ದಾವಣಗೆರೆ-ತುಮಕೂರು-ಚಿತ್ರದುರ್ಗ ನೇರ ರೈಲು ಮಾರ್ಗ ಯಾವಾಗ ಪೂರ್ಣ?-ಇಲ್ಲಿದೆ ಮಾಹಿತಿ

ಬೆಂಗಳೂರು, ಆಗಸ್ಟ್‌, 15: ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳಿ ನಡೆಯುತ್ತಲೇ ಇವೆ. ಹಾಗೆಯೇ ರಾಜ್ಯಕ್ಕೆ ಮಂಜೂರು ಮಾಡಿದ್ದ ರೈಲ್ವೆ ಕೋಚ್‌ ಫ್ಯಾಕ್ಟರಿ ಸೇರಿ ಹಲವು ರೈಲು ಮಾರ್ಗಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸಚಿವ ವಿ.ಸೋಮಣ್ಣ ಅವರಿಗೆ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಮನವಿ ಮಾಡಿದರು. ಇದಕ್ಕೆ ಸಚಿವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿದ ಕೆ.ಎಚ್‌.ಮುನಿಯಪ್ಪ, ದಕ್ಷಿಣ ಭಾರತದಲ್ಲಿಯೇ ಎರಡನೇ ಅತೀ ದೊಡ್ಡ ರೈಲ್ವೆ ಕೋಚ್‌ ಫ್ಯಾಕ್ಟರಿ ಶ್ರೀನಿವಾಸಪುರದಲ್ ಲಿಕಾರ್ಯಾರಂಭ ಮಾಡಬೇಕಿತ್ತು. ಅದನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸೋಮಣ್ಣ ಅವರಿಗೆ ಆಗ್ರಹಿಸಿದರು.

When will be Davanagere-Tumakuru-Chitradurga direct railway line completed

ತಮ್ಮ ಅವಧಿಯಲ್ಲಿ ಮಂಜೂರು ಮಾಡಿದ್ದ ವೈಟ್‌ಫೀಲ್ಡ್‌-ಕೋಲಾರ ರೈಲು ಮಾರ್ಗ, ಕಡಪದಿಂದ-ಕೆಜಿಎಫ್‌ ಮಾರ್ಗ, ಚಿಕ್ಕಮಂಗಳೂರು-ಸಕಲೇಶಪುರದ ಮಾರ್ಗ, ಬೆಂಗಳೂರು-ಕೊಳ್ಳೇಗಾಲ ಮಾರ್ಗ, ಚಿಕ್ಕಬಳ್ಳಾಪುರ-ಪ್ರಶಾಂತನಗರ (ಪುಟ್ಟಪರ್ತಿ) ಮಾರ್ಗ, ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗ, ಮೈಸೂರು-ಕುಶಾಲನಗರ ಮಾರ್ಗ, ದಾವಣಗೆರೆ-ತುಮಕೂರು, ಚಿತ್ರದುರ್ಗ ಮಾರ್ಗ, ರಾಯದುರ್ಗ-ತುಮಕೂರು ರೈಲು ಮಾರ್ಗಗಳನ್ನು ತಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಎಂದು ಸೋಮಣ್ಣ ಅವರಿಗೆ ಮನವಿ ಮಾಡಿದರು.

ಅಂದು ಸಚಿವನಿದ್ದಾಗ ಕಾರ್ಯಾರಂಭ ಮಾಡಿದ್ದು ಇವುಗಳನ್ನು ಅತೀ ಶೀಘ್ರದಲ್ಲಿ ಸೋಮಣ್ಣನವರು ಪ್ರಾರಂಭಿಸಿ ಪೂರ್ಣಗೊಳಿಸಲು ಮನವಿ ಮಾಡಿದರು. ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡ ರೈಲ್ವೆ ಕೋಚ್‌ ಫ್ಯಾಕ್ಟರಿ ಚೆನ್ನೈನ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ ಮತ್ತು ಎರಡನೇ ಕೋಚ್‌ ಫ್ಯಾಕ್ಟರಿ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಆರಂಭಿಸಿದ್ದರು.

ಇದಕ್ಕೆ ಸುಮಾರು 1,200 ಹೆಕ್ಟೇರ್‌ ಪ್ರದೇಶವನ್ನು ಯೋಜನೆಗೆ ಮೀಸಲಿಟ್ಟಿದ್ದು, ಅಂದಿನ ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಹಾಗೂ ಡಿವಿಷನಲ್‌ ರೈಲ್ವೆ ಮ್ಯಾನೇಜರ್‌ ಉದ್ಘಾಟನೆ ಮಾಡಿ ಆಶ್ವಾಸನೆ ನೀಡಿದ್ದರು. ಇದೀಗ ಇದನ್ನು ಕಾರ್ಯಾರಂಭ ಮಾಡಿ ಪೂರ್ಣಗೊಳಿಸಲು ಸೋಮಣ್ಣ ಅವರಲ್ಲಿ ಮನವಿ ಮಾಡಿದರು.

ಇನ್ನು ಘಟಪ್ರಭಾ ಪಂಢರಪುರದ ಪಾಂಡುರಂಗನ ದರ್ಶನಕ್ಕೆ ತೆರಳುವ ಜಿಲ್ಲೆಯಲ್ಲಿನ ಭಕ್ತರ ಅನುಕೂಲಕ್ಕಾಗಿ ಯಶವಂತಪುರ-ಪಂಢರಪುರ ಎಕ್ಸ್‌ಪ್ರೆಸ್‌ ರೈಲನ್ನು ಘಟಪ್ರಭಾ ಹಾಗೂ ರಾಯಬಾಗ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆದೇಶಿಸಿದ್ದಾರೆ. ಈ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ವಿ.ಸೋಮಣ್ಣನವರು ಈ ಆದೇಶ ಮಾಡಿದ್ದಾರೆ. ಪಂಢರಪುರಕ್ಕೆ ಹೋಗುವ ಭಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+