಸಾವಿರದ ಆಸುಪಾಸಿನಲ್ಲಿದೆ ದಾಟಿದೆ.

 Arecanut and Copra Price: Slight Decline in Arecanut Prices, Copra Price Details

ಶುಕ್ರವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 42,099 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 46,599 ರೂಪಾಯಿಗಳಾಗಿತ್ತು. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 46,398 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 48,799 ರೂಪಾಯಿ ಆಗಿತ್ತು.

ತುಮಕೂರು ಮಾರುಕಟ್ಟೆಯಲ್ಲಿ ಶುಕ್ರವಾರ ರಾಶಿ ಅಡಿಕೆ ಧಾರಣೆ ಕನಿಷ್ಠ 44,500 ರೂಪಾಯಿ ಇದ್ದರೆ ಗರಿಷ್ಠ 46,800 ರೂಪಾಯಿ ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 42,169 ರೂಪಾಯಿ ಇದ್ದರೆ ಗರಿಷ್ಠ 47,099 ರೂಪಾಯಿ ಆಗಿತ್ತು.

ಸೆಪ್ಟೆಂಬರ್ 28ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹15,000 ₹25,000 ₹22,500
2 ಬಂಟ್ವಾಳ ಹೊಸ ವೆರೈಟಿ ₹28,000 ₹45,000 ₹42,500
3 ಬಂಟ್ವಾಳ ಹಳೆ ವೆರೈಟಿ ₹46,000 ₹48,000 ₹47,000
4 ಕಾರ್ಕಳ ಹೊಸ ವೆರೈಟಿ ₹30,000 ₹45,000 ₹40,000
5 ಕಾರ್ಕಳ ಹಳೆ ವೆರೈಟಿ ₹40,000 ₹48,500 ₹45,000
6 ಕುಮಟಾ ಚಿಪ್ಪು ₹31,509 ₹34,599 ₹33,729
7 ಕುಮಟಾ ಫ್ಯಾಕ್ಟರಿ ₹13,019 ₹26,929 ₹25,349
8 ಪುತ್ತೂರು ಹೊಸ ವೆರೈಟಿ ₹34,000 ₹45,000 ₹39,500
9 ಶಿವಮೊಗ್ಗ ಬೆಟ್ಟೆ ₹48,219 ₹52,800 ₹50,740
10 ಶಿವಮೊಗ್ಗ ರಾಶಿ ₹42,099 ₹46,599 ₹46,009
11 ಶಿವಮೊಗ್ಗ ಸರಕು ₹53,999 ₹79,540 ₹76,600
12 ಸಿದ್ದಾಪುರ ಕೆಂಪುಗೋಟು ₹28,099 ₹33,019 ₹32,119
13 ಸಿದ್ದಾಪುರ ರಾಶಿ ₹42,169 ₹47,099 ₹46,899
14 ಸಿದ್ದಾಪುರ ತಟ್ಟಿಬೆಟ್ಟೆ ₹36,839 ₹41,619 ₹41,269
15 ಶಿರಸಿ ಬೆಟ್ಟೆ ₹35,400 ₹44,509 ₹42,020
16 ಶಿರಸಿ ರಾಶಿ ₹46,398 ₹48,799 ₹47,263
17 ಸುಳ್ಯ ಹಳೆ ವೆರೈಟಿ ₹44,800 ₹46,400 ₹45,000
18 ತುಮಕೂರು ರಾಶಿ ₹44,500 ₹46,800 ₹45,100
19 ಯಲ್ಲಾಪುರ ಕೆಂಪುಗೋಟು ₹24,899 ₹34,176 ₹32,399
20 ಯಲ್ಲಾಪುರ ರಾಶಿ ₹45,000 ₹52,955 ₹48,899
21 ಯಲ್ಲಾಪುರ ಆಪಿ ₹54,900 ₹54,900 ₹54,900

ಕುಸಿತ ಕಂಡ ಕೊಬ್ಬರಿ ಧಾರಣೆ

ಶುಕ್ರವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಮತ್ತೆ ಕುಸಿತ ಕಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಶುಕ್ರವಾರ ಕೊಬ್ಬರಿ ಧಾರಣೆ ಕನಿಷ್ಠ 7200 ರೂಪಾಯಿ ಇದ್ದರೆ ಗರಿಷ್ಠ 8055 ರೂಪಾಯಿಗೆ ಮಾರಾಟವಾಗಿದೆ.

ಪುತ್ತೂರು ಮಾರುಕಟ್ಟೆಯಲ್ಲಿ ಶುಕ್ರವಾರ ಕೊಬ್ಬರಿ ಬೆಲೆ ಕನಿಷ್ಠ 4500 ರೂಪಾಯಿ ಇದ್ದರೆ, ಗರಿಷ್ಠ ದರ 7300 ರೂಪಾಯಿ ಆಗಿತ್ತು. ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ 8000 ರೂಪಾಯಿ ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹7,500 ₹8,366 ₹7,980
2 ಕೆಆರ್ ಪೇಟೆ ಇತರೆ ₹7,900 ₹7,900 ₹7,900
3 ಪುತ್ತೂರು ಇತರೆ ₹4,500 ₹7,300 ₹5,900
4 ತಿಪಟೂರು ಕೊಬ್ಬರಿ ₹7,200 ₹8,055 ₹8,000
5 ತುರುವೇಕೆರೆ ಕೊಬ್ಬರಿ ₹8,000 ₹8,000 ₹8,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+