PM Kisan:ಕರ್ನಾಟಕದ 6 ಲಕ್ಷ ರೈತರಿಗೆ 13ನೇ ಕಂತಿನ ಹಣ ಸಿಗುವುದು ಡೌಟು
ಬೆಂಗಳೂರು, ಡಿಸೆಂಬರ್ 30: ದೇಶದ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯಡಿ ನೀಡುವ 13ನೇ ಕಂತಿನ ಹಣ ಕರ್ನಾಟಕದ 16 ಲಕ್ಷ ರೈತರಿಗೆ ಸಂದಾಯವಾಗುವುದು ಅನುಮಾನ ಎನ್ನಲಾಗಿದೆ.
'ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಯಡಿ ಹಣ ಪಡೆಯುವ ಅರ್ಹ ರೈತ ಪಲಾನುಭವಿಗಳು 13 ನೇ ಕಂತಿನ 2,000 ರೂ. ಪಡೆಯಲು ಕೆವೈಸಿ ಮಾಡಿಸುವಂತೆ ಹಲವಾರು ಬಾರಿ ಕೇಂದ್ರ ಕೃಷಿ ಇಲಾಖೆ ಗಡುವು ವಿಸ್ತರಣೆ ಮಾಡಿದೆ. ಆದರೆ ಇದುವರೆಗೆ ಕರ್ನಾಟಕದ ಫಲಾನುಫವಿಗಳ ಪೈಕಿ ಒಟ್ಟು ಸುಮಾರು 37ಲಕ್ಷ ರೈತರು ಮಾತ್ರ ಕೆವೈಸಿ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ ಸುಮಾರು 16 ಲಕ್ಷ ರೈತ ಫಲಾನುಭವಿಗಳು ಕೆವೈಸಿ ಮಾಡಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಇದರ ಪರಿಣಾಮವಾಗಿ ಜನವರಿಯಲ್ಲಿ ಬರಬಹುದು ಎನ್ನಲಾಗುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ 2,000 ರೂಪಾಯಿ ರೈತರಿಗೆ ಸಿಗುವುದು ಅನುಮಾನ ಎಂಬಂತಾಗಿದೆ.

ಲಭ್ಯ ಮಾಹಿತಿಗಳ ಪ್ರಕಾರ, ಕೆವೈಸಿ ಮಾಡದ ರೈತರ ಅಂಕಿಸಂಖ್ಯೆಗಳನ್ನು ನೋಡುವುದಾದರೆ ತುಮಕೂರು ಜಿಲ್ಲೆಯಲ್ಲಿ 97,000 ರೈತರು, ಕಲಬುರರಗಿ ವ್ಯಾಪ್ತಿಯಲ್ಲಿ 97,000, ಹಾಸನದಲ್ಲಿ 92,000 ಕೆವೈಸಿ ಮಾಡಿಸಿಲ್ಲ. ಈ ರೀತಿ ಕೆವೈಸಿ ಮಾಡಿಸಲು ಆಸಕ್ತಿ ತೋರದ ರೈತರಿಗೆ ಈ ಬಾರಿ ಕಂತು ಜಮೆ ಆಗುವುದಿಲ್ಲ.
ಪರಿಶೀಲನೆಯ ವಿಧಾನಗಳು
13ನೇ ಕಂತಿಗಾಗಿ ಕಾಯುತ್ತಿರುವ ರೈತರು ತಪ್ಪುಗಳಾಗದಂತೆ ಎಚ್ಚರವಹಿಸಿ. ಹಣ ಪಡೆಯಲು ಇಚ್ಛಿಸುವ ರೈತರು ಈಗಲೇ ನೀವು ಸರ್ಕಾರದ ಅಧಿಕೃತ ವೆಬ್‌ಸೈಟ್ https://pmkisan.gov.in/ಗೆ ಭೇಟಿ ನೀಡಿ ಪರಿಶೀಲಿಸಿ. ಇಲ್ಲವೇ ಸಿಎಸ್‌ಸಿ ಕೇಂದ್ರ ಭೇಟಿ ನೀಡಿ ಅಥವಾ ಸಹಾಯವಾಣಿ 011-24300606, 155261 ಗೆ ಸಂಪರ್ಕಿಸಿ. ಕೆವೈಸಿ ಮಾಡಲು ಅವಕಾಶಗಳು ಇದ್ದಲ್ಲಿ ತಕ್ಷಣವೇ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಏನಿದು ಯೋಜನೆ?
ಸಣ್ಣ ಪ್ರಮಾಣದ ರೈರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿ ತಂದಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2,000ರೂ.ನಂತೆ ಒಟ್ಟು ವಾರ್ಷಿಕ 6,000 ರೂ. ಹಣವನ್ನು ಅರ್ಹ ರೈತ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತದೆ. ಇದರ ಜೊತೆಗೆ ಅನ್ನದಾತರ ನೆರವಿಗೆ ನಿಂತ ರಾಜ್ಯ ಸರ್ಕಾರವು ಸಹ ತಲಾ 2,000ರೂ. ನಂತೆ ಒಟ್ಟು 4,000 ರೂ. ಹಣವನ್ನು ರೈತರ ಖಾತೆಗೆ ಜಮೆ ಮಾಡುತ್ತದೆ.

ಇದುವರೆಗೆ ಕೇಂದ್ರದಿಂದ 12 ಕಂತುಗಳು ರೈತರ ಖಾತೆಗೆ ಪಾವತಿಸಲಾಗಿದೆ. ಇದೀಗ ದೇಶಾದ್ಯಂತ ರೈತರು 13ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಕಂತಿನ ಹಣ ಡಿಸೆಂಬರ್ ಅಂತ್ಯಕ್ಕೆ ಜಮೆಆಗಲಿದೆ ಎನ್ನಲಾಗಿದೆ. ಸದ್ಯ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.












Click it and Unblock the Notifications