ಇತ್ತ ಅವ್ಯವಸ್ಥೆ, ಆಕ್ರೋಶ ಅತ್ತ ಸಿನಿ ತಾರೆಯರ ಸಂಭ್ರಮ

ಪ್ರಧಾನ ವೇದಿಕೆಯಿರುವ ನ್ಯಾಷನಲ್ ಕಾಲೇಜಿನ ಬಳಿ ಸಾಕಷ್ಟು ಅವ್ಯವಸ್ಥೆಯನ್ನು ವಿರೋಧಿಸಿ, ಈ ಪ್ರತಿಭಟನೆ ನಡೆದಿದೆ. ಮುಖ್ಯ ವೇದಿಕೆ ಬಳಿ ಸಾಕಷ್ಟು ಬಿಗಿ ಭದ್ರತೆ ಹಾಕಲಾಗಿದೆ.
ಈ ಮಧ್ಯೆ, ಸಮ್ಮೇಳಾನಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಮೆರವಣಿಗೆ ಕಾರ್ಪೊರೇಶನ್‌ನಿಂದ ವೈಭವಯುತವಾಗಿ ನಡೆದಿದ್ದರೆ ಇತ್ತ ಕನ್ನಡ ಚಿತ್ರೋದ್ಯಮದ ದಂಡು ಫ್ರೀಡಂ ಪಾರ್ಕ್‌ನಿಂದ ಸಾವಕಾಶವಾಗಿ ಸಾಗಿದೆ.
ಬಹುತೇಕ ಎಲ್ಲ ಹಿರಿಯ, ಕಿರಿಯ ಕಲಾವಿದರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಇದು ವಿಶೇಷ ಮೆರುಗು ನೀಡಿದೆ. ಈ ಕಲಾವಿದರೆಲ್ಲ ಮೆರವಣಿಗೆಯಲ್ಲಿ ಬಂದು ನ್ಯಾಷನಲ್ ಕಾಲೇಜಿನಲ್ಲಿ ಜಮಾಯಿಸಲಿದ್ದಾರೆ. ಅದೇ ವೇಳೆಗೆ ಸಮ್ಮೇಳಾನಧ್ಯಕ್ಷ ಪ್ರೊ. ಗಂಜಾಂ ವೆಂಕಟಸುಬ್ಬಯ್ಯ ಅವರ ಮೆರವಣಿಗೆಯೂ ಅಲ್ಲಿ ಸೇರಲಿದೆ.
ಪ್ರಮುಖವಾಗಿ ರಾಜ್ ಕುಟುಂಬದ ತ್ರಿವಳಿ ತಾರೆಯರು, ಹಿರಿಯರಾದ ಹಂಸಲೇಖ, ಬಸಂತ್‌ಕುಮಾರ್ ಪಾಟೀಲ್, ಜಯಂತಿ, ಅನುಪ್ರಭಾಕರ್, ನಿರ್ಮಾಪಕ ಮಂಜು, ಗೋಲ್ಡನ್ ಸ್ಟಾರ್ ಗಣೇಶ್, ಪ್ರೇಮ್, ದುನಿಯಾ ವಿಜಯ್ ಮುಂತಾದ ಕಲಾವಿದರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿದ್ದಾರೆ.












Click it and Unblock the Notifications