ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ವಿಶ್ವ ಪ್ರವಾಸೋದ್ಯಮ ದಿನ: ಟ್ವಿಟ್ಟಿಗರಿಂದ ಶುಭಹಾರೈಕೆ

|
Google Oneindia Kannada News

ಪ್ರತೀ ದೇಶದ ಸಂಸ್ಕೃತಿಯ ಪ್ರಸಾರ, ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು. ಬೇರೆ ಬೇರೆ ರಾಜ್ಯ, ದೇಶಗಳಿಂದ ಬರುವ ಜನರು ಇಲ್ಲಿನ ಸಂಸ್ಕೃತಿ, ಆಚರಣೆಗಳನ್ನು ತಮ್ಮಲ್ಲಿಗೂ ಕೊಂಡೊಯ್ದು ಜಗತ್ತೊಂದು ಕುಟುಂಬವೇ ಆಗುವುದಕ್ಕೆ ಪ್ರವಾಸೋದ್ಯಮ ನೆರವಾಗಿದೆ. ವಸುಧೈವ ಕುಟುಂಬಕಂ ಎಂಬ ಮಾತು ವಾಸ್ತವವಾಗಿದ್ದರೆ, ಅದರಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು.

ಪ್ರವಾಸೋದ್ಯಮ ದಿನದಂದು ಯಾದಗಿರಿ ಕೋಟೆ ಕಣ್ತುಂಬಿಕೊಂಡ ಡಿಸಿಪ್ರವಾಸೋದ್ಯಮ ದಿನದಂದು ಯಾದಗಿರಿ ಕೋಟೆ ಕಣ್ತುಂಬಿಕೊಂಡ ಡಿಸಿ

ಇಂದು(ಸೆ.27) ವಿಶ್ವ ಪ್ರವಾಸೋದ್ಯಮ ದಿನ. 1980 ಸೆಪ್ಟೆಂಬರ್ 27 ರಿಂದ ಈ ದಿನವನ್ನು ವಿಶ್ವಪ್ರವಾಸೋದ್ಯಮ ದಿನವನ್ನಾಗಿ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಆಚರಿಸಿಸಕೊಂಡು ಬರುತ್ತಿದೆ. ಪ್ರವಾಸೋದ್ಯಮದ ಮೂಲಕ ದೇಶ ದೇಶಗಳನ್ನು ಬೆಸೆಯುವ, ವಿಶ್ವದ ನೂರಾರು ಸಂಸ್ಕೃತಿ, ಆಚರಣೆಗಳನ್ನು ಪರಿಚಯಿಸುವ, ಜೊತೆಗೆ ಆರ್ಥಿಕ ಪ್ರಗತಿಗೆ ಮಹತ್ವದ ಕಾಣಿಕೆ ನೀಡುವ ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸುವ, ಅದಕ್ಕೆ ಮತ್ತಷ್ಟು ಪ್ರಚಾರ ನೀಡುವ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!

ವಿಶ್ವ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಭಾರತದಲ್ಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ವಿಶ್ವ ಪ್ರವಾಸೋದ್ಯಮ ದಿನಕ್ಕೆ ಶುಭ ಟ್ವಿಟ್ಟರ್ ನಲ್ಲಿ ಹಾರೈಸಿದ್ದಾರೆ.

ಭಾರತಕ್ಕೆ ಆಮಂತ್ರಣ

ಭಾರತದ ಅನನ್ಯ ಸೌಂದರ್ಯ ನೋಡುವುದಕ್ಕಾಗಿ ಮತ್ತು ಭಾರತೀಯರ ಆತ್ಮೀಯ ಆತಿಥ್ಯವನ್ನು ಸ್ವೀಕರಿಸುವುದಕ್ಕಾಗಿ ಜಗತ್ತಿನ ಎಲ್ಲ ದೇಶದ ಜನರೂ ಒಮ್ಮೆ ಭಾರತಕ್ಕೆ ಭೇಟಿ ನೀಡಿ ಎಂದು ನಾನು ಆಮಂತ್ರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ

ಸುಂದರ ಪ್ರವಾಸಿ ತಾಣಗಳು, ಉತ್ತಮ ಸಂಸ್ಕೃತಿ ಸಂಸ್ಕೃತಿ ಮತ್ತು ಸಜ್ಜನರ ನಮ್ಮ ಕರ್ನಾಟಕಕ್ಕೆ ಭೇಟಿ ನೀಡಿ. ಈ ವಿಶ್ವ ಪ್ರವಾಸೋದ್ಯಮ ದಿನದಂದು ಒಂದು ರಾಜ್ಯ, ಹಲವು ಜಗತ್ತನ್ನು ಆಚರಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನಮ್ಮ್ ರಾಜ್ಯಕ್ಕೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು. ಮಧ್ಯಪ್ರದೇಶದಲ್ಲಿ ನೈಸರ್ಗಿಕ ಮತ್ತು ಮಾನವನಿರ್ಮಿತವಾದ ಹಲವು ಪ್ರವಾಸೀ ತಾಣಗಳಿವೆ. ನಮ್ಮ ಸುಂದರ ರಾಜ್ಯಕ್ಕೆ ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತೇನೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.

ಮರಳ ಚಿತ್ರದಲ್ಲಿ ಪ್ರವಾಸೋದ್ಯಮ ದಿನಕ್ಕೆ ಶುಭಾಶಯ

ಪ್ರವಾಸೋದ್ಯಮ ಎಂಬುದು ಪ್ರಗತಿಯ ಒಂದು ಸಾಧನ ಎಂಬ ಸಂದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಕ್ಕೆ ಖ್ಯಾತ ಮರುಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಶುಭಕೋರಿದ್ದಾರೆ.

ಸುನಿಲ್ ಶರ್ಮಾ

ಜೀವನ ಒಂದು ಪಯಣ. ಹೆಚ್ಚು ಪ್ರಯಾಣ ಮಾಡಿದಷ್ಟೂ ಹೆಚ್ಚು ಜ್ಞಾನ ಬೆಳೆಯುತ್ತದೆ, ಹೆಚ್ಚು ಅನುಭವ ಲಭಿಸುತ್ತದೆ. ಯಾವಾಗಲೂ ಪ್ರಯಾಣ ಮಾಡುತ್ತಿರಿ, ಕಲಿಯುತ್ತಿರಿ, ಬದುಕುತ್ತಿರಿ, ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು ಎಂದು ಸುನಿಲ್ ಶರ್ಮಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅನಂತಕುಮಾರ್

ಮನಮೋಹಕ ಕರಾವಳಿ, ಪಶ್ಚಿಮಘಟ್ಟ, ಮಲೆನಾಡು ಎಂಬುದು ಕರ್ನಾಟಕದ ಶ್ರೀಮಂತಿಕೆ. ನಮ್ಮ ಕರ್ನಾಟಕದ ಅನನ್ಯ ಪ್ರವಾಸಿ ತಾಣಗಳನ್ನು ನೆನೆಯುತ್ತ, ವಿಶ್ವ ಪ್ರವಾಸೋದ್ಯಮ ದಿನಕ್ಕೆ ಶುಭಾಶಯಗಳು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

English summary
World has been celebrating World Tourism day Since 1980 on 27th of September of every year. Prime Minister of India Narendra Modi and Karnataka chief minister Siddaramaiah convey their wishes on tourism day to the people through twitter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X