Arecanut Price: ₹55,000 ತಲುಪಿದ ಅಡಿಕೆ ಬೆಲೆ; ಕೊಬ್ಬರಿ ದರ ಹೇಗಿದೆ?
ಅಂತೂ ಇಂತೂ ಅಡಿಕೆ ಧಾರಣೆ 55,000 ಗಡಿ ತಲುಪಿದ್ದು ಅಡಿಕೆ ಬೆಳೆಗಾರರಲ್ಲಿ ಸ್ವಲ್ಪ ಆಶಾಭಾವನೆ ಮೂಡಿಸಿದೆ. ಹಲವು ತಿಂಗಳಿಂದ 50,000 ದಿಂದ 55,000 ರೂಪಾಯಿ ಒಳಗಡೆಯೇ ಏರಿಳಿಕೆ ಕಾಣುತ್ತಿದ್ದ ಕ್ವಿಂಟಾಲ್ ರಾಶಿ ಅಡಿಕೆ ಧಾರಣೆ ಸೋಮವಾರ 55,000 ರೂಪಾಯಿ ಗಡಿ ದಾಟಿದೆ.
ಚಿತ್ರದುರ್ಗ ಅಡಿಕೆ ಮಾರುಕಟ್ಟೆಯಲ್ಲಿ ಸೋಮವಾರ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 50,100 ರೂಪಾಯಿ ಇದ್ದರೆ ಗರಿಷ್ಠ 55,000 ರೂಪಾಯಿಗೆ ಮಾರಾಟವಾಗಿದೆ.

ಕೆಂಪುಗೋಟು ಅಡಿಕೆ ಧಾರಣೆ ಕ್ವಿಂಟಾಲ್ಗೆ ಕನಿಷ್ಠ ₹30,600 ಇದ್ದರೆ ಗರಿಷ್ಠ ₹31,000 ಆಗಿತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹33,211 ಮತ್ತು ಗರಿಷ್ಠ ₹53,000 ಆಗಿತ್ತು. ಸರಕು ಅಡಿಕೆ ಧಾರಣೆ ಕನಿಷ್ಠ ₹53,399 ಇದ್ದರೆ ಗರಿಷ್ಠ ಬೆಲೆ ₹78,700 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 2 | ಬಂಟ್ವಾಳ | ಹೊಸ ವೆರೈಟಿ | ₹28,500 | ₹37,500 | ₹34,000 |
| 3 | ಚಿತ್ರದುರ್ಗ | ಅಪಿ | ₹50,600 | ₹51,000 | ₹50,800 |
| 4 | ಚಿತ್ರದುರ್ಗ | ಬೆಟ್ಟೆ | ₹35,600 | ₹36,000 | ₹35,800 |
| 5 | ಚಿತ್ರದುರ್ಗ | ರಾಶಿ | ₹50,100 | ₹55,000 | ₹50,300 |
| 6 | ಕಾರ್ಕಳ | ಹೊಸ ವೆರೈಟಿ | ₹25,000 | ₹38,000 | ₹30,000 |
| 7 | ಕುಮಟಾ | ಚಿಪ್ಪು | ₹26,089 | ₹28,509 | ₹27,349 |
| 8 | ಕುಮಟಾ | ಹಣ್ಣು | ₹31,989 | ₹35,019 | ₹34,149 |
| 9 | ಶಿವಮೊಗ್ಗ | ಬೆಟ್ಟೆ | ₹41,099 | ₹52,699 | ₹51,899 |
| 10 | ಶಿವಮೊಗ್ಗ | ಗೊರಬಲು | ₹16,500 | ₹35,100 | ₹32,669 |
| 11 | ಶಿವಮೊಗ್ಗ | ರಾಶಿ | ₹33,211 | ₹53,000 | ₹49,599 |
| 12 | ಶಿವಮೊಗ್ಗ | ಸರಕು | ₹53,399 | ₹78,700 | ₹62,399 |
| 13 | ಸಿದ್ದಾಪುರ | ಚಾಲಿ | ₹32,899 | ₹35,900 | ₹34,569 |
| 14 | ಸಿದ್ದಾಪುರ | ರಾಶಿ | ₹43,899 | ₹49,599 | ₹47,899 |
| 15 | ಶಿರಸಿ | ಬಿಳೆ ಗೊಟು | ₹18,299 | ₹29,399 | ₹27,093 |
| 16 | ಶಿರಸಿ | ಚಾಲಿ | ₹31,899 | ₹36,001 | ₹34,346 |
| 17 | ಶಿರಸಿ | ರಾಶಿ | ₹43,799 | ₹47,808 | ₹45,338 |
| 18 | ತರೀಕೆರೆ | ರಾಶಿ | ₹31,250 | ₹50,000 | ₹46,111 |
| 19 | ಯಲ್ಲಾಪುರ | ರಾಶಿ | ₹45,900 | ₹54,369 | ₹49,229 |
| 20 | ಯಲ್ಲಾಪುರ | ಕೆಂಪು ಗೋಟು | ₹24,899 | ₹34,419 | ₹31,399 |
ಕೊಬ್ಬರಿ ಬೆಲೆ ಹೇಗಿದೆ?
ರಾಜ್ಯದಲ್ಲಿ ಕೊಬ್ಬರಿ ಬೆಲೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. 10 ಸಾವಿರದ ಗಡಿ ಕೂಡ ದಾಟದೆ 6000 ಕ್ಕೂ ಕುಸಿಯದೆ ಮಧ್ಯದಲ್ಲಿ ಏರಿಳಿತವಾಗುತ್ತಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ 8000 ಗರಿಷ್ಠ 8200 ರೂಪಾಯಿ ಆಗಿತ್ತು. ಕೆಆರ್ ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 9356 ರೂಪಾಯಿ ಮತ್ತು ಗರಿಷ್ಠ 9431 ರೂಪಾಯಿ ಆಗಿತ್ತು.
ರಾಜ್ಯದ ಪ್ರಮುಖ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್ಗೆ ಕನಿಷ್ಠ 8700 ರೂಪಾಯಿ ಆಗಿದ್ದರೆ ಗರಿಷ್ಠ 9500 ರೂಪಾಯಿ ಆಗಿತ್ತು.
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,000 | ₹8,200 | ₹8,000 |
| 2 | ಅರಸೀಕೆರೆ | ಬೇರೆ | ₹5,300 | ₹7,100 | ₹5,300 |
| 3 | ಮಧುಗಿರಿ | ಕೊಬ್ಬರಿ | ₹8,000 | ₹9,000 | ₹8,500 |
| 4 | ಕೆ.ಆರ್.ಪೇಟೆ | ಕೊಬ್ಬರಿ | ₹9,356 | ₹9,431 | ₹9,431 |
| 5 | ಮಧುಗಿರಿ | ಬೇರೆ | ₹5,000 | ₹7,200 | ₹6,700 |
| 6 | ತಿಪಟೂರು | ಕೊಬ್ಬರಿ | ₹8,700 | ₹9,500 | ₹8,900 |
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications