Gold, Silver Price: ಚಿನ್ನ–ಬೆಳ್ಳಿ ಬೆಲೆ ಗಗನಕ್ಕೇರಿದ್ದೇಕೆ? ದಾಖಲೆ ಏರಿಕೆಯ ಹಿಂದಿರುವ ಕಾರಣಗಳು ಯಾವುವು?
Gold, Silver Price: ಚಿನ್ನ-ಬೆಳ್ಳಿ ದರ ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಲಿದೆ. ಇನ್ನೂ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣವೂ ಕೂಡ ಇದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಸುಂಕ ಬೆದರಿಕೆಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಏರಿಕೆಯ ಓಟ ಮುಂದುವರೆಸಿದೆ. ಜಾಗತಿಕ ರಾಜಕೀಯ ಸನ್ನಿವೇಶಗಳು ಹಾಗೂ ವಾಣಿಜ್ಯ ವಲಯದಲ್ಲಿನ ಅನಿಶ್ಚಿತತೆಯಿಂದ ಹೂಡಿಕೆದಾರರಿಗೆ ಚಿನ್ನ-ಬೆಳ್ಳಿಯೇ ಉತ್ತಮ ಎನಿಸಿದ್ದು, ಇದೇ ಕಾರಣದಿಂದ ಇವುಗಳ ದರ ಮತ್ತಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ದರ ಏರಿಕೆಯಾಗಲು ಕಾರಣ ಏನು?: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಹಪಾಹಪಿಯಲ್ಲಿರುವ ಟ್ರಂಪ್, ನ್ಯಾಟೊ ಸದಸ್ಯ ರಾಷ್ಟ್ರಗಳ ಮೇಲೆ ಪ್ರತಿಸುಂಕದ ಬೆದರಿಕೆ ಹಾಕಿದ ನಂತರ ಭಾರತವೂ ಸೇರಿದಂತೆ ಜಾಗತಿಕವಾಗಿ ಷೇರು ಮಾರುಕಟ್ಟೆ ಅಸ್ಥಿರತೆಯತ್ತ ವಾಲುತ್ತಿದೆ. ಆದ್ದರಿಂದ ಚಿನ್ನ, ಬೆಳ್ಳಿ ಮೇಲೆ ಜನರ ಹೂಡಿಕೆ ಆಸಕ್ತಿ ಹೆಚ್ಚಿದೆ. ಇನ್ನು ಭಾರತದಲ್ಲಿ ಮದುವೆ ಋುತು ಕೂಡ ಇನ್ನೇನು ಹತ್ತಿರದಲ್ಲಿದೆ. ಇದು ಕೂಡ ಬಂಗಾರ ದರ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ. ಕೈಗಾರಿಕಾ ವಲಯದಲ್ಲೂ ಚಿನ್ನ-ಬೆಳ್ಳಿಗೆ ಭಾರೀ ಬೇಡಿಕೆಯಿದೆ. ಇದೇ ಕಾರಣದಿಂದಲೇ ದರ ಗಗನಕ್ಕೆ ಏರಿದೆ.
ಸುಂಕ ಹೆಚ್ಚಳದ ಶಾಕ್: ಕಳೆದ ಎರಡು ದಿನಗಳ ಹಿಂದೆಯಷ್ಟೇ ಟ್ರಂಪ್, ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ಪ್ರಸ್ತಾವಕ್ಕೆ ಅಡ್ಡಿಪಡಿಸಿದ ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್‌ಲ್ಯಾಂಡ್ ಮತ್ತು ಫಿನ್‌ಲ್ಯಾಂಡ್ ಮೇಲೆ ಫೆಬ್ರವರಿ 1ರಿಂದ ಶೇಕಡ 10ರಷ್ಟು ಪ್ರತಿಸುಂಕ ವಿಧಿಸಲಾಗುವುದು ಎಂದು ಎಚ್ಚರಿಸಿದ್ದರು. ಅಲ್ಲದೆ, ಈ ಸುಂಕ ಪ್ರಮಾಣವನ್ನು ಜೂನ್ 1ರಿಂದ ಶೇಕಡ 25ಕ್ಕೆ ಹೆಚ್ಚಳ ಮಾಡಲಾಗುವುದು ಅಂತಲೂ ಹೇಳಿ ಶಾಕ್ ಕೊಟ್ಟಿದ್ದರು.
"ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ಮೇಲಿನ ಟ್ರಂಪ್ ಅವರ ಹೊಸ ಪ್ರತಿಸುಂಕ ಸಮರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯವನ್ನು ತಗ್ಗಿಸುವ ಸಾಧ್ಯತೆಯಿದೆ. ಇನ್ನು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ , ಉಕ್ರೇನ್ ಮೇಲಿನ ರಷ್ಯಾದ ಸತತ ದಾಳಿಯು ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸಿದೆ. ಜಾಗತಿಕ ಮಟ್ಟದಲ್ಲಿನ ರಾಜಕೀಯ ಅನಿಶ್ಚಿತತೆ ಹಾಗೂ ರಫ್ತು-ಆಮದು ವಲಯದಲ್ಲಿನ ಏರಿಳಿತವು ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಬಹುದು. ಈ ಅಂದಾಜಿನಿಂದ ಹೂಡಿಕೆದಾರರಿಗೆ ಸದ್ಯಕ್ಕೆ ಚಿನ್ನ-ಬೆಳ್ಳಿಯೇ ಸುರಕ್ಷಿತ ಎನಿಸಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಲಿದೆ,'' ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ವಿದ್ಯಮಾನ, ರಾಜಕೀಯ ಅನಿಶ್ಚಿತತೆಯಿಂದ ಚಿನ್ನ-ಬೆಳ್ಳಿ ಮೇಲೆ ಹೂಡಿಕೆದಾರರ ಅವಲಂಬನೆ ಹೆಚ್ಚಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಂಗಾರ, ಬೆಳ್ಳಿ ದರ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ದುಬಾರಿಯಾಗಿದ್ದು, ಕೆ.ಜಿ. ಬೆಳ್ಳಿಗೆ ದಾಖಲೆಯ 3 ಲಕ್ಷ ಮುಟ್ಟಿದೆ. ಇದರಿಂದ ಗ್ರಾಹಕರು ದಂಗಾಗಿದ್ದಾರೆ.
ಇನ್ನೂ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮತ್ತು ಮೇಲೆ ರಷ್ಯಾದ ಸತತ ದಾಳಿಯು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ, ಬಂಗಾರ ದರ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ತಜ್ಷರು ಹೇಳುವ ಮಾತಾಗಿದೆ. ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಖರೀದಿ ಹೆಚ್ಚಳ, ಕೈಗಾರಿಕಾ ವಲಯದಲ್ಲೂ ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದು, ಇದು ಕೂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿದ್ದಾರೆ ತಜ್ಷರು.
ಬೆಳ್ಳಿ ಏರಿಕೆ ಓಟ ಹೀಗಿದೆ ನೋಡಿ (ಕೆ.ಜಿ.ಲೆಕ್ಕದಲ್ಲಿ): 2025ರ ಜನವರಿ 15 - 93,500 ರೂಪಾಯಿ, 2025ರ ಆಗಸ್ಟ್ 24 - 1,20,000 ರೂಪಾಯಿ, 2025ರ ನವೆಂಬರ್ 1 - 1,52,000 ರೂಪಾಯಿ, 2025ರ ಡಿಸೆಂಬರ್ 25 - 2,34,000 ರೂಪಾಯಿ, 2026ರ ಜನವರಿ 14 - 2,90,000 ರೂಪಾಯಿ, 2026 ಜನವರಿ 18 - 2,95,000 ರೂಪಾಯಿ, ಜನವರಿ 19ರಂದು 3,05,000 ರೂಪಾಯಿ ದಾಖಲೆಯ ಏರಿಕೆ ಕಂಡಿದೆ. ಹೀಗೆ ಏರುಮುಖ ಮಾಡಿದೆಯೇ ಹೊರತು ಇಳಿಮುಖ ಅಂತೂ ಮಾಡಿಲ್ಲ. ಬಂಗಾರ ದರ ಅಷ್ಟೇ ಕಡಿಮೆಯಾದ್ರೆ 10, 50 ರೂಪಾಯಿ ಕಡಿಮೆಯಾಗಯತ್ತದೆ ಅಷ್ಟೇ ಜಾಸ್ತಿಯಾದ್ರೆ, 100, 200 ರೂಪಾಯಿ ಆಗುತ್ತದೆ. ಹೀಗೆ ಬೆಳ್ಳಿ-ಬಂಗಾರ ದರದಲ್ಲಿ ಕಳೆದ ಕೆಲ ತಿಂಗಳುಗಳಿಂದಲೂ ದಾಖಲೆಯ ಏರಿಕೆ ಓಟ ಮುಂದುವರೆದಿದೆ. ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ ದಿನಗಳಲ್ಲಿ ದರ ಕೂಡ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಅಂತಲೂ ಹಲವು ತಜ್ಞರು ಭವಿಷ್ಯ ನುಡಿದಿದ್ದಾರೆ.
-
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು












Click it and Unblock the Notifications