ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ

ಚಿತ್ರದುರ್ಗದ ಹಳೆ ತಲೆಗಳಿಗೆ ಚಿರಪರಿಚಿತವಾದ ಹೆಸರು ಲಕ್ಷ್ಮಿಭವನ(ಕೆಫೆ) ಹಾಗೂ ಮೈಸೂರು ಕೆಫೆ. ನಗರದ ಐತಿಹಾಸಿಕ ದ್ವಾರ ರಂಗಯ್ಯನ ಬಾಗಿಲ ಬಳಿ ಇರುವ ದೊಡ್ಡಪೇಟೆಯಲ್ಲಿರುವ ಈ ಕೆಫೆ ಹೊಕ್ಕ ನಮಗೆ ಬೆಂಗಳೂರಿನ ಬಸವನಗುಡಿಯ ದ್ವಾರಕ, ಹನುಮಂತನಗರದ ಮಂಗಳ ಹೋಟೆಲ್ ಗಳ ನೆನಪು ಬರುತ್ತದೆ. ಅದೇ ಹಳೆ ಕಾಲದ ಮರದ ಕುರ್ಚಿಗಳು, ಪಾದರಸ ಆತ್ತಿತ್ತ ಅಲುಗಾಡದ ದೊಡ್ಡ ಗಾಜಿನ ಕನ್ನಡಿ, ಗಲ್ಲಾ(ಮ್ಯಾನೇಜರ್ ಕಮ್ ಕ್ಯಾಷಿಯರ್)ಪೆಟ್ಟಿಗೆಯ ಮೇಲೆ ಕುಳಿತ ನಗು ಮುಖದ ವ್ಯಕ್ತಿಯನ್ನು ಮರೆಯಲು ಸಾಧ್ಯವಿಲ್ಲ. ಈ ರೀತಿಯ ಒಂದು ಸವಿನೆನಪು ಅಲ್ಲಿ ಹೋದವರಿಗೆಲ್ಲಾ ಆಗೇ ಆಗುತ್ತದೆ.
ಬೆಂಗಳೂರಿನ ದ್ವಾರಕದಂತೆ ಇಲ್ಲೂ ಕೂಡ ಖಾಲಿ ದೋಸೆ ಫೇಮಸ್. ಪ್ಲೇಟ್ ಖಾಲಿ ದೋಸೆಗೆ 12ರು ಜೊತೆಗೆ ಹಿಡಿ ಮುಷ್ಟಿಯಷ್ಟು ಬೆಣ್ಣೆ ಹಾಕಿಕೊಂಡು ತಿಂಡವರೆ ಬಲ್ಲರು ಅದರ ಸವಿಯನ್ನು. ಸುಮಾರು 1946ರಲ್ಲಿ ಪ್ರಾರಂಭವಾದ ಮೈಸೂರ್ ಕೆಫೆ ನಮ್ಮ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅಚ್ಚುಮೆಚ್ಚಿನ ಉಪಹಾರ ಕೇಂದ್ರವಾಗಿತ್ತು. ಮೈಸೂರು ಕೆಫೆ ಹಾಗೂ ಲಕ್ಷ್ಮಿ ಭವನ ಸರಿ ಸುಮಾರು ಒಂದೆರಡು ವರ್ಷಗಳ ವ್ಯತ್ಯಾಸದಲ್ಲಿ ಪ್ರಾರಂಭವಾದ ಅನ್ನಪೂರ್ಣ ನಿಲಯಗಳು.

ಲಕ್ಷ್ಮಿ ಕೆಫೆಯ ಸದಾಶಿವರಾಯ ನಮಗೂ ಮಾರ್ಗದರ್ಶಕರು, ಅವರದ್ದು ನಮ್ಮದೂ ಒಂದೇ ಬಗೆಯ ಕೆಫೆ ಆದರೂ ಅವರನ್ನು ನೋಡಿ ಕಲಿತಿದ್ದು ಬಹಳ ಇದೆ. ಮಂಗಳೂರು, ಬೆಂಗಳೂರು ಕಡೆಯ ಹೋಟೆಲ್ ಸಂಸ್ಕೃತಿಗಿಂತ ಈ ಕಡೆಯ ಸಂಸ್ಕೃತಿ ವಿಭಿನ್ನ. ಅದರೂ ಅಚ್ಚುಕಟ್ಟುತನ, ಪರಂಪರೆ ಉಳಿಸಿಕೊಂಡು ಬರುವಲ್ಲಿ ದುರ್ಗದ ಜನರು ಯಾರಿಗೇನೂ ಕಮ್ಮಿಯಿಲ್ಲ ಎನ್ನುತ್ತಾರೆ ವೇದವ್ಯಾಸಾಚಾರ್ಯ.
ಕೋಟೆಯ ಹಾದಿಯಲ್ಲಿ ಸಿಗುವ ಉತ್ತಮ ಹೋಟೆಲ್ ಗೆ ಒಮ್ಮೆ ಭೇಟಿ ನೀಡಿ, ಅಲ್ಲಿನ ಖಾಲಿ ದೋಸೆಯ ಸವಿಯನ್ನು ಸವಿಯುವುದನ್ನು ಮರೆಯಬೇಡಿ. ಇನ್ನೊಂದು ವಿಷ್ಯ. ಕೋಟೆ ಹತ್ತುವ ಮೊದಲು ಖಾಲಿ ಹೊಟ್ಟೆ ಇರಲಿ. ಕೋಟೆಯಿಂದ ಇಳಿದ ನಂತರ ಕೆಫೆಗೆ ಭೇಟಿ ಕೊಟ್ಟು, ಹೊಟ್ಟೆ ತುಂಬಿಸಿಕೊಳ್ಳಿ.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಚಿತ್ರಗಳು
ಮುಗಿಯಿತು ಬಿಸಿಲುಮಳೆ ಜಾತ್ರೆಯಲ್ಲಿ ಧೂಳಹೊಳೆ
ನಾಗರಹಾವು, ದುರ್ಗಾಸ್ತಮಾನಕ್ಕೆ ಭಾರೀ ಬೇಡಿಕೆ












Click it and Unblock the Notifications