ಮಧ್ಯ ಪ್ರದೇಶ: ಮಂಡಸೌರ್ ನಲ್ಲಿ ಮತ್ತೆ ರೈತರೊಬ್ಬರ ಬಲಿ, ಭುಗಿಲೆದ್ದ ಆಕ್ರೋಶ

ಭೋಪಾಲ್, ಜೂನ್ 9: ಮಧ್ಯ ಪ್ರದೇಶದ ಮಂಡಸೌರ್ ನಲ್ಲಿ ರೈತರ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಗಾಯಗೊಂಡಿದ್ದ ಬದವಾನ್ ಜಿಲ್ಲೆಯ 26 ವರ್ಷದ ರೈತ ಧಾಕಾಡ್ ಸಾವನ್ನಪ್ಪಿದ್ದು ಮತ್ತೆ ಜನರ ತಾಳ್ಮೆಯ ಕಟ್ಟೆ ಒಡೆದಿದೆ.

26 ವರ್ಷದ ರೈತರು ಎಂವೈ ಆಸ್ಪತ್ರೆಯಲ್ಲಿ ಸಾವಿಗೀಡಾಗುವ ಮೂಲಕ ಮಧ್ಯ ಪ್ರದೇಶ ರೈತರ ಗಲಭೆಯಲ್ಲಿ ಸತ್ತವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅವರನ್ನು ಹಿಂದಿನ ರಾತ್ರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

[ಮಧ್ಯಪ್ರದೇಶದ ರೈತರ ಹೋರಾಟದಲ್ಲಿ ರಾಜಕೀಯ ಮೇಲಾಟ]

ಧಾಕಾಡ್ ಪೊಲೀಸರ ದೌರ್ಜನ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

 Another farmer dies in Mandsaur, anger escalates

ಆದರೆ ಘಟನೆಯನ್ನು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಹಲವು ಪ್ರದೇಶಗಳಲ್ಲಿ ಇಂದು ಕರ್ಫ್ಯೂ ಸಡಿಲಿಕೆ ಮಾಡುತ್ತಿದ್ದಂತೆ ಒಂದಷ್ಟು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.

[ನಂದಿ ಗ್ರಾಮದ ಹಿಂಸಾಚಾರ ನೆನಪಿಸಿದ ಮಧ್ಯಪ್ರದೇಶದ ಮಂಡ್ಸೌರ್]

ದೇವಸ್ಥಾನಕ್ಕೆ ಹೊರಟವರ ಮೇಲೆ ದಾಳಿ

ಧಾಕಾಡ್ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಅವರನ್ನು ನಿಲ್ಲಿಸಿ ಪೊಲೀಸರು ಲಾಠಿಯಿಂದ ಥಳಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇನ್ನು ಘಟನೆ ಬೆನ್ನಿಗೆ ಮಂಡಸೌರ್ ಹೊಸ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಯತ್ನ ಮಾಡಿದ್ದಾರೆ. ಇನ್ನು ದಿನೇಶ್ ಮಾಲ್ವಿ, ಶಿವನಾರಾಯ ಮಾಲ್ವಿ ಹಾಗೂ ಗಣೇಶ್ ಮಾಲ್ವಿ ಎಂಬ ಗ್ರಾಮಸ್ಥರೂ ನಾಪತ್ತೆಯಾಗಿದ್ದಾರೆ ಎಂದು ಜನರು ದೂರಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಕಾಂಗ್ರೆಸಿನ ಮಾಜಿ ಸಂಸದ ಸಜ್ಜನ್ ಸಿಂಗ್ ವರ್ಮಾ ಪೊಲೀಸರು ರೈತರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ರೆಕಾರ್ಡ್ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+