ರೈತರೇ ಸರ್ಕಾರದ ಪತನಕ್ಕೆ ಕೊನೆಯ ಮೊಳೆ! ರೈತರ ಸಾಲ ಮನ್ನಾ ಮಾಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ
ರೈತರನ್ನು ಉಳಿಸಬೇಕು ಅಂತ ಇದ್ದೀರಾ ಅಥವಾ ಏನು ಮಾಡಬೇಕು ಅಂತ ಇದ್ದೀರಾ? ಈ ರಾಜ್ಯ ಸರ್ಕಾರದ ಪತನಕ್ಕೆ ಕೊನೆಯ ಮೊಳೆಯನ್ನು ಹೊಡೆಯುವುದು ನಮ್ಮ ರೈತಾಪಿ ಜನ!" ಜೆಡಿಎಸ್ ಎಂದಿಗೂ ರೈತರ ಪರವಾಗಿ ನಿಲ್ಲುವ ಪಕ್ಷ. 2018ರಲ್ಲಿ ರೈತರ ಬಾಳಲ್ಲಿ ಬೆಳಕು ಮೂಡಿಸಲು ಹೆಚ್.ಡಿ. ಕುಮಾರಸ್ವಾಮಿ ಅವರು 27 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಇಂದು ರಾಜ್ಯದಲ್ಲಿ ರೈತರು ಕಣ್ಣೀರು ಹಾಕುತ್ತಾ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೊಡ್ಡ ಬಹುಮತ ಹೊಂದಿರು ಡಿ.ಕೆ. ಶಿವಕುಮಾರ್ ಅವರು ಕೂಡಲೇ ರೈತರ ಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರ ಕೈಹಿಡಿಯಬೇಕು ಅಂತ ರಾಜ್ಯ ಸರ್ಕಾರದ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿ ಆಗ್ರಹಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ.
Video Published On: Tuesday, Sep 29, 2026, 11:16 [IST]


Click it and Unblock the Notifications
