ಬೆಳಗಾವಿ ಬಸ್ ಹತ್ತಿದ ಕನ್ನಡ ಸಿನಿಮಾ ತಾರೆಗಳು

ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರೆಲ್ಲಾ ಸೇರಿ ಒಟ್ಟು 30 ಬಸ್‌ಗಳಲ್ಲಿ ಗುರುವಾರ(ಮಾ.10) ಬೆಳಗಾವಿಗೆ ಹೊರಡುತ್ತ್ತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಬಸ್‌ಗಳು ಬೆಳಗಾವಿಗೆ ಪ್ರಯಾಣ ಬೆಳಸಿವೆ. ಸಂಜೆ ವೇಳೆಗೆ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಬೆಳಗಾವಿ ತಲುಪುತ್ತೇವೆ ಎಂದು ಬಸಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ನಡೆಯಲಿರುವ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಭಾಗವಹಿಸಲಿದ್ದಾರೆ. ಹಿರಿಯ ಹಾಗೂ ಮಹಿಳಾ ಕಲಾವಿದರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಉದ್ಘಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ ಬಸಂತ್.
ಸಂಗೀತ ನಿರ್ದೇಶಕ ಹಂಸಲೇಖ ಸಂಯೋಜಿಸಿರುವ "ನಮ್ಮ ಅಭಿಮಾನ" ಹಾಗೂ "ಚಂದನ ವನ" ಕಾರ್ಯಕ್ರಮಗಳು ಸಭಿಕರನ್ನು ಮಂತ್ರಮುಗ್ಧಗೊಳಿಸಲಿವೆ. ಈ ಕಾರ್ಯಕ್ರಮದಲ್ಲಿ ಸರಿಸುಮಾರು 350 ಕಲಾವಿದರು ಭಾಗವಹಿಸುತ್ತಿದ್ದಾರೆ. ಈಗಾಗಲೆ ಇವರೆಲ್ಲಾ ರಾಕ್ ಲೈನ್ ಸ್ಟುಡಿಯೋದಲ್ಲಿ ತಾಲೀಮು ನಡೆಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಂಸಲೇಖ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿರುವುದಾಗಿ ಬಸಂತ್ ತಿಳಿಸಿದರು.












Click it and Unblock the Notifications