ಟನ್ ಕಬ್ಬಿಗೆ 4500 ರೂ. ವೈಜ್ಞಾನಿಕ ಬೆಲೆ ನೀಡುವಂತೆ ಎಎಪಿ ಮುಖಂಡ ಭಾಸ್ಕರ್‌ರಾವ್ ಒತ್ತಾಯ
ಮಂಡ್ಯ, ಅಕ್ಟೋಬರ್ 17: ರೈತರಿಗೆ ಪ್ರತಿ ಟನ್ ಕಬ್ಬಿಗೆ 4500 ರೂ. ನೀಡಬೇಕು. ತೂಕದಲ್ಲಿ ಮೋಸ, ವಿಳಂಬವಾಗುತ್ತಿರುವ ಪಾವತಿ ಸೇರಿದಂತೆ ರೈತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಅಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ. ಭಾಸ್ಕರ್‌ರಾವ್ ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ರೈತರು ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡದೆ ಆಳುವ ಸರಕಾರಗಳು ನಿರ್ಲಕ್ಷ್ಯವಹಿಸಿವೆ. ಉತ್ಪಾದನಾ ಹೆಚ್ಚಳವಾಗಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ತಕ್ಷಣ ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕು ಆಗ್ರಹಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರದಲ್ಲಿ ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಎಂಆರ್‌ಪಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಕಬ್ಬು ಸಾಗಾಣಿಕೆ ವೆಚ್ಚ 1 ಕಿ.ಮೀ. ಮತ್ತು 100 ಕಿ.ಮೀ. ಇರುವ ವೆಚ್ಚ ಒಂದೇ ಆಗಿರುತ್ತದೆ. ಇದು ಅವೈಜ್ಞಾನಿಕವಾಗಿದ್ದು, ಕಿ.ಮೀ. ಅಂತರದ ಮೇಲೆ ಸಾಗಾಟ ವೆಚ್ಚ ಮುರಿದು ಸಮೀಪ ಇರುವ ರೈತರಿಗೆ ಹೆಚ್ಚಿನ ಬೆಲೆ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.

ಟನ್ ಕಬ್ಬಿಗೆ 4500 ರೂ. ನೀಡಲು ಆಗ್ರಹ
ಸದ್ಯ ನಮ್ಮ ಆಮ್ ಆದ್ಮಿ ಪಕ್ಷದ ಆಡಳಿತ ಇರುವ ಪಂಜಾಬ್ ರಾಜ್ಯದಲ್ಲಿ ಶೇ. 7.5ರಷ್ಟು ಕಬ್ಬಿನ ಇಳುವರಿ ಕಡಿಮೆ ಇದ್ದರೂ ಕೂಡ 3800 ರೂ. ಪ್ರತಿ ಮೆಟ್ರಿಕ್ ಟನ್‌ಗೆ ದರ ನಿಗದಿಯಾಗಿದೆ. ಕೇಂದ್ರ ಸರಕಾರ 2750 ಎಂಆರ್‌ಪಿ ನೀಡುತ್ತಿದ್ದು, ಇದಕ್ಕೆ ಉಳಿದ ಹಣ ಸೇರಿಸಿ 3800 ರೂ. ನೀಡಲಾಗುತ್ತಿದೆ. ರಾಜ್ಯದಲ್ಲಿ ಕಬ್ಬಿನ ಇಳುವರಿ ಹೆಚ್ಚಾಗಿರುವುದರಿಂದ

15 ದಿನಗಳೊಳಗೆ ಹಣ ಪಾವತಿಯಾಗಬೇಕು
ಎಥನಾಲ್, ಆಲ್ಕೋಹಾಲ್, ವಿದ್ಯುತ್‌ಗಳ ತಯಾರಿಕೆಯಿಂದ ಕಾರ್ಖಾನೆಗೆ ಅಪಾರವಾದ ಆದಾಯ ಬರುವುದಲ್ಲದೆ, ಸರಕಾರಕ್ಕೆ 4500 ತೆರಿಗೆ ಜಮಾ ಆಗುತ್ತಿದ್ದು, ಅದರಲ್ಲಿ ಸರ್ಕಾರ ಟನ್ ಕಬ್ಬಿಗೆ ಕನಿಷ್ಟ 2000 ರೂ. ರೈತರಿಗೆ ಮರಳಿ ನೀಡುವ ವ್ಯವಸ್ಥೆ ಆಗಬೇಕು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 15 ದಿನಗಳೊಳಗೆ ಹಣ ಪಾವತಿ ಮಾಡಬೇಕು ಎಂಬ ಆದೇಶವಿದ್ದರೂ, ಕಾರ್ಖಾನೆಗಳು ಹಣ ಪಾವತಿ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಹಿತದೃಷ್ಟಿ ಕಾಪಾಡಬೇಕಿದ್ದ ಸರಕಾರ ಮತ್ತು ಸಕ್ಕರೆ ಸಚಿವಾಲಯ ಕರ್ನಾನೆಯ ಹಿತ ಕಾಪಾಡುವುದು ಪರಿಪಾಠವನ್ನು ಬೆಳೆಸಿಕೊಂಡಿಲ್ಲ. ರೈತರ ಹಿತದೃಷ್ಟಿ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜಕಾರಣಿಗಳ ಹಿಡಿತದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳು
ಜಿಎಸ್‌ಟಿ ಸೇರಿದಂತೆ ಸರಕಾರಕ್ಕೆ ಅತ್ಯಧಿಕ ತೆರಿಗೆ ಸಂಗ್ರಹವಾಗುತ್ತಿದ್ದರೂ ಸಹ ಶಿಕ್ಷಣ, ಆರೋಗ್ಯ ವ್ಯವಸ್ಥೆ ಸರಿಯಿಲ್ಲ . ಈ ಎರಡೂ ಕ್ಷೇತ್ರಗಳು ರಾಜಕಾರಣಿಗಳ ಹಿಡಿತ ಇರುವುದರಿಂದ ಜನರಿಗೆ ಸರಿಯಾದ ಸೌಲಭ್ಯ ನೀಡುವಲ್ಲಿ ವಿಫಲವಾಗಿದ್ದಾರೆ. ದೆಹಲಿಯಲ್ಲಿ ನಮ್ಮ ಸರಕಾರ ಆಡಳಿತ ನಡೆಸುತ್ತಿದ್ದು, ಸರಕಾರಿ ಶಾಲೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಕ್ಲಿನಿಕ್‌ಗಳನ್ನು ತೆರೆದು ಜನರ ಆರೋಗ್ಯಕ್ಕೂ ಗಮನ ನೀಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಎರಡೂ ಕ್ಷೇತ್ರಗಳನ್ನು ಆಧ್ಯತೆಯನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.

ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದೇ ಎಎಪಿ ಗುರಿ
ನಮ್ಮ ಪಕ್ಷ ಈಗಾಗಲೇ ದೆಹಲಿ, ಪಂಜಾಬ್, ಉತ್ತರಪ್ರದೇಶ, ಮಹಾರಾಷ್ಟ್ರಗಳಲ್ಲಿ ಗೆಲುವು ಸಾಧಿಸಿದೆ. ಮುಂದೆ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳಿವೆ. ವಾತಾವರಣವೂ ಚೆನ್ನಾಗಿದೆ. ಪಂಜಾಬ್‌ನಲ್ಲಿ ಆರೋಗ್ಯ ಸಚಿವರು ಕೇವಲ ಶೇ. 1ರಷ್ಟು ಕಮಿಷನ್ ಕೇಳಿದರೆಂಬ ಕಾರಣಕ್ಕೆ ತನಿಖೆ ನಡೆಸಿ ಅವರನ್ನು ವಜಾಗೊಳಿಸುವುದರೊಂದಿಗೆ ಜೈಲಿಗೆ ಕಳುಹಿಸಲಾಯಿತು. ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದೇ ನಮ್ಮ ಗುರಿ ಎಂದು ತಿಳಿಸಿದರು.
ಎಎಪಿ ಮಂಡ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಬೂದನೂರು ಬೊಮ್ಮಯ್ಯ, ಮುಖಂಡರಾದ ವಿಜಯಶಾಸಿಮಠ್, ಆನಂದ್, ಪುಟ್ಟಸ್ವಾಮಿ, ಚಂದ್ರಶೇಖರ್ ಗೋಷ್ಠಿಯಲ್ಲಿದ್ದರು.












Click it and Unblock the Notifications