ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣ ಕೊಡುವುದು ನಿಲ್ಲಿಸಿಲ್ಲ: ಬಿ ಸಿ ಪಾಟೀಲ್

ಬೆಂಗಳೂರು,ಮಾ.23: ಯಾವುದೇ ಕೃಷಿ ಯಂತ್ರೋಪಕರಣ ಸಬ್ಸಿಡಿ ದರದಲ್ಲಿ ಕೊಡುವುದನ್ನು ನಿಲ್ಲಿಸಿಲ್ಲ. ಎಲ್ಲಿಯೂ ಕೊರತೆಯೂ ಆಗಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದರು.

2018-19ರಲ್ಲಿ 2001 ಕೋಟಿ ಕೇಂದ್ರ ಸರ್ಕಾರ ಹಾಗೂ 1299 ಕೋಟಿ ರಾಜ್ಯ ಸರ್ಕಾರದ ಪಾಲು ಸಂಪೂರ್ಣ ಬಿಡುಗಡೆಯಾಗಿದೆ. 2020-21ಕ್ಕೆ 404 ಕೋಟಿ ಈ ವರ್ಷ ಬಿಡುಗಡೆ ಮಾಡಿದ್ದೇವೆ. ಜಿಲ್ಲಾವಾರು ತಾಲೂಕುವಾರು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಕೃಷಿ ಹೊಂಡಗಳನ್ನು ಮಿಷಿನ್ ಮೋಡ್ ಯೋಜನೆ ಅಡಿಯಲ್ಲಿ 2020 ಸ್ಥಗಿತಗೊಂಡಿದೆ. ಈಗ ನರೇಗಾ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಜಲಾನಯನದಲ್ಲಿ ರಾಜಸ್ತಾನ ಬಿಟ್ಟರೆ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ ಈ ವರ್ಷ ಕೇಂದ್ರದಿಂದ 642 ಕೋಟಿ ಮತ್ತು ರಿಚಾರ್ಡ್ ನಲ್ಲಿ 640 ಕೋಟಿ ರೂ ಹಣ ಬಂದಿದೆ. ಎಂದರು.

 Agricultural Machinery giving in subsidy price does not stop: B C Patil

ಕೃಷಿ ಇಲಾಖೆಯಲ್ಲಿ 9017 ಹುದ್ದೆಗಳು ಮಂಜೂರು ಆಗಿವೆ. ಸದ್ಯ ಇಲಾಖೆಯಲ್ಲಿ 4053 ಹುದ್ದೆಗಳು ಭರ್ತಿ ಇದ್ದು, ಇನ್ನೂ 4954 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತ ನಂತರ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಬಿ.ಸಿ ಪಾಟೀಲ್ ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+