ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರ ಜಾತ್ರೆಯಲ್ಲಿ ಗಮನಸೆಳೆದ ವಿಶೇಷಗಳು,ವೈವಿಧ್ಯಗಳು

By (ಪ್ರತ್ಯಕ್ಷ ವರದಿ : ಕುಮುದ ಶೇಖರ್)
|
Google Oneindia Kannada News

ಉಡುಪಿ, ಡಿ.12 : 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ ಸಿಕ್ಕಿದೆ. ಮೊದಲ ದಿನದ ವಿಶೇಷಗಳು, ವೈವಿಧ್ಯಗಳು ಹೀಗಿವೆ ;

*ಸಾಹಿತ್ಯಾಸಕ್ತರ ಹಸಿವು ನೀಗಿಸಿದ ಗೋಧಿ ಪಾಯಸ, ಲಾಡು, ಮಜ್ಜಿಗೆ,ಅನ್ನಸಾರು ಮತ್ತಿತರ ರಸಪಾಕಗಳು.. ಸಮ್ಮೇಳನದಲ್ಲಿ ಅಚ್ಚುಕಟ್ಟಿನ ಊಟೋಪಚಾರ. ಪ್ಲಾಸ್ಟಿಕ್ ಗೆ ಊಟದ ಮನೆಯಿಂದ ಬಹಿಷ್ಕಾರ.

*ಶಾಲು, ತಿಂಡಿ ತೀರ್ಥ, ಬಟ್ಟೆ ಮಾರಾಟ. 400ಕ್ಕೂ ಅಧಿಕ ಪುಸ್ತಕ ಮಳಿಗೆಗಳಲ್ಲಿ ಖರೀದಿ ಭರಾಟೆ.

*ಸಮ್ಮೇಳನ ಮೆರವಣಿಗೆಯನ್ನು ಪುರಸಭಾಭವನದ ಎದುರು ಸಂಸದೆ ಮನೋರಮಾ ಮಧ್ವರಾಜ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಉಡುಪಿ ಕೃಷ್ಣ ಮಠದ ಆನೆಗಳು, ಕಂಬಳದ ಕೋಣಗಳು ಗಮನ ಸೆಳೆದವು.

*ಶಿವರಾಮ ಕಾರಂತ ಮಹಾಮಂಟಪದಲ್ಲಿ ಸಮ್ಮೇಳನಕ್ಕೆ ಚಾಲನೆ. ವೀರೇಂದ್ರ ಹೆಗ್ಗಡೆ ಅವರಿಂದ ಉದ್ಘಾಟನೆ. ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ದಿವ್ಯ ಸಾನಿಧ್ಯ.

*'ಮೋಹನ ಮುರಳಿ'ಸ್ಮರಣ ಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠಲ ಮೂರ್ತಿ ಲೋಕಾರ್ಪಣೆ ಮಾಡಿದರು. ವಿಶೇಷ ಅಂಚೆ ಚೀಟಿಯನ್ನು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಬಿಡುಗಡೆ ಮಾಡಿದರು.

*ಸಮ್ಮೇಳನದ ಇನ್ನೊಂದು ವಿಶೇಷ ಆಕರ್ಷಣೆಯಾದ ಕಲಾಪ್ರದರ್ಶನಕ್ಕೆ ಮಂಗಳೂರು ವಿವಿ ಕುಲಪತಿ ಕೆ.ಎಂ.ಕಾವೇರಪ್ಪ ಅವರಿಂದ ಚಾಲನೆ.

*ಇದು ರಾಷ್ಟ್ರಪತಿ ಆಡಳಿತದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ. ಹೀಗಾಗಿ ರಾಜಕಾರಣಿಗಳ ದಂಡು ಇಲ್ಲವೇ ಇಲ್ಲ. ಮಾಜಿ ಸಚಿವ ವಿ.ಎಸ್.ಆಚಾರ್ಯ, ರಘುಪತಿ ಭಟ್ ಬಿಟ್ಟರೇ ಇತರರು ಬೆರಳೆಣಿಕೆ ಮಾತ್ರ.

*ಸಮ್ಮೇಳನದ ಯಶಸ್ಸಿಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹೊಳ್ಳ ಅವರ ಸತತ ಪ್ರಯತ್ನ. ಸಮ್ಮೇಳನಕ್ಕೆ ಪ್ರಕಟಿಸಿದ್ದು 1ಕೋಟಿ, ಬಿಡುಗಡೆಯಾಗಿದ್ದು 50ಕೋಟಿ. ದುಡ್ಡುಕಾಸಿನ ತೊಂದರೆಯಿಂದ ಸಮ್ಮೇಳನಕ್ಕೆ ತೊಡಕಾಗದಂತೆ ಸ್ವಾಗತ ಸಮಿತಿ ವ್ಯವಸ್ಥೆ. 50ಲಕ್ಷದಲ್ಲೇ ಸಮ್ಮೇಳನ ಅರ್ಥಪೂರ್ಣಗೊಳಿಸಲು ಯೋಜನೆ.

*ಸಮ್ಮೇಳನ ನಡೆಯುತ್ತಿರುವ ಸ್ಥಳ ಎಂಜಿಎಂ ಕಾಲೇಜು ಮೈದಾನ ಮಾತ್ರವಲ್ಲ, ಉಡುಪಿಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಅಲ್ಲೆಲ್ಲ ಕನ್ನಡ ಧ್ವಜ.

*ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ನಿಸಾರ್ ಅಹಮದ್ ಗೈರು ಹಾಜರಿ. ಅನಾರೋಗ್ಯದ ನೆಪ ಹೇಳಿ, ಭಾಷಣವನ್ನು ಅವರು ಸಮ್ಮೇಳನಕ್ಕೆ ಕಳಿಸಿದ್ದರು.

ಸಮ್ಮೇಳನಾಧ್ಯಕ್ಷ ಎಲ್.ಎಸ್.ಶೇಷಗಿರಿ ರಾವ್ ಅವರ ಅಧ್ಯಕ್ಷ ಭಾಷಣದ ಮುಖ್ಯಾಂಶಗಳು :

*ಕೇಂದ್ರಕ್ಕೆ ತೆರಿಗೆ ಕಟ್ಟುತ್ತೇವೆ ಜೊತೆಗೆ ದೇಶ ಸೇವೆಗೆ ಕನ್ನಡಿಗರು ಎಂದಿಗೂ ಮುಂದೆ. ಹೀಗಾಗಿ ಕನ್ನಡಿಗರನ್ನು ಈ ನೆಲದಲ್ಲಿ 2ನೇ ದರ್ಜೆಯ ಪ್ರಜೆಗಳಾಗುವಂತೆ ಮಾಡಬೇಡಿ.

*ಕೇಂದ್ರ ಸರ್ಕಾರದಲ್ಲಿ 27ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರಿದ್ದಾರೆ. ಒಬ್ಬರೂ ಕನ್ನಡಿಗರಿಲ್ಲ. ಸಂಸತ್ತಿನಲ್ಲಿ ಕನ್ನಡದ ದನಿಯೇ ಇಲ್ಲ. ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಕೇಂದ್ರ ಮೀನಾಮೇಷ ನೋಡುತ್ತಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಕನ್ನಡಕ್ಕಾದ ಅನ್ಯಾಯ ವಿವರಿಸಿದರೂ , ಫಲ ಸಿಕ್ಕಿಲ್ಲ. ಇದು ಉದ್ದೇಶ ಪೂರ್ವಕ ಅನ್ಯಾಯ.

ನುಡಿಹಬ್ಬಕ್ಕೆ ಬನ್ನಿ ಹೋಗೋಣ | ಉಡುಪಿ ರಥ ಬೀದಿಯಲ್ಲಿ ಸಾಹಿತ್ಯ ಸರಸ್ವತಿಯ ತೇರು | ಕ್ಯಾಮೆರಾ ಕಣ್ಣಲ್ಲಿ ಸಾಹಿತ್ಯ ಸಮ್ಮೇಳನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X