Weekly Express Train: ಬೆಂಗಳೂರಿನ ಯಶವಂತಪುರದಿಂದ ಈ ಮಾರ್ಗಕ್ಕೆ ವಿಶೇಷ ರೈಲು-ಸಮಯ, ದಿನಾಂಕಗಳ ವಿವರ ಹೀಗಿದೆ
ಬೆಂಗಳೂರು, ಏಪ್ರಿಲ್, 6: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆ ನಿಯಂತ್ರಿಸುವ ಸಲುವಾಗಿ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಈ ಬೆಂಗಳೂರಿನ ಯಶವಂತಪುರದಿಂದ ಈ ಮಾರ್ಗಕ್ಕೆ ವಿಶೇಷ ರೈಲು ಬಿಡಲು ನಿರ್ಧರಿಸಿದೆ. ಹಾಗಾದರೆ ಸಮಯ, ಟಿಕೆಟ್ ದರ, ಮಾರ್ಗ ಹಾಗೂ ದಿನಾಂಕಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಗ ಬೇಸಿಗೆ ರಜೆ ಹಿನ್ನೆಲೆ ತುಂಬಾ ಜನರು ಬೆಂಗಳೂರಿನಿದ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದಾರೆ. ಅದರಲ್ಲೂ ಈ ವೇಳೆ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಈ ಮಾರ್ಗಗಳ ಮಧ್ಯೆ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಬಿಡಲು ರೈಲ್ವೆ ಇಲಾಖೆ ಮುಂದಾಗಿದೆ.

ಹೌರಾ-ಯಶವಂತಪುರ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು ಸಂಚಾರ ಮಾಡಲಿದೆ ಎಂದು ಆಗ್ನೇಯ ರೈಲ್ವೆ ಮಾಹಿತಿ ನೀಡಿದೆ. ರೈಲು ಸಂಖ್ಯೆ 02863 ಹೌರಾ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 11ರಂದು ಮಧ್ಯಾಹ್ನ 12:40ಕ್ಕೆ ಹೌರಾದಿಂದ ಹೊರಡಲಿದ್ದು, ಏಪ್ರಿಲ್ 14ರ ಬೆಳಗ್ಗೆ 12:15ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.
ರೈಲು ಸಂಖ್ಯೆ 02864 ಯಶವಂತಪುರ-ಹೌರಾ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 6 ಮತ್ತು 13ರಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಯಶವಂತಪುರದಿಂದ ಹೊರಡಲಿದ್ದು, ಕ್ರಮವಾಗಿ ಏಪ್ರಿಲ್ 15 ಮತ್ತು 22ರಂದು ಮಧ್ಯಾಹ್ನ 1:25ಕ್ಕೆ ಹೌರಾಗೆ ಆಗಮಿಸಲಿದೆ ಎಂದು ತಿಳಿಸಿದೆ.
ಸಮಯ ಬದಲಾವಣೆ: ರೈಲು ಸಂಖ್ಯೆ 06532 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ರೈಲಿನ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಈ ರೈಲು ಚಿಕ್ಕಬಳ್ಳಾಪುರದಿಂದ ಸಂಜೆ 6:45ಕ್ಕೆ ಹೊರಟು ರಾತ್ರಿ 9 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇದು ನಂದಿ ಹಾಲ್ಟ್, ವೆಂಕಟಗಿರಿ ಕೋಟೆ, ಆವತಿಹಳ್ಳಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೈಲು ನಿಲ್ದಾಣ, ದೊಡ್ಡಜಾಲ, ಬೆಟ್ಟಹಲಸೂರು, ಯಲಹಂಕ ಮತ್ತು ಬೈಯಪ್ಪನಹಳ್ಳಿಯಲ್ಲಿ ನಿಲುಗಡೆ ಆಗಲಿದೆ.
ರೈಲು ಮಾರ್ಗ ಬದಲಾವಣೆ: ಸೇಲಂ ರೈಲ್ವೇ ವಿಭಾಗದಲ್ಲಿ ಕಾಮಗಾರಿಗಳ ಕಾರಣ ಏಪ್ರಿಲ್ 6, 9, 11, 13, 21, ಮತ್ತು 24ರಂದು ಎರ್ನಾಕುಲಂನಿಂದ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಕೊಯಮತ್ತೂರು ಜಂಕ್ಷನ್‌ನಲ್ಲಿ ನಿಲುಗಡೆ ಬಿಟ್ಟು ಪೊದನೂರ್-ಇರುಗೂರ್ ಮೂಲಕ ಸಂಚಾರ ಮಾಡಲಿದೆ.












Click it and Unblock the Notifications