Virat Kohli: ಅನುಷ್ಕಾ ಕೈಯಲ್ಲಿ ಮೆಹಂದಿ, ಪಕ್ಕದಲ್ಲಿ ವಿರಾಟ್- ಹನಿಮೂನ್‌ಗಾಗಿ ವಿರುಷ್ಕಾ ಈ ಸ್ಥಳ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಳೆದೆರೆಡು ದಿನಗಳ ಹಿಂದೆಯಷ್ಟೇ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ ಕೀರ್ತಿ ವಿರಾಟ್ ಕೊಯ್ಲಿಗಿದೆ. ಹೀಗಾಗಿ ಲಕ್ಷಾಂತರ ಅಭಿಮಾನಿಗಳ ಪ್ರೀತಿ ವಿರಾಟ್ ಅವರು ಗಳಿಸಿದ್ದಾರೆ. ಆಟದ ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ವಿರಾಟ್ ಅವರು ಅವರ ವೈಯಕ್ತಿಕ ಜೀವನದ ವಿಷಯದಲ್ಲೂ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ಅಂದಹಾಗೆ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್ ಅವರ ಹನಿಮೂನ್ ವಿಚಾರ ಮುನ್ನೆಲೆಗೆ ಬಂದಿದೆ.
ವಿರಾಟ್ ಬಾಲಿವುಡ್ ನಟಿ ಅನುಷ್ಕಾ ಅವರನ್ನು ವರಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸಿನಿ ರಂಗದಲ್ಲಿ ಅನುಷ್ಕಾ ಹಾಗೂ ವಿರಾಟ್ ಜೋಡಿಯನ್ನು ಕ್ಯೂಟ್ ಜೋಡಿ ಅಂತಲೇ ಕರೆಯಲಾಗುತ್ತದೆ. ಅನುಷ್ಕಾ ಹಾಗೂ ವಿರಾಟ್ ಜಾಹೀರಾತಿನ ಮೂಲಕ ಟಿವಿ ಪರದೆಯ ಮೇಲೆ ಆಗಾಗಾ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇವರಿಬ್ಬರಿಗೀಗ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ. ಸದ್ಯ ಅನುಷ್ಕಾ ಹಾಗೂ ವಿರಾಟ್ ಅವರಿಗೆ ಇರುವ ಸಹಸ್ರಾರು ಅಭಿಮಾನಿಗಳು ಇವರಿಬ್ಬರ ಹನಿಮೂನ್ ಸ್ಪಾಟ್ ಅನ್ನು ತಿಳಿದುಕೊಳ್ಳಲು ಬಯಸಿದ್ದಾರೆ. ಮದುವೆಯ ನಂತರ ವಿರಾಟ್ ತಮ್ಮ ಪತ್ನಿ ಅನುಷ್ಕಾ ಜೊತೆ ಹನಿಮೂನ್‌ಗಾಗಿ ಫಿನ್‌ಲ್ಯಾಂಡ್‌ಗೆ ತೆರಳಿದ್ದರು. ಅಷ್ಟಕ್ಕೂ ಈ ದಂಪತಿ ಫಿನ್‌ಲ್ಯಾಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ? ಹೇಗಿದೆ ಫಿನ್‌ಲ್ಯಾಂಡ್?

ಹೇಗಿದೆ ಫಿನ್‌ಲ್ಯಾಂಡ್?
ಫಿನ್‌ಲ್ಯಾಂಡ್ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸ್ಥಳ. ನೋಡುಗರನ್ನ ಮಂತ್ರಮುಗ್ದರನ್ನಾಗಿಸುವ ದೇಶಗಳಲ್ಲಿ ಯುರೋಪಿಯನ್ ದೇಶ ಫಿನ್‌ಲ್ಯಾಂಡ್ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿನ ಮನಮೋಹಕ ಸ್ಥಳಗಳು ಪ್ರೇಮಿಗಳನ್ನು ಬಹುಬೇಗ ಆಕರ್ಷಿಸುತ್ತವೆ. ಕಣ್ಮನ ಸೆಳೆಯುವ ಹಚ್ಚ ಹಸಿರಿನ ತಾಣಗಳು, ತಂಪಾದ ವಾತಾವರಣ ಎಂಥವರನ್ನೂ ಮೋಡಿ ಮಾಡಿಬಿಡುತ್ತವೆ.
ಇನ್ನೂ ದೀಪಗಳು ಈ ದೇಶದಲ್ಲಿ ಭೇಟಿ ನೀಡಲು ಸಾಕಷ್ಟಿವೆ. ಇಲ್ಲಿ ಕಂಡು ಬರುವ ಉತ್ತರ ದೀಪಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಫಿನ್‌ಲ್ಯಾಂಡ್‌ಗೆ ಉತ್ತರ ದೀಪಗಳನ್ನು ನೋಡಲೆಂದೇ ಬರುತ್ತಾರೆ. ಈ ಸ್ಥಳಗಳು ನೋಡುಗರಿಗೆ ಸುಂದರ ಅನುಭವ ನೀಡುತ್ತವೆ.

ಸಾಂಟಾ ಕ್ಲಾಸ್ ಗ್ರಾಮ
ಇಲ್ಲಿನ ಮತ್ತೊಂದು ವಿಶೇಷ ಅಂದರೆ ಸಾಂಟಾ ಕ್ಲಾಸ್ ಗ್ರಾಮ. ಸಾಂಟಾ ಕ್ಲಾಸ್‌ನ ಜಗತ್ತನ್ನು ನೀವು ನೋಡುವ ಏಕೈಕ ದೇಶ ಅದು ಫಿನ್‌ಲ್ಯಾಂಡ್. ಇಲ್ಲಿಗೆ ಬಂದರೆ ಮಾಂತ್ರಿಕ ನಗರದಲ್ಲಿರುವಂತೆ ಭಾಸವಾಗುತ್ತದೆ. ಕ್ರಿಸ್ಮಸ್ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಾಂಟಾ ಕ್ಲಾಸ್ ಗ್ರಾಮ ತುಂಬಾ ವಿಭಿನ್ನವಾಗಿ ಆಕರ್ಷಕವಾಗಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ಬಂಡಿ ಸವಾರಿ ಮಾಡಿ ಪ್ರವಾಸಿಗರು ಆನಂದಿಸುತ್ತಾರೆ.
ಫಿನ್‌ಲ್ಯಾಂಡ್‌ನ ರಾಜಧಾನಿ
ಫಿನ್‌ಲ್ಯಾಂಡ್‌ನ ರಾಜಧಾನಿ ಹೆಲ್ಸಿಂಕಿ. ಫಿನ್‌ಲ್ಯಾಂಡ್‌ನ ರಾಜಧಾನಿ ಹೆಲ್ಸಿಂಕಿಗೆ ಅತ್ಯಂತ ಸಂತೋಷದಾಯಕ ನಗರ ಎಂಬ ಸ್ಥಾನಮಾನವನ್ನು ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಈ ನಗರ ತನ್ನ ಸುಂದರವಾದ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ನಗರದಲ್ಲಿ ಪ್ರೇಕ್ಷಣೀಯ ಸ್ಥಳಗಳು ಹಲವಾರು ಇವೆ.

ಪುರಾತನ ಕಲೆ, ಬೀದಿ ಆಹಾರ, ಪಬ್‌ಗಳು, ದ್ರಾಕ್ಷಿತೋಟಗಳು ಸೇರಿದಂತೆ ಅನೇಕ ವಿಶಿಷ್ಟ ವಸ್ತುಗಳನ್ನು ನೋಡಬಹುದು. ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಸುವೊಮೆನ್ಲಿನ್ನಾ ಫೋರ್ಟ್, ಲಿನ್ನಾನ್ಮಾಕಿ, ಸಿಬೆಲಿಯಸ್ ಸ್ಮಾರಕ, ಫಿನ್ಲ್ಯಾಂಡ್ ಹಾಲ್, ಡಿಸೈನ್ ಮ್ಯೂಸಿಯಂ ನೋಡಲು ಇಲ್ಲಿಗೆ ಬರುತ್ತಾರೆ.
ಕೋಲಿ ರಾಷ್ಟ್ರೀಯ ಉದ್ಯಾನವನ
ಫಿನ್‌ಲ್ಯಾಂಡ್‌ನ ಕೋಲಿ ರಾಷ್ಟ್ರೀಯ ಉದ್ಯಾನವನ ಪ್ರಪಂಚದಾದ್ಯಂತ ಸಾಕಷ್ಟು ಖ್ಯಾತಿ ಪಡೆದಿದೆ. ಈ ಉದ್ಯಾನವನದಲ್ಲಿ ಸುಂದರವಾದ ಸರೋವರವನ್ನು ಕಾಣಬಹುದು. ಇದಲ್ಲದೆ ಇಲ್ಲಿ ಎತ್ತರದ ಮತ್ತು ಸುಂದರವಾದ ಬೆಟ್ಟಗಳು ಉದ್ಯಾನದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಸೌಂದರ್ಯದ ವಿಷಯದಲ್ಲಿ ಈ ಉದ್ಯಾನವನ್ನು ಸ್ವಿಟ್ಜರ್ಲೆಂಡ್‌ಗೆ ಹೋಲಿಸಲಾಗಿದೆ.

ಹಿಮಪಾತದ ಸ್ಥಳದಲ್ಲಿ ಮಿಲನ
ಹಿಮಪಾತವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎನ್ನುವ ಆಸೆ ಯಾರಿಗೆ ಇರುವುದಿಲ್ಲ. ಅದೆಷ್ಟೋ ಜನ ಹಿಮಪಾತವಾಗುವ ಸ್ಥಳಗಳಲ್ಲಿ ತಮ್ಮ ದಾಂಪತ್ಯ ಜೀವನ ಆರಂಭಿಸಲು ಬಯಸುತ್ತಾರೆ. ಅದೇ ರೀತಿ ವಿರುಷ್ಕಾ ಕೂಡ ತಮ್ಮ ಹನಿಮೂನ್‌ಗಾಗಿ ಹಿಮಪಾತವಾಗುವ ಫಿನ್‌ಲ್ಯಾಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.
ಫಿನ್‌ಲ್ಯಾಂಡ್‌ಗೆ ಭೇಟಿ ನೀಡುವ ಸಮಯ
ಫಿನ್‌ಲ್ಯಾಂಡ್ ಯಾವಾಗಲೂ ತಂಪಾಗಿರುತ್ತದೆ. ಆದ್ದರಿಂದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳು ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮವಾಗಿದೆ. ಈ ಅವಧಿಯಲ್ಲೂ ಶೀತಗಾಳಿ ಇಲ್ಲಿ ಹೆಚ್ಚಾಗಿರುತ್ತದೆ. ಆದರೆ ಇತರ ತಿಂಗಳುಗಳಿಗೆ ಹೋಲಿಸಿದರೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳು ಕಡಿಮೆ ಇರುತ್ತದೆ.
ಈ ಎಲ್ಲಾ ಸುಂದರ ಸ್ಥಳಗಳನ್ನು ಅನುಷ್ಕಾ ದಂಪತಿ ಕಣ್ತುಂಬಿಕೊಂಡು ತಮ್ಮ ಜೀವನದ ಶುಭ ಆರಂಭ ಮಾಡಿತ್ತು. ಈ ಸ್ಥಳಕ್ಕೆ ಭೇಟಿ ನೀಡಿದಾಗ ಅನುಷ್ಕಾ ಕೈಯಲ್ಲಿದ್ದ ಮೆಹಂದಿ ಮಾಸಿರಲಿಲ್ಲ. ಇವರಿಬ್ಬರ ಹನಿಮೂನ್ ಫೋಟೋಗಳನ್ನು ಅಭಿಮಾನಿಗಳು ನೋಡಿ ಖುಷಿ ಪಟ್ಟಿದ್ದಾರೆ. ಈ ಜೋಡಿ ಸದಾ ಹೀಗೆ ಖುಷಿಯಾಗಿ ಇರಲಿ ಎಂದು ಹಾರೈಸಿದ್ದಾರೆ.












Click it and Unblock the Notifications