ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಎಲ್ಲಾ ಹಾಪ್‌ಕಾಮ್ಸ್‌ ಸೋಮವಾರ ಬಂದ್

|
Google Oneindia Kannada News

Hopcoms
ಬೆಂಗಳೂರು, ಡಿ. 16 : ತರಕಾರಿ ತರೋಕೆ ಅಂತ ಬ್ಯಾಗ್ ಹಿಡಿದು ಹಾಪ್‌ಕಾಮ್ಸ್‌ ಕಡೆ ಹೊರಟ್ರಾ? ಬೆಂಗಳೂರಿನಲ್ಲಿ ಸೋಮವಾರ ನೀವು ಹಾಪ್‌ಕಾಮ್ಸ್‌ನಲ್ಲಿ ತರಕಾರಿ ಕೊಳ್ಳುವಂತಿಲ್ಲ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದ 287 ಹಾಪ್‌ಕಾಮ್ಸ್‌ಗಳು ಬಂದ್ ಆಗಿವೆ.

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಎಲ್ಲಾ ಹಾಪ್‌ಕಾಮ್ಸ್‌ ನೌಕರರು ಸೋಮವಾರ ಮಳಿಗೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಆದ್ದರಿಂದ ನಗರದ ಎಲ್ಲಾ ಹಾಪ್‌ಕಾಮ್ಸ್‌ಗಳು ತೆರೆಯುವುದಿಲ್ಲ.

ಬೆಂಗಳೂರಿನ 287 ಹಾಪ್‌ಕಾಮ್ಸ್‌ ಮಳಿಗೆಗಳನ್ನು ಬಂದ್ ಮಾಡಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಒಂದು ದಿನದ ಪ್ರತಿಭಟನೆ ನಡೆಸಲು ನೌಕರರು ತೀರ್ಮಾನಿಸಿದ್ದಾರೆ. ನಗರದ ಹಾಪ್‌ಕಾಮ್ಸ್‌ನಲ್ಲಿ ಕೆಲಸ ನಿರ್ವಹಿಸುವ 877 ನೌಕರರು ಪ್ರತಿಭಟನೆಗೆ ಬೆಂಬಲ ನೀಡಿದ್ದು, ಮಳಿಗೆಗಳನ್ನು ತೆರೆಯದಿರಲು ನಿರ್ಧರಿಸಿದ್ದಾರೆ. (ಹಾಪ್‌ಕಾಮ್ಸ್‌ನಲ್ಲಿ ‘ಆರ್ಗಾನಿಕ್ ಕಾರ್ನರ್')

ಕಳೆದ ಕೆಲವು ದಿನಗಳಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೌಕರರು ಪ್ರತಿಭನಟೆ ನಡೆಸುತ್ತಿದ್ದರು. ಸರ್ಕಾರ ಮತ್ತು ತೋಟಗಾರಿಕಾ ಇಲಾಖೆಗೆ ಈ ಕುರಿತು ಮನವಿ ಮಾಡಿದ್ದರು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮಳಿಗೆಗಳನ್ನು ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಲಾಲ್ ಬಾಗ್ ಬಳಿಯ ಹಾಪ್‌ಕಾಮ್ಸ್‌ನಲ್ಲಿ ಬೆಳಗ್ಗೆ 6.30ರಿಂದಲೇ ನೌಕರರು ಪ್ರತಿಭಟನೆ ಆರಂಭಿಸಿದ್ದು, ತರಕಾರಿ ಸರಬರಾಜು ಮಾಡಲು ಬಂದ ಲಾರಿಗಳು ಮಳಿಗೆ ಬಂದ್ ಆಗಿರುವುದರಿಂದ ಸಾಲುಗಟ್ಟಿ ನಿಂತಿವೆ. ಇದೇ ಪರಿಸ್ಥಿತಿ ಎಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ಇರಲಿದ್ದು, ತರಕಾರಿಕೊಳ್ಳಲು ಹಾಪ್‌ಕಾಮ್ಸ್‌ಕಡೆ ಹೋಗಬೇಡಿ.

English summary
All Hopcoms outlets in the city will remain closed on Monday. The employees of the Horticulture Producers' Cooperative Marketing and Processing Society (Hopcoms) have demanded a salary hike as per Sixth Pay commission scales. There are 327 registered outlets in the city which will be closed on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X