ಯಾರ್ರೀ ಬೆಳಗಾವಿ, ರೈಟ್ ರೈಟ್ ! ಕನ್ನಡಿಗರಿಗೆ ವಿಶೇಷ ಪ್ರಯಾಣ
ಬೆಂಗಳೂರು,
ಮಾ. 8: ಬೆಳಗಾವಿಯಲ್ಲಿ ಮಾರ್ಚ್ 11ರಿಂದ ಜರುಗಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ವಿಶೇಷ ಬಸ್, ವಿಮಾನ ಮತ್ತು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಮ್ಮೇಳನದ ವಿಶೇಷಾಧಿಕಾರಿ ಐ ಎಂ ವಿಠ್ಠಲಮೂರ್ತಿ ತಿಳಿಸಿದ್ದಾರೆ. ವಿಶೇಷ ವಿಮಾನವು ಮಾರ್ಚ್ 11ರಂದು ಬೆಳಗ್ಗೆ 10.40ಕ್ಕೆ ಬೆಂಗಳೂರಿನಿಂದ ಹೊರಟು ಮಧ್ನಾಹ್ನ 12.10ಕ್ಕೆ ಬೆಳಗಾವಿ ತಲುಪಲಿದೆ. ಮಾರ್ಚ್ 13ರಂದು ರಾತ್ರಿ 8.50ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.30ಕ್ಕೆ ಬೆಂಗಳೂರು ಸೇರಲಿದೆ. id="toptextpromo">ವಿಶೇಷ
ರೈಲು ಮಾರ್ಚ್ 10ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಮಾರ್ಚ್ 11ರಂದು ಬೆಳಗ್ಗೆ 8 ಗಂಟೆಗೆ ಬೆಳಗಾವಿ ತಲುಪಲಿದೆ. ಮಾರ್ಚ್ 13ರಂದು ರಾತ್ರಿ 9.30ಕ್ಕೆ ಬೆಳಗಾವಿ ಬಿಡಲಿರುವ ರೈಲು 14ರ ಬೆಳಗ್ಗೆ ಬೆಂಗಳೂರು ಸೇರಲಿದೆ. ಎರಡನೇ ಶ್ರೇಣಿಯ, ಮೂರನೇ ಶ್ರೇಣಿಯ ಬೋಗಿಗಳು ಮತ್ತು ಸಾಮಾನ್ಯ ದರ್ಜೆ ಬೋಗಿಗಳು ಸೇರಿದಂತೆ 18 ಬೋಗಿಗಳನ್ನು ಈ ವಿಶೇಷ ರೈಲು ಒಳಗೊಂಡಿರುತ್ತದೆ. id='are-slot-1' class='oiad oi-axt oiadv'> id='top-searched-articles'>ಶೇ.
30 ರಿಯಾಯಿತಿ: ವಿಶೇಷ ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣಿಸುವ ವಿಶ್ವ ಕನ್ನಡ ಸಮ್ಮೇಳನದ ನೋಂದಾಯಿತ ಪ್ರತಿನಿಧಿಗಳಿಗೆ ರಾಜ್ಯ ಸರಕಾರ ರೈಲಿನ ಎಲ್ಲ ದರ್ಜೆಯ ಪ್ರಯಾಣ ದರದಲ್ಲಿ ಶೇ. 30ರಷ್ಟು ರಿಯಾಯಿತಿ ಪ್ರಕಟಿಸಿದೆ. ಟಿಕೆಟ್ ಗಳನ್ನು ಬೆಂಗಳೂರಿನ ಕಾರ್ಪೊರೇಶನ್ ವೃತ್ತದಲ್ಲಿರುವ ಬಾದಾಮಿ ಹೌಸ್ ನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ಕಾಯ್ದಿರಿಸಬಹುದು. ದೂರವಾಣಿ: 080- 4334 4334/ 4346 4346.











Click it and Unblock the Notifications