{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/chennai/bjp-in-bid-to-get-rajinikanth-khuboo-on-board-088169.html" }, "headline": "ರಜನಿಕಾಂತ್ ಬಿಜೆಪಿಗೆ ಕರೆ ತರಲು ಇದೇ ಸಕಾಲ ", "url":"http://kannada.oneindia.com/news/chennai/bjp-in-bid-to-get-rajinikanth-khuboo-on-board-088169.html", "image": { "@type": "ImageObject", "url": "http://kannada.oneindia.com/img/1200x60x675/2014/10/07-rajini-modi-64-600-jpg.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/10/07-rajini-modi-64-600-jpg.jpg", "datePublished": "2014-10-07T17:39:02+05:30", "dateModified": "2014-10-07T17:43:31+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Chennai", "description": "Sensing a political opportunity in Tamil Nadu following the conviction of AIADMK general secretary Jayalalithaa, the Bharatiya Janata Party (BJP) has intensified its efforts to make superstar Rajinikanth join the party. ", "keywords": "BJP in bid to get Rajinikanth on board, ರಜನಿಕಾಂತ್ ಬಿಜೆಪಿಗೆ ಕರೆ ತರಲು ಇದೇ ಸಕಾಲ ", "articleBody":"ಚೆನ್ನೈ, ಅ.7: ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ತನ್ನದೇ ಆದ ರೀತಿಯಲ್ಲಿ ಲಾಭ ಪಡೆಯಲು ಮುಂದಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟಿ ಖುಷ್ಬೂ ಅವರನ್ನು ಬಿಜೆಪಿಗೆ ಕರೆ ತರಲು ಇದೇ ಸಕಾಲ ಎಂದು ತನ್ನ ಯತ್ನ ಮುಂದುವರೆಸಿದೆ.ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಜನಿ ಕಾಂತ್ ಪತ್ನಿ ಲತಾ ಅವರು ತಮಿಳುನಾಡಿನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷೆ ತಮಿಳಿಸೈ ಸೌಂದರ್ಯರಾಜನ್ ಅವರನ್ನು ಮನೆಗೆ ಕರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಏನು ಮಾತನಾಡಿಕೊಂಡರೋ ಅಥವಾ ಹಬ್ಬದ ಸಿಹಿ ಹಂಚಿಕೊಂಡರೋ ಗೊತ್ತಿಲ್ಲ, ಚೆನ್ನೈನ ಗಲ್ಲಿ ಗಲ್ಲಿಗಳಲ್ಲಿ ರಜನಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ, ದೀಪಾವಳಿ ವೇಳೆಗೆ ಬಂಪರ್ ಸುದ್ದಿ ತಮಿಳರಿಗೆ ಕಾದಿದೆ ಎಂಬ ಗಾಳಿಸುದ್ದಿ ಹಬ್ಬುತ್ತಿದೆ.ಲತಾ ರಜನಿಕಾಂತ್ ಅವರ ಆಹ್ವಾನದ ಮೇರೆಗೆ ಸೌಂದರ್ಯ ರಾಜನ್ ಅವರು ರಜನಿ ಅವರ ಮನೆಗೆ ತೆರಳಿದ್ದು ನಿಜ. ಪ್ರಧಾನಿ ಮೋದಿ ಅವರ ಬಗ್ಗೆ ತಾವು ಬರೆದಿರುವ ಕೃತಿ ಲೋಕಾರ್ಪಣೆ ಮಾಡಲು ರಜನಿಕಾಂತ್ ಅವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಹಜವಾಗಿ ರಾಜ್ಯದ ರಾಜಕೀಯ ಸ್ಥಿತಿ ಗತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯಕ್ಕೆ ರಜನೀಕಾಂತ್ ಲಿಂಗಾ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶೂಟಿಂಗ್ ಮುಗಿದ ಬಳಿಕ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಮಿಳುನಾಡು ಬಿಜೆಪಿ ಘಟಕ ಹೇಳಿದೆ. ಮೋದಿ ಜತೆಯಲ್ಲಿ ಸೂಪರ್ ಸ್ಟಾರ್ ರಜನಿಡಿಎಂಕೆ ಪರ ನಿಂತಿದ್ದ ರಜನಿ: 1996ರಲ್ಲಿ ಡಿಎಂಕೆ-ಟಿಎಂಸಿ ಪರ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ಎಂ ಕರುಣಾನಿಧಿ ಅಧಿಕಾರಕ್ಕೆ ಬಂದಿದ್ದರು. ಜಯಲಲಿತಾ ಅವರಿಗೆ ಅಲ್ಲಿಂದ ಅಕ್ರಮ ಆಸ್ತಿ ಭೂತ ಕಾಡತೊಡಗಿತು.ಆಸ್ತಿ ಪ್ರಕರಣದ ಕಥೆ ವ್ಯಥೆ ಟೈಮ್ ಲೈನ್ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ರಜನಿಕಾಂತ್ ಬಿಜೆಪಿ ಸೇರ್ಪಡೆಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಅದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪೊಯಿಸ್ ಗಾರ್ಡನ್ ನಲ್ಲಿರುವ ರಜನಿ ಅವರ ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿದ್ದು ದಕ್ಷಿಣ ಭಾರತದಲ್ಲಿ ಎನ್ಡಿಎ ಬಲಗೊಳ್ಳಲು ಸಹಾಯಕವಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೂಡಾ ರಜನಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಮಲ ಪರವಾದ ಖುಷ್ಬೂ?ಇನ್ನೊಂದೆಡೆ ಡಿಎಂಕೆಯ ಸ್ಟಾರ್ ಪ್ರಚಾರಕರಾಗಿ ದುಡಿದಿದ್ದ ನಟಿ ಕಮ್ ರಾಜಕಾರಣಿ ಖುಷ್ಬೂ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಕಳೆದ ಲೋಕಸಭೆ ಚುನಾವಣೆ 2014 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹೀನಾಯ ಸೋಲು ಕಂಡಿತ್ತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 39 ಸೀಟುಗಳ 37 ಸೀಟು ಗೆದ್ದು ಭರ್ಜರಿ ವಿಜಯ ದಾಖಲಿಸಿದೆ. ಆದರೆ, ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿ ಜಯಲಲಿತಾ ಅವರು ಸಿಎಂ ಪಟ್ಟ ಕಳೆದುಕೊಂಡು ಬೆಂಗಳೂರಿನ ಜೈಲು ಸೇರಿದ್ದಾರೆ.ಈ ನಡುವೆ 2016ರ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸಿರುವ ರಜನಿಕಾಂತ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. ವಿವರ ಇಲ್ಲಿದೆ" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ ಬಿಜೆಪಿಗೆ ಕರೆ ತರಲು ಇದೇ ಸಕಾಲ

By Mahesh
|
Google Oneindia Kannada News

ಚೆನ್ನೈ, ಅ.7: ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ತನ್ನದೇ ಆದ ರೀತಿಯಲ್ಲಿ ಲಾಭ ಪಡೆಯಲು ಮುಂದಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟಿ ಖುಷ್ಬೂ ಅವರನ್ನು ಬಿಜೆಪಿಗೆ ಕರೆ ತರಲು ಇದೇ ಸಕಾಲ ಎಂದು ತನ್ನ ಯತ್ನ ಮುಂದುವರೆಸಿದೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಜನಿ ಕಾಂತ್ ಪತ್ನಿ ಲತಾ ಅವರು ತಮಿಳುನಾಡಿನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷೆ ತಮಿಳಿಸೈ ಸೌಂದರ್ಯರಾಜನ್ ಅವರನ್ನು ಮನೆಗೆ ಕರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಏನು ಮಾತನಾಡಿಕೊಂಡರೋ ಅಥವಾ ಹಬ್ಬದ ಸಿಹಿ ಹಂಚಿಕೊಂಡರೋ ಗೊತ್ತಿಲ್ಲ, ಚೆನ್ನೈನ ಗಲ್ಲಿ ಗಲ್ಲಿಗಳಲ್ಲಿ ರಜನಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ, ದೀಪಾವಳಿ ವೇಳೆಗೆ ಬಂಪರ್ ಸುದ್ದಿ ತಮಿಳರಿಗೆ ಕಾದಿದೆ ಎಂಬ ಗಾಳಿಸುದ್ದಿ ಹಬ್ಬುತ್ತಿದೆ.

ಲತಾ ರಜನಿಕಾಂತ್ ಅವರ ಆಹ್ವಾನದ ಮೇರೆಗೆ ಸೌಂದರ್ಯ ರಾಜನ್ ಅವರು ರಜನಿ ಅವರ ಮನೆಗೆ ತೆರಳಿದ್ದು ನಿಜ. ಪ್ರಧಾನಿ ಮೋದಿ ಅವರ ಬಗ್ಗೆ ತಾವು ಬರೆದಿರುವ ಕೃತಿ ಲೋಕಾರ್ಪಣೆ ಮಾಡಲು ರಜನಿಕಾಂತ್ ಅವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಹಜವಾಗಿ ರಾಜ್ಯದ ರಾಜಕೀಯ ಸ್ಥಿತಿ ಗತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯಕ್ಕೆ ರಜನೀಕಾಂತ್ 'ಲಿಂಗಾ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶೂಟಿಂಗ್ ಮುಗಿದ ಬಳಿಕ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಮಿಳುನಾಡು ಬಿಜೆಪಿ ಘಟಕ ಹೇಳಿದೆ. [ಮೋದಿ ಜತೆಯಲ್ಲಿ ಸೂಪರ್ ಸ್ಟಾರ್ ರಜನಿ]

Rajini and Modi

ಡಿಎಂಕೆ ಪರ ನಿಂತಿದ್ದ ರಜನಿ: 1996ರಲ್ಲಿ ಡಿಎಂಕೆ-ಟಿಎಂಸಿ ಪರ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ಎಂ ಕರುಣಾನಿಧಿ ಅಧಿಕಾರಕ್ಕೆ ಬಂದಿದ್ದರು. ಜಯಲಲಿತಾ ಅವರಿಗೆ ಅಲ್ಲಿಂದ ಅಕ್ರಮ ಆಸ್ತಿ ಭೂತ ಕಾಡತೊಡಗಿತು.[ಆಸ್ತಿ ಪ್ರಕರಣದ ಕಥೆ ವ್ಯಥೆ ಟೈಮ್ ಲೈನ್]

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ರಜನಿಕಾಂತ್ ಬಿಜೆಪಿ ಸೇರ್ಪಡೆಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಅದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪೊಯಿಸ್ ಗಾರ್ಡನ್ ನಲ್ಲಿರುವ ರಜನಿ ಅವರ ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿದ್ದು ದಕ್ಷಿಣ ಭಾರತದಲ್ಲಿ ಎನ್ಡಿಎ ಬಲಗೊಳ್ಳಲು ಸಹಾಯಕವಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೂಡಾ ರಜನಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ. ['ಕಮಲ' ಪರವಾದ ಖುಷ್ಬೂ?]

ಇನ್ನೊಂದೆಡೆ ಡಿಎಂಕೆಯ ಸ್ಟಾರ್ ಪ್ರಚಾರಕರಾಗಿ ದುಡಿದಿದ್ದ ನಟಿ ಕಮ್ ರಾಜಕಾರಣಿ ಖುಷ್ಬೂ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಕಳೆದ ಲೋಕಸಭೆ ಚುನಾವಣೆ 2014 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹೀನಾಯ ಸೋಲು ಕಂಡಿತ್ತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 39 ಸೀಟುಗಳ 37 ಸೀಟು ಗೆದ್ದು ಭರ್ಜರಿ ವಿಜಯ ದಾಖಲಿಸಿದೆ. ಆದರೆ, ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿ ಜಯಲಲಿತಾ ಅವರು ಸಿಎಂ ಪಟ್ಟ ಕಳೆದುಕೊಂಡು ಬೆಂಗಳೂರಿನ ಜೈಲು ಸೇರಿದ್ದಾರೆ.

ಈ ನಡುವೆ 2016ರ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸಿರುವ ರಜನಿಕಾಂತ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. [ವಿವರ ಇಲ್ಲಿದೆ]

English summary
Sensing a political opportunity in Tamil Nadu following the conviction of AIADMK general secretary Jayalalithaa, the Bharatiya Janata Party (BJP) has intensified its efforts to make superstar Rajinikanth join the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X