Ukraine-Russia map: ಉಕ್ರೇನ್-ರಷ್ಯಾ ನಕ್ಷೆ: ಗಡಿಯುದ್ದಕ್ಕೂ ಪರಿಸ್ಥಿತಿ ಹೇಗಿದೆ?

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಯುದ್ಧಕ್ಕೆ ಕರೆ ನೀಡಿದ್ದಾರೆ, ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ಸಮೀಪ ಹಲವು ಬಾರಿ ಸ್ಫೋಟದ ಶಬ್ದ ಕೇಳಿಸಿದೆ. ಪುಟಿನ್ ಉಕ್ರೇನ್ ಗಡಿಗೆ 130,000ಕ್ಕೂ ಹೆಚ್ಚಿನ ಸೈನಿಕರನ್ನು ಕಳುಹಿಸಿದ್ದಾರೆ, ಅಂತಿಮವಾಗಿ ಯುದ್ಧ ಸಾರಿದ್ದಾರೆ.

ಅಂತಾರಾಷ್ಟ್ರೀಯ ಸಮುದಾಯವೂ ಕೂಡ ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿವೆ, ವಿಶ್ವಸಂಸ್ಥೆಯು ಕಾಳಜಿ ವ್ಯಕ್ತಪಡಿಸಿದೆ. ಯುಎನ್‌ನ ರಷ್ಯಾ ರಾಯಭಾರಿ ವೆಸ್ಸಿಲಿ ನೆಬೆಂಜಿಯಾ ಮಾತನಾಡಿ, ಪೂರ್ವ ಉಕ್ರೇನ್‌ನಲ್ಲಿ ಯಾವುದೇ ರಕ್ತಪಾತ ನಡೆಯುವುದಿಲ್ಲ, ಆದರೆ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ರಷ್ಯಾ, ಉಕ್ರೇನ್ ವಿರುದ್ಧ ಯುದ್ದ ಕಹಳೆ ಕೂಗಿದ್ದು, ರಷ್ಯಾದ ಸೈನ್ಯ ಉಕ್ರೇನ್‍ನಲ್ಲಿದೆ. ಈ ಹಿನ್ನೆಲೆ ಅಮೆರಿಕ, ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧಗಳನ್ನು ಹೇರಿದೆ.

Ukraine-Russia map: Where Could Invasion Take Place and What is the Situation Along The Border In Kannada

ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಎನ್‍ಎಟಿಒ ಒಪ್ಪಂದದಡಿ ರಷ್ಯಾದ ಮೇಲೆ ಕೆಲವೊಂದು ನಿರ್ಬಂಧ ಹೇರಲಾಗಿದೆ. ಉಕ್ರೇನ್ ನ ಮತ್ತು ಅಮೆರಿಕದ ಯಾವುದೇ ಪ್ರದೇಶಗಳ ಮೇಲೆ ನಿರ್ಧಾರ ಕೈಗೊಳ್ಳುವ, ಯಾವುದೇ ವ್ಯಕ್ತಿ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ಉಕ್ರೇನ್ ಡಿಎನ್‍ಆರ್ ಮತ್ತು ಎಲ್‍ಎನ್‍ಆರ್ ಎಂದು ಕರೆಯಲ್ಪಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನದಲ್ಲಿ ಹೇಳಿದರು.

ಈ ರೀತಿಯ ಫೋಷಣೆಯಿಂದ 2 ಸ್ವಯಂಫೋಷಿತ ಪ್ರಜಾಪ್ರಭುತ್ವ ರಾಷ್ಟ್ರಗಳು ಈ ರೀತಿ ನಿರ್ಬಂಧ ಹೇರಿಕೊಂಡರೆ ಸೋವಿಯತ್ ಒಕ್ಕೂಟದ ಪತನವಾಗುವ ಸಾಧ್ಯತೆ ಇದೆ. ಪೂರ್ವ-ಪಶ್ಚಿಮ ಸಂಘರ್ಷದಲ್ಲಿ ಇದು ಹೊಸ ಯುಗಕ್ಕೆ ನಾಂದಿಯಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಜಾನ್ಸನ್ ಅವರು ಹೌ್ ಆಫ್ ಕಾಮನ್ಸ್‌ಗೆ ಮಾಡಿದ ಭಾಷಣದಲ್ಲಿ ರಕ್ತಪಾತ ಮತ್ತು ವಿನಾಶದ ಹಾದಿಯನ್ನು ಅನುಸರಿಸದಂತೆ ರಷ್ಯಾದ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ಈ ಹಿಂದೆ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ದೋನೆಟ್‍ಸ್‍ಕೋ, ಲುಹಾನ್‍ಸ್‍ಕೋ ಪ್ರಾಂತ್ಯಗಳನ್ನು ಎರಡು ಪ್ರತ್ಯೇಕ ದೇಶಗಳೆಂದು ಗುರುತಿಸಿ ಪುಟಿನ್ ಆದೇಶ ಹೊರಡಿಸಿದ್ದರು. ಹೊಸ ದೇಶಗಳಲ್ಲಿ ಶಾಂತಿ ಸ್ಥಾಪನೆ ಆಗುವವರೆಗೂ ರಷ್ಯಾದ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ಉಕ್ರೇನ್ ಅಸ್ತಿತ್ವವನ್ನೇ ಪ್ರಶ್ನಿಸಿ ಯೂರೋಪ್ ದೇಶಗಳಿಗೆ ಪುಟಿನ್ ಭಯ ಹುಟ್ಟಿಸಿದ್ದರು.

ಉಕ್ರೇನ್‌ನ ಹೆಚ್ಚಿನ ರಕ್ಷಣೆಗಾಗಿ ನ್ಯಾಟೋ ಸೇರುವುದಕ್ಕೆ ಪುಟಿನ್ ವಿರೋಧವಿದೆ. ರಷ್ಯಾ ಸೇನೆಯು ಕ್ರಿಮಿಯಾ ಹಾಗೂ ಕಪ್ಪು ಸಮುದ್ರದ ಬಳಿ ಭಾರಿ ಸೇನೆಯನ್ನು ನಿಯೋಜಿಸಿದೆ. ಉಕ್ರೇನ್ ಪ್ರಸ್ತುತ 250,000 ಸೈನಿಕರನ್ನು ಹೊಂದಿದ್ದು, 130,000 ಹೆಚ್ಚಿನ ಸೈನಿಕರನ್ನು ನಿಯೋಜಿಸಲಿದೆ.

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ, ಬ್ರಿಟನ್‌ ಹಾಗೂ ಯುರೋಪಿಯನ್‌ ಒಕ್ಕೂಟದ ನಂತರ ಇದೀಗ ಜರ್ಮನಿ, ಕೆನಡಾ, ಜಪಾನ್‌ ದೇಶಗಳೂ ನಿರ್ಬಂಧ ಘೋಷಿಸಿವೆ.

ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್‌ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವ ರಷ್ಯಾ , ಇದೀಗ ಉಕ್ರೇನ್‌ನ ಉತ್ತರ ಭಾಗದಲ್ಲಿ ಬರುವ ತನ್ನ ಮಿತ್ರ ದೇಶ ಬೆಲಾರಸ್‌ನ ಗಡಿಯಲ್ಲಿ ಭಾರೀ ಪ್ರಮಾಣದ ಸೇನೆ ನಿಯೋಜನೆ ಮಾಡಿರುವುದು ಕಂಡುಬಂದಿದೆ.

ಅಮೆರಿಕದ ಖಾಸಗಿ ಉಪಗ್ರಹ ಮ್ಯಾಕ್ಸರ್‌ ಸೆರೆಹಿಡಿದಿರುವ ಹೊಸ ಚಿತ್ರಗಳ ಅನ್ವಯ, ಉಕ್ರೇನ್‌ ಗಡಿ ಭಾಗದಲ್ಲಿ ಬರುವ ಬೆಲಾರಸ್‌ನಲ್ಲಿ ದಿಢೀರನೆ 100ಕ್ಕೂ ಹೆಚ್ಚು ಹೊಸ ಸೇನಾ ವಾಹನಗಳನ್ನು ಜಮಾವಣೆ ಮಾಡಿರುವುದು ಮತ್ತು ಮಿಲಿಟರಿ ಆಸ್ಪತ್ರೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಈ ಪ್ರದೇಶವು ಉಕ್ರೇನ್‌ನ ರಾಜಧಾನಿ ಕೀವ್‌ಗೆ ಸಮೀಪವಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಿಂದ ದಾಳಿ ನಡೆಸಿ ನೆರೆಯ ದೇಶದ ಜಂಘಾಬಲವನ್ನೇ ಹೊಸಕಿಹಾಕುವ ಉದ್ದೇಶ ರಷ್ಯಾದ್ದು ಎನ್ನಲಾಗಿದೆ.

ಉಕ್ರೇನ್‌ನ ದಕ್ಷಿಣದ ಭಾಗದಲ್ಲಿ ಸಮುದ್ರವಿದ್ದು, ಅಲ್ಲಿ ಈಗಾಗಲೇ ರಷ್ಯಾ ತನ್ನ ಅತ್ಯಾಧುನಿಕ ಯುದ್ಧ ನೌಕೆ, ಸಬ್‌ಮರೀನ್‌ಗಳ ನಿಯೋಜನೆ ಮಾಡಿದೆ. ಇನ್ನು ಪೂರ್ವದಲ್ಲಿ ಬರುವ ಗಡಿ ಪ್ರದೇಶದಲ್ಲಿ ಉಕ್ರೇನ್‌ನದ್ದೇ ಬಂಡುಕೋರರ ಆಡಳಿತರುವ ಪ್ರದೇಶಗಳಿವೆ.

ಅವುಗಳಿಗೆ ಮಂಗಳವಾರವಷ್ಟೇ ರಷ್ಯಾ ಸ್ವಾಯತ್ತ ಸ್ಥಾನಮಾನ ನೀಡಿದೆ. ಹೀಗಾಗಿ ಅಲ್ಲಿಂದಲೂ ದಾಳಿ ನಡೆಸುವುದು ಸುಲಭ. ಅದರ ಜೊತೆಗೆ ಉತ್ತರದಲ್ಲಿ ಬೆಲಾರಸ್‌ನಿಂದಲೂ ದಾಳಿ ನಡೆಸಿದರೆ, ನ್ಯಾಟೋ ಪಡೆಗಳ ನೆರವಿನ ಹೊರತಾಗಿಯೂ ರಷ್ಯಾವನ್ನು ಎದುರಿಸುವುದು ಉಕ್ರೇನ್‌ಗೆ ಅಸಾಧ್ಯವಾಗಲಿದೆ.

ಹೀಗಾಗಿಯೇ ಇಂಥ ರಣತಂತ್ರವನ್ನು ರಷ್ಯಾ ರೂಪಿಸಿದೆ ಎನ್ನಲಾಗಿದೆ. ಗಡಿಯಾಚೆ ರಷ್ಯಾದ ಸೇನೆಯನ್ನು ಬಳಸಿಕೊಳ್ಳಲು ಮಂಗಳವಾರ ರಷ್ಯಾ ಸಂಸತ್ತು ಒಪ್ಪಿಗೆ ನೀಡಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಗಳು ಕಂಡುಬಂದಿವೆ. ಇದರ ನಡುವೆಯೇ ರಷ್ಯನ್‌ ಬಂಡುಕೋರರು ನಡೆಸಿದ ಶೆಲ್‌ ದಾಳಿಯಲ್ಲಿ ಪೂರ್ವ ಉಕ್ರೇನ್‌ನಲ್ಲಿ ಓರ್ವ ಯೋಧ ಮೃತಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+