ಈಜಿಪುರ ಫ್ಲೈಓವರ್ ಯಾಕೆ ಕಂಪ್ಲೀಟ್ ಆಗ್ತಿಲ್ಲ? ಡಿಸೆಂಬರ್ ನಲ್ಲಾಗೋಕೆ ಚಾನ್ಸೇ ಇಲ್ಲ! ಬೇಸತ್ತ ಜನ
ಬೆಂಗಳೂರಿನ ಈಜಿಪುರ ಫ್ಲೈಓವರ್ ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಫ್ಲೈಓವರ್ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಈಜಿಪುರ, ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಪ್ರತಿನಿತ್ಯ ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಟ್ರಾಫಿಕ್ ಜಾಮ್‌ನಿಂದ ಪರದಾಡುವಂತಾಗಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಯಲ್ಲಿರುವ ಈ ಫ್ಲೈಓವರ್ ಕಾಮಗಾರಿ ಇಷ್ಟು ವರ್ಷಗಳಾದರೂ ಯಾಕೆ ಪೂರ್ಣಗೊಂಡಿಲ್ಲ? ಕಾಮಗಾರಿ ವಿಳಂಬಕ್ಕೆ ಕಾರಣವೇನು? ಸರ್ಕಾರ ಈ ಬಗ್ಗೆ ಯಾಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ? ಸಾರ್ವಜನಿಕರ ಸಮಯ ಮತ್ತು ಹಣದ ನಷ್ಟಕ್ಕೆ ಹೊಣೆ ಯಾರು?
Video Published On: Wednesday, Oct 07, 2026, 15:00 [IST]


Click it and Unblock the Notifications
