ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕ ಮಳೆಯಿಂದ ಬೆಳೆ ಹಾನಿ: ತೊಗರಿ, ಉದ್ದಿನ ಬೇಳೆ ಕಾಳುಗಳ ಬೆಲೆ ಶೇ.15 ಏರಿಕೆ

|
Google Oneindia Kannada News

ಬೆಂಗಳೂರು ಆಗಸ್ಟ್ 10: ಕಳೆದ ಒಂದೂವರೆ ತಿಂಗಳಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೇಳೆಗಳ ಪ್ರತಿ ಕೇಜಿಯ ಬೆಲೆಯಲ್ಲಿ ಶೇ.15ರಷ್ಟು ಏರಿಕೆ ಆಗಿದೆ. ಅಧಿಕ ನೀರಿನಿಂದ ಬೆಳೆ ಹಾನಿ, ಖಾರಿಫ್ ಋತುವಿನಲ್ಲಿ ಉತ್ಪನ್ನ ಪ್ರಮಾಣ ಕುಸಿತ ಮತ್ತು ಕಡಿಮೆ ದಾಸ್ತಾನು ಸಮಸ್ಯೆಗಳಿಂದ ಈ ಎರಡು ಬೇಳೆ ಕಾಳುಗಳ ಬೆಲೆ ಏರಿಕೆಗೆ ಕಾರಣವಾಗಿದೆ.

ಮಹಾರಾಷ್ಟ್ರ ರಾಜ್ಯದ ಲಾತೂರ್ ಪಟ್ಟಣದಲ್ಲಿ ಒಂದೂವರೆ ತಿಂಗಳ ಹಿಂದಷ್ಟೇ ಉತ್ತಮ ಗುಣಮಟ್ಟದ ತೊಗರಿಬೇಳೆ ಕೇಜಿಗೆ 97ರೂ. ಇತ್ತು ಇದೀಗ ಅದು 115ರೂ.ಗೆ ಏರಿಕೆ ಆಗಿದೆ. ಕೃಷಿ ಸಚಿವಾಲಯವು ಬಿಡುಗಡೆ ಮಾಡಿದ ಇತ್ತೀಚಿನ ಬಿತ್ತನೆಯ ಮಾಹಿತಿಯ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ ತೊಗರಿ ಬಿತ್ತನೆ ಈ ಭಾರಿ ಶೇ.4.6 ಕಡಿಮೆ ಆಗಿದ್ದು, ಉದ್ದಿನ ಬೇಳೆ ಶೇ.2ರಷ್ಟು ಇಳಿಕೆ ಆಗಿರುವುದು ತಿಳಿದು ಬಂದಿದೆ. ನಿರಂತರ ಮಳೆಯಿಂದ ಬೇಳೆ ಕಾಳುಗಳನ್ನು ಬೆಳೆದ ಜಮೀನಿನಲ್ಲಿ ನೀರು ನಿಂತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಸದ್ಯಕ್ಕೆ ಮೂಲಭೂತವಾಗಿ ತೊಗರಿ ಬೇಳೆ ಬೆಳೆ ಪ್ರಬಲವಾಗಿದೆ. ಆದರೆ, ಅದನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿಲ್ಲ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ರೈತರು ಈ ವರ್ಷ ಖಾರಿಫ್ ಬಿತ್ತನೆ ಆರಂಭದಲ್ಲಿ ಸೋಯಾಬೀನ್ ನತ್ತ ಹೆಚ್ಚು ವಾಲಿದ್ದಾರೆ. ಅವರ ಈ ಒಲವಿನಿಂದ ತೊಗರಿ ಬೇಳೆ ಬಿತ್ತನೆ ಪ್ರಮಾಣ ಕುಸಿತಗೊಂಡಿದೆ ಎಂದು ಮಹಾರಾಷ್ಟ್ರ ಮಾರುಕಟ್ಟೆಯ ಬೇಳೆಕಾಳು ಆಮದುದಾರ ಮತ್ತು ವ್ಯಾಪಾರಿಯೊಬ್ಬರು ತಿಳಿಸಿದರು.

ಐದು ಲಕ್ಷ ಟನ್ ಆಮದು ನಿರೀಕ್ಷೆ

ಐದು ಲಕ್ಷ ಟನ್ ಆಮದು ನಿರೀಕ್ಷೆ

ಆ ವ್ಯಾಪಾರಿ ಪ್ರಕಾರ, ಆಫ್ರಿಕಾ ದೇಶದಿಂದ ಅಗತ್ಯ ಬೇಳೆ ಕಾಳುಗಳನ್ನು 5ಲಕ್ಷ ಟನ್‌ಗಳಷ್ಟು ಆಮದನ್ನು ನಿರೀಕ್ಷಿಸಿದ್ದೇವೆ. ಅದು ಈ ತಿಂಗಳ ಅಂತ್ಯ ಇಲ್ಲವೇ ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ನಿರೀಕ್ಷೆ ಇದೆ. ಅತಿವೃಷ್ಟಿಯಿಂದ ಉದ್ದಿನ ಬೇಳೆ ಬೆಳೆ ಹೆಚ್ಚು ಹಾಳಾಗಿದೆ. ಹೀಗದ್ದರೂ ಆಮದು ನಿರೀಕ್ಷೆ ಹೆಚ್ಚಿರುವ ಕಾರಣ ಪೂರೈಕೆಗೆ ಹೊಡೆತ ಬೀಳುವ ಪರಿಸ್ಥಿತಿ ಇಲ್ಲ. ಆದರೆ ಬೆಲೆ ತುಸು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಎಂಪಿ,ಯುಪಿಯಲ್ಲಿ ಉದ್ದಿನ ಬೇಳೆ ಬೆಳೆ ಉತ್ತಮ

ಎಂಪಿ,ಯುಪಿಯಲ್ಲಿ ಉದ್ದಿನ ಬೇಳೆ ಬೆಳೆ ಉತ್ತಮ

ಫೋರ್ ಪಿ ಇಂಟರ್‌ನ್ಯಾಷನಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಮೂರ್ತಿ ಎಂಬುವವರು, "ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ರಾಜ್ಯಗಳಲ್ಲಿ ಉದ್ದಿನ ಬೇಳೆ ಬೆಳೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯವಾದ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯದಲ್ಲಿ ಉದ್ದಿನ ಬೇಳೆ ಬೆಳೆ ಉತ್ತಮ ಸ್ಥಿತಿಯಲ್ಲಿದೆ," ಎಂದು ಹೇಳಿದರು.

ಅಲ್ಲದೇ ಮಳೆ ಹಾನಿಯ ಹೊರತಾಗಿಯೂ, ದೇಶ (ಮ್ಯಾನ್ಮಾರ್‌) ನಿಂದ ಆಮದು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ಉದ್ದಿನೆ ಬೇಳೆಗಳ ಬೆಳೆ ಕೆಲವು ಭಾಗದಲ್ಲಿ ಹೆಚ್ಚಾಗುವುದು ಅನುಮಾನ ಎನ್ನಲಾಗಿದೆ ಎಂದು ಕೃಷ್ಣಮೂರ್ತಿ ಹೇಳಿದರು.

ಭಾರತ ದೇಶ ಕರೆನ್ಸಿ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ಮ್ಯಾನ್ಮಾರ್‌ ನಿಂದ ಉದ್ದಿನ ಬೇಳೆಯನ್ನು ಆಮದು ಮಾಡಿಕೊಂಡಿಲ್ಲ. ಇದು ಸಹ ಸದ್ಯದ ಬೆಲೆ ಏರಿಕೆ ಆತಂಕಕ್ಕೆ ಕಾರಣವಾಗಿದೆ. ದೇಶ ಅರ್ಧದಷ್ಟು ಉದ್ದಿನ ಬೇಳೆ ಆಮದನ್ನು ಕಡಿಮೆ ಮಾಡಿತ್ತು. ಇದೀಗ ಮತ್ತೆ ಆಮದು ಹೆಚ್ಚಾಗುವ ಸಾಧ್ಯತೆ ಇದೆ.

ಮಸೂರ್ ಬೇಳೆ ಸಾಮಾನ್ಯ ದರಕ್ಕೆ ಮಾರಾಟ

ಮಸೂರ್ ಬೇಳೆ ಸಾಮಾನ್ಯ ದರಕ್ಕೆ ಮಾರಾಟ

ಕಳೆದ ಒಂದು ವರ್ಷದಿಂದ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದ ಮಸೂರ್ ಬೇಳೆ ಬೆಲೆ ಕಡಿಮೆಯಾಗುವ ಮೂಲಕ ಗ್ರಾಹಕರಲ್ಲಿ ಮಂದಹಾಸ ಮೂಡಿಸಿದೆ. ಆಮದು ಆಗಿದ್ದ ಉದ್ದಿನಬೇಳೆ ಬೆಲೆ ಕಳೆದ ಜೂನ್ 29ರಂದು ಕೇಜಿಗೆ 71.50ರೂ. ಇದ್ದದ್ದು ಆಗಸ್ಟ್ 8ರ ವೇಳೆಗೆ 67ರೂ.ಗೆ ಕುಸಿದಿದೆ. ಕೆನಡಾದಲ್ಲಿ ಇದೀಗ ಮಸೂರ್ ಬೆಳೆಯನ್ನು ಕೊಯ್ಲು ಮಾಡುತ್ತಿದೆ. ಈ ಮಸೂರ್ ಬೇಳೆಯನ್ನು ಭಾರತ ಕಳೆದ ವರ್ಷಕ್ಕಿಂತಲೂ ಶೇ. 40ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ ಎಂದ ಕೃಷ್ಣಮೂರ್ತಿ ವಿವರಿಸಿದರು.

ಮಸೂರ್ ಬೇಳೆ ಬಳಕೆ ಹೆಚ್ಚಾಗುವ ನಿರೀಕ್ಷೆ

ಮಸೂರ್ ಬೇಳೆ ಬಳಕೆ ಹೆಚ್ಚಾಗುವ ನಿರೀಕ್ಷೆ

ಹೆಚ್ಚು ಬೆಲೆ ಇದ್ದ ಪರಿಣಾಮ ಮಸೂರ್ ಬೇಳೆಗೆ ಬೇಡಿಕೆ ಇರಲಿಲ್ಲ. ಆದರೆ ಇದೀಗ ತೊಗರಿ ಬೇಳೆ, ಉದ್ದಿನೆ ಬೇಳೆಗೆ ಅಧಿಕ ಬೆಲೆ ಹೆಚ್ಚಾಗಿದ್ದ ನಡುವೆ ಮಸೂರ್ ಬೇಳೆ ಸಾಮಾನ್ಯ ಬೇಲೆಗೆ ಲಭ್ಯವಾಗುತ್ತಿದೆ. ಇದರಿಂದ ಈ ಭಾರಿ ಮಸೂರ್ ಬೇಳೆಗೆ ಬೇಡಿಕೆ ಮತ್ತು ಬಳಕೆ ಹೆಚ್ಚಾಗುವ ನಿರೀಕ್ಷೆ ಎನ್ನಲಾಗಿದೆ.

Recommended Video

Modi Declared Total Income and Assets: ಕಳೆದ ವರ್ಷಕ್ಕಿಂತ 84 ಲಕ್ಷ ಆಸ್ತಿ ಕಳೆದುಕೊಂಡ ಮೋದಿ *India |OneIndia

English summary
15% increase in the price of Tur dal and urad dal in Last one and half month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X