ಸಮ್ಮೇಳನಾಧ್ಯಕ್ಷರಿಗೆ ತರಳಬಾಳು ಶ್ರೀಗಳ ತಿರುಗೇಟು

ಚಿತ್ರದುರ್ಗ, ಫೆ. 6 : ಸಾಹಿತ್ಯ ಸಮ್ಮೇಳನಕ್ಕೆ ಮಠಾಧೀಶರು ಬರುವುದು ಬೇಡ ಎಂದು ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೋ ಎಲ್ ಬವಸರಾಜು ಅವರು ಹೇಳುವುದಾದರೆ, ಚಿತ್ರದುರ್ಗದಲ್ಲಿ ಮಠಾಧೀಶರುಗಳೇ ಸಮ್ಮೇಳನ ಸಂಘಟಿಸುತ್ತಿದ್ದಾರೆ ಎಂದ ಮೇಲೂ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾದರೂ ಏಕೆ ? ಆ ಸ್ಥಾನವನ್ನು ತಿರಸ್ಕರಿಸಿ ಮೈಸೂರಿನಲ್ಲಿಯೇ ಇರಬಹುದಾಗಿತ್ತು. ಇಲ್ಲಿಗೆ ಬರಬಾರದಿತ್ತು ಎಂದು ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಸವರಾಜು ಅವರು ಮಠಾಧೀಶರು ನಮ್ಮ ಶತ್ರು ಎಂದು ಏಕೆ ಮಾತನಾಡಿದ್ದರೋ ನನಗೆ ಗೊತ್ತಿಲ್ಲ. ಸಾಹಿತಿಗಳು ಒಂದು ಸ್ಥಾನಮಾನ ಪಡೆದಿದ್ದರೆ ಅದು ಮಠಾಧೀಶರು ನಡೆಸುತ್ತಿರುವ ಶಾಲೆ, ಕಾಲೇಜಿಗಳಿಂದ, ಬಸವರಾಜು ಬಿಸಿರಕ್ತದ ಯುವಕರಾಗಿದ್ದಾಗ ಈ ಹೇಳಿಕೆ ನೀಡಿದ್ದರೆ ಸೂಕ್ತ ಇತ್ತು ಎಂದರು. ಬಸವರಾಜು ಅವರಿಗೆ ಮಠಗಳು ಶತ್ರುಗಳಾಗಿದ್ದರೆ, ಅವರು ರಚಿಸಿರುವ ಕೃತಿಯನ್ನು ಚಿತ್ರದುರ್ಗದ ಬೃಹನ್ಮಠದಿಂದ ಪ್ರಕಟಿಸಿದಾದರೂ ಏಕೆ ? ಅವರ ಶಬ್ಧಮಣಿ ದರ್ಪಣ, ಶೂನ್ಯ ಸಂಪಾದನೆ ಕೃತಿಗಳ ಬಿಡುಗಡೆಗೆ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶೀಗಳ ಕೂಡುಗೆ ಇದೆ ಎಂಬುದನ್ನು ಮರೆಯಬಾರದು ಎಂದರು.

ಪ್ರೋ ಎಲ್ ಬಸವರಾಜು ನೀಡಿರುವ ಹೇಳಿಕೆಯನ್ನು ನಾವು ನಿರ್ಲಕ್ಷಿಸುತ್ತೇವೆ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ. ಬಸವರಾಜು ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ಗೊತ್ತಿಲ್ಲ. ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಚಿತ್ರಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+