ಕೈಕೆಸರಾದರೆ ಬಾಯಿಮೊಸರು : ಇನ್ಫಿ ಮೂರ್ತಿ

ಬೆಳಗಾವಿ, ಮಾ. 11 : "ಬಡತನದ ರೇಖೆಯನ್ನು ಅಳಿಸಲು ನಾನು ನಮ್ಮ ಇಂದಿನ ಜನಾಂಗಕ್ಕೆ ಕೇಳಿಕೊಳ್ಳುತ್ತೇನೆ. ನಾನು ಅಸ್ತಮಿಸುತ್ತಿರುವ ಸೂರ್ಯ. ನೀವೇ ನಮ್ಮ ದೇಶದ ಸಂಪತ್ತು, ಭವಿಷ್ಯ ಮತ್ತು ಉದಯಿಸುತ್ತಿರುವ ಸೂರ್ಯ. ನೀವು ಮುಂದೆ ಬರಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ವಿವೇಚನೆಯಿಂದ, ನಿಷ್ಠೆಯಿಂದ, ಪರಿಶ್ರಮದಿಂದ ಕೆಲಸ ಮಾಡಬೇಕು. ನೀವು ಹಣದ ಹಿಂದೆ ಓಡಿದರೆ, ಹಣ ನಿಮ್ಮಿಂದ ದೂರ ಓಡುತ್ತದೆ. ಮೊದಲು ನೀವು ಕೆಲಸ ಕಲಿಯಬೇಕು. ಕೆಲಸವನ್ನು ಪ್ರೀತಿಸಬೇಕು."

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನವನ್ನು ಶುಕ್ರವಾರ ಸಂಜೆ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಎನ್ಆರ್ ನಾರಾಯಣ ಮೂರ್ತಿ ಈ ಮೇಲಿನಂತೆ ಕನ್ನಡ ನಾಡಿನ ಯುವಕ, ಯುವತಿಯರಿಗೆ ಸಂದೇಶ ರವಾನಿಸಿದರು.

"ನೀವೇ ಸ್ವತಃ ಉದ್ದಿಮೆದಾರರಾದರೆ ಅನೇಕ ಹೊಸ ಕೆಲಸದ ಅವಕಾಶಗಳು ತಾನಾಗಿಯೇ ಬಾಯಿ ತೆರೆಯುತ್ತವೆ. ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದರಿಂದ ನಾವು ಬಡತನವನ್ನು ಹೊಡೆದೋಡಿಸಬಹುದು. ಹೊಸಹೊಸ ಸವಾಲುಗಳಿಗೆ ಆಹ್ವಾನ ನೀಡಬೇಕು. ಮುಗ್ಗಟ್ಟುಗಳನ್ನು ಎದುರಿಸಿ ನಿಂತುಕೊಳ್ಳಬೇಕು. ಆದರೆ, ನೀವು ಕನ್ನಡಿಗರಾಗಿಯೇ ಇರಬೇಕು. ಉನ್ನತ ಧ್ಯೆಯೋಧ್ಯೇಶಗಳನ್ನು ಇರಿಸಿಕೊಂಡು, ಉದಾರ ದೃಷ್ಟಿಯುಳ್ಳವರಾಗಿ, ನಿಸ್ವಾರ್ಥ ಮತ್ತು ತ್ಯಾಗ ಗುಣಗಳಿಂದ ದುಡಿದರೆ ಅಭಿವೃದ್ಧಿ ಖಂಡಿತ ಸಾಧ್ಯ. ಇದನ್ನು ನನ್ನ ಬಾಳಿನ ಅನುಭವದಲ್ಲಿ ಕಲಿತಿದ್ದೇನೆ" ಎಂದು ಮೂರ್ತಿ ಹೇಳಿದರು.

ನಾಲ್ಕು ಪುಟಗಳ ಮುದ್ರಿತ ಕನ್ನಡ ಭಾಷಣವನ್ನು ಅವರು ಒಪ್ಪವಾಗಿ, ಸ್ಪಷ್ಟವಾಗಿ ಓದಿದರು. ಮಾತಿನ ಮಧ್ಯೆ ನಾನೊಬ್ಬ ಕನ್ನಡಿಗ ಎನ್ನುವುದನ್ನು ಸ್ಪಷ್ಟಪಡಿಸುವ ನಾಕಾರು ಉದಾಹರಣೆಗಳನ್ನು ಕೊಟ್ಟರು.

1. ಪ್ರಪಂಚವೆಲ್ಲ ಸುತ್ತಿ ಅದ್ಭುತವಾದ ಆದರಾತಿಥ್ಯಗಳನ್ನು ಸ್ವೀಕರಿಸಿದರೂ ನನಗೆ ನನ್ನ ಬೆಂಗಳೂರಿನ ಮನೆಯ ಕಾಫಿ ಕುಡಿದಾಗಲೇ ಸಮಾಧಾನ.

2. ನನಗೆ ಬೆಳಗಾವಿ ಚಿರಪರಿಚಿತ. ನಾನು ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿ ಬೆಳೆದವನಾದರೂ ಉತ್ತರ ಕರ್ನಾಟಕದ ಅಳಿಯ. (ಸುಧಾ ಮೂರ್ತಿ ಅವರ ತವರು ಹುಬ್ಬಳ್ಳಿ.)

3. ಇಂಗ್ಲಿಷ್ ನನ್ನ ವ್ಯವಹಾರಿಕ ಭಾಷೆ. ಆದರೆ, ಕನ್ನಡ ನನ್ನ ಮನೆ ಮತ್ತು ಹೃದಯದ ಭಾಷೆ.

4. ನನಗೆ ಕಾಲವೇನಾದರೂ ಎದುರಿಗೆ ನಿಂತು ಮತ್ತೆ ಏನು ಬೇಕು ಅಂದರೆ, "ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುಪುದು ಕರ್ನಾಟ ದೇಶದೊಳ್" ಎನ್ನುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+