
ಬೆಳಗಾವಿ ಸಮ್ಮೇಳನದ ಮರೆಯದ ಚಿತ್ರಗಳು
ಬೆಳಗಾವಿಯ ಸುತ್ತಲಿನ ಏಳೆಂಟು ಹಳ್ಳಿಗಳಿಂದ ಕನ್ನಡ ಪ್ರೇಮಿಗಳು ಸಂಸಾರ ಸಮೇತರಾಗಿ ಬಂದು ಕನ್ನಡ ಸವಿನುಡಿಯನ್ನು ಉಂಡು ಹೋಗಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಿಂದ ಜನಜಂಗುಳಿ ಅಲ್ಲಿ ನೆರೆದಿತ್ತು. ದೂರದ ಮುಂಬೈ, ಚೆನ್ನೈ, ದೆಹಲಿ, ಕೊಲ್ಕತಾದಿಂದಲೂ ಕನ್ನಡದ ಬಾವುಟ ಹಿಡಿದು ನಗುಮೊಗದ ಮಂದಿ ಹಾಜರಾಗಿದ್ದರು. ಬಹುದೂರದ ಅಮೆರಿಕ, ಸಿಂಗಪುರ, ಲಂಡನ್, ಕೊಲ್ಲಿ ರಾಷ್ಟ್ರಗಳಿಂದಲೂ ಕನ್ನಡಿಗರು ಬಂದು ವಿಶ್ವ ಕನ್ನಡಿಗರ ಉಭಯ ಕುಶಲೋಪರಿ ವಿಚಾರಿಸಿಕೊಂಡು ಕುಂದಾ ಕೈಯಲ್ಲಿ ಹಿಡಿದು ತಮ್ಮ ಊರು ಸೇರಿದರು.
ಇನ್ಫೋಸಿಸ್ ರಾಜಗುರು ನಾರಾಯಣ ಮೂರ್ತಿ ಬಂದು ಸಮ್ಮೇಳನ ಉದ್ಘಾಟಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರು ದಿನ ಅಲ್ಲೇ ಠಿಕಾಣಿ ಹೂಡಿದ್ದರು. ಐದು ದಿನ ರಜಾ ಹಾಕಿ ಬಂದಿದ್ದ ಕನ್ನಡ ಚಿತ್ರ ನಟನಟಿಯರು ಲಕ್ಷಾನುಲಕ್ಷ ಜನರನ್ನು ಕುಣಿಸಿ ಹೋದರು. ಗೋಷ್ಠಿಗಳಾದವು, ಮಕ್ಕಳು ಹಾಡಿ ಕುಣಿದು ನಲಿದಾಡಿದರು. ಇಡೀ ನಾಡಿ ವೈವಿಧ್ಯಮಯ ಪರಂಪರೆ, ಸಂಸ್ಕೃತಿ, ಪ್ರತಿಭೆ ಮೂರು ದಿನಗಳ ಕಾಲ ಅನಾವರಣಗೊಂಡಿತು. ಇನ್ನು ಕನ್ನಡ ನಾಡನ್ನು ಮೆರೆದಾಡಿಸಿದ ಮೆರವಣಿಗೆಯನ್ನು ಕೇಳುವುದೇ ಬೇಡ. ಅಲ್ಲಿ ಏನಿರಲಿಲ್ಲ?
ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟಕರು ನಾಚಿಕೆ ಪಟ್ಟುಕೊಳ್ಳುವಂತೆ ಬೆಳಗಾವಿ ಸಮ್ಮೇಳನದ ಸಂಘಟಕರು ನೆರೆದ ಲಕ್ಷಾಂತರ ಜನರಿಗೆ ಉಣಬಡಿಸಿದ್ದಾರೆ. ಬೆಳಗಾವಿಗರು ಎಂದೂ ಮರೆಯದಂತೆ ಊರು ಸಿಂಗಾರ ಮಾಡಲಾಗಿತ್ತು. ನಾನಾ ಕಡೆ ಪ್ರದರ್ಶನಗಳು ಮನಸೂರೆಗೊಂಡವು. ಅಲ್ಲಲ್ಲಿ ಗೊಂದಲ, ದೊಂಬಿಗಳಾದರೂ ಊರ ಮಂದಿ ಕಿಟಿಕಿಟಿ ಮಾಡಲಿಲ್ಲ, ಮರಾಠಿಗರು ಮನೆ ಬಿಟ್ಟು ಹೊರಬರಲೇ ಇಲ್ಲ. ಆದರೆ, ಆಹ್ವಾನಿತರಾದ ಹಲವರು ವ್ಯವಸ್ಥೆಯ ಕುರಿತು ಪಿಟಿಪಿಟಿ ಅನ್ನುವುದು ಬಿಡಲಿಲ್ಲ.
ಸಮ್ಮೇಳನದ ಯಶಸ್ಸು, ಅಪಯಶಸ್ಸು ಹೇಗೇ ಇರಲಿ, ಬಹುಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಚಿತ್ರಗಳನ್ನು ಬಿಟ್ಟು ಹಿಂದೆ ಸಾಗಿದೆ. ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತೆ ಅಂತಾರೆ. ಮದುವೆ, ಮುಂಜಿ, ಹುಟ್ಟುಹಬ್ಬ ಯಾವುದೇ ಇರಲಿ ಕಾರ್ಯಕ್ರಮ ಮುಗಿದ ನಂತರ ಮನೆಗೆ ಬಂದು ನೋಡುವುದು ಫೋಟೋ ಗ್ಯಾಲರಿನೇ ಅಲ್ಲವೆ? ಅದಕ್ಕಾಗಿ ಚಿತ್ರಗಳ ಮೆರವಣಿಗೆಯನ್ನು ನಿಮಗಾಗಿ ನಾವು ತಂದಿದ್ದೇವೆ. ಮೂರು ದಿನಗಳ ಸಮ್ಮೇಳನವನ್ನು ಕಣ್ತುಂಬಿಕೊಳ್ಳಿ.
* ನೂರು ಕಣ್ಣು ಸಾಲದು ಈ ಮೆರವಣಿಗೆಯ ನೋಡಲು
* ಹೊರನಾಡ ಕನ್ನಡಿಗರ ಆಸೆ ನಿರಾಸೆ ತೆರೆದಿಟ್ಟ ಸಂವಾದ
* ಕನ್ನಡ ಚಲನಚಿತ್ರ ಕಲಾವಿದರ ರುದ್ರ ತಾಂಡವ
* ಅಬಾಬಾಬಾ ಏನ್ ಮಂದೀಪಾ ಅಂತೀನಿ!
* ಎಸ್ಪಿಬಿ ಹಾಡಿನ ಮೋಡಿಗೆ ಜನ ಮರುಳೋ ಮರುಳು
* ಅಮೆರಿಕಾದಿಂದ ಯಾರ್ಯಾರು ಬಂದಿದ್ದರು ಗೊತ್ತಾ?
* ಸಮ್ಮೇಳನ ಉದ್ಘಾಟನಾ ಸಮಾರಂಭದ ಚಿತ್ರಗಳು
* ಐಶ್ವರ್ಯ ರೈ ಬಚ್ಚನ್ ಜೊತೆ ಮಾತಾಡ್ತಿರೋದು ಯಾರು?
* ಭವ್ಯ ಮೆರವಣಿಗೆಯಲ್ಲಿ ಕಂಡ ಮತ್ತಷ್ಟು ಚಿತ್ರಗಳು
* ಅಣ್ಣಾವ್ರೂ ಇದ್ರು, ಸಾಹಸಸಿಂಹ ಕೂಡ ಬಂದಿದ್ರು
* ಬೆಂಗಳೂರಿಂದ ಬಂದ ಕನ್ನಡ ಟೋಪಿ ಮಾರಿದ
* ಸಮ್ಮೇಳನವನ್ನು ನಿಜವಾಗಿ ಮೆರೆಸಿದ್ದು ಶಾಲಾ ಮಕ್ಕಳು
* ಈ ಅಡುಗೆ ಭಟ್ಟರನ್ನು ಮರೆತರೆ ಶಾಪ ತಟ್ಟೀತು!