ಆಗಸ್ಟ್ 14ರಿಂದ ರವೆ, ಗೋಧಿ ಹಿಟ್ಟು ರಫ್ತಿನ ಮೇಲೂ ನಿರ್ಬಂಧ : ಕೇಂದ್ರ ಸರ್ಕಾರ ಆದೇಶ
ಕೇಂದ್ರ ಸರ್ಕಾರವು, ಮೈದಾ, ರವೆ ಮತ್ತು ಗೋಧಿ ಹಿಟ್ಟು ಮತ್ತು ಅದರ ಉತ್ಪನ್ನಗಳ ರಫ್ತಿನ ಮೇಲೆ ಆಗಸ್ಟ್ 14ರಿಂದ ನಿರ್ಬಂಧ ವಿಧಿಸಿದೆ. ಈ ಮೊದಲು ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು.
ಕಡಿಮೆ ಗೋಧಿ ಇಳುವರಿ ಮತ್ತು ಸಂಗ್ರಹಣೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡ ಪರಿಣಾಮವಾಗಿ ಮಾರ್ಚ್ ತಿಂಗಳಿನಿಂದ ಗೋಧಿ ಬೆಲೆಗಳಲ್ಲಿ ದೇಶೀಯವಾಗಿ ಏರಿಕೆಯಾಗುತ್ತಿದೆ. ಮತ್ತಷ್ಟು ಬೆಲೆ ಏರಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್‌ನ ಅಧಿಕೃತ ಆದೇಶದ ಪ್ರಕಾರ, ಮೈದಾ, ರವೆ ಇತ್ಯಾದಿಗಳ ರಫ್ತುಗಳನ್ನು ಗೋಧಿ ರಫ್ತಿನ (ಡಿಜಿಎಫ್‌ಟಿ) ಅಂತರ-ಸಚಿವಾಲಯ ಸಮಿತಿಯ (ಐಎಂಸಿ) ಅನುಮೋದನೆ ಬಾಕಿ ಉಳಿದಿದೆ.

ಡಿಜಿಎಫ್‌ಟಿ ಆದೇಶವು "ಈ ಅಧಿಸೂಚನೆ ಹೊರಡಿಸುವ ಮೊದಲು ಹಡಗಿನಲ್ಲಿ ಲೋಡ್ ಮಾಡಿರುವ ಅಥವಾ ರವಾನೆಯನ್ನು ಹಸ್ತಾಂತರಿಸಿದ ಸಂದರ್ಭಗಳಲ್ಲಿ ಆಗಸ್ಟ್ 8 ರಿಂದ ಆಗಸ್ಟ್ 14 ರ ಅವಧಿಯಲ್ಲಿ ಮೈದಾ, ರವೆ ಸರಕುಗಳನ್ನು ರಫ್ತು ಮಾಡಲು ಅನುಮತಿಸಲಾಗುವುದು" ಎಂದು ಹೇಳಿದೆ.
ಗೋಧಿ ರಫ್ತನ್ನು ನಿರ್ಬಂಧಿಸಿದ್ದ ಕೇಂದ್ರ
ರಫ್ತು ತಪಾಸಣೆ ಕೌನ್ಸಿಲ್ (ಇಐಸಿ) ಗುಣಮಟ್ಟದ ಪ್ರಮಾಣಪತ್ರವನ್ನು ನೀಡಿದರೆ ಐಎಂಜಿ ಯಿಂದ ಅಧಿಕೃತಗೊಳಿಸಲಾದ ಎಲ್ಲಾ ಸಾಗಣೆಗಳ ರಫ್ತುಗೆ ಅನುಮತಿ ನೀಡಬೇಕು ಎಂದು ಆದೇಶವು ಹೇಳುತ್ತದೆ. ಸರ್ಕಾರವು ಜುಲೈನಲ್ಲಿ ಗೋಧಿ ಹಿಟ್ಟಿನ ರಫ್ತು ನಿರ್ಬಂಧಿಸಿತು ಮತ್ತು ಮೇ 13 ರಂದು ಅಧಿಕೃತವಾಗಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು.

ಆಗಸ್ಟ್ 14ರಿಂದ ಹೊಸ ನಿಯಮ ಜಾರಿಗೆ ಬರಲಿದೆ, "ಸರಕುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅಗತ್ಯ ವಿಧಾನಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು" ಎಂದು ಡಿಜಿಎಫ್‌ಟಿ ಹೇಳಿದೆ.
ಅಧಿಸೂಚನೆ ಹೊರಡಿಸುವ ಮೊದಲು ಈ ಉತ್ಪನ್ನಗಳು ಹಡಗಿನಲ್ಲಿ ಲೋಡ್ ಆಗಿದ್ದರೆ ಮತ್ತು ಸಾಗಣೆಯನ್ನು ಕಸ್ಟಮ್ಸ್‌ಗೆ ಹಸ್ತಾಂತರಿಸಿದ್ದರೆ ಮತ್ತು ಅದರಲ್ಲಿ ನೋಂದಾಯಿಸಿದ್ದರೆ ಮೈದಾ ಮತ್ತು ರವೆ ರಫ್ತುಗಳನ್ನು ಆಗಸ್ಟ್ 8 ರಿಂದ ಆಗಸ್ಟ್ 14 ರ ನಡುವೆ ಅನುಮತಿಸಲಾಗುವುದು ಎಂದು ಅದು ಹೇಳಿದೆ.
ಭಾರತವು 2021-2022ರಲ್ಲಿ 246.57 ಮಿಲಿಯನ್ ಡಾಲರ್ ಮೌಲ್ಯದ ಗೋಧಿ ಹಿಟ್ಟನ್ನು ರಫ್ತು ಮಾಡಿದೆ. ಶಾಖದ ಅಲೆಯ ಪರಿಣಾಮದಿಂದ ಗೋಧಿ ಇಳುವರಿಯಲ್ಲಿ ಕುಸಿತ ಕಾಣಬಹುದು ಎಂಬ ಆತಂಕದ ನಡುವೆ, ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಭಾರತವು ಮೇ ತಿಂಗಳಲ್ಲಿ ಗೋಧಿ ರಫ್ತುಗಳನ್ನು ನಿಷೇಧಿಸಿತು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications