Vande Metro: 2024ರ ಆರಂಭದಲ್ಲಿ ಟ್ರ್ಯಾಕ್‌ಗಿಳಿಯಲಿರುವ ವಂದೇ ಮೆಟ್ರೋದಲ್ಲಿ ಏನೆಲ್ಲ ಸೌಲಭ್ಯಗಳಿರಲಿವೆ ಗೊತ್ತಾ?
ವಿಶ್ವದರ್ಜೆಯ ಸೌಲಭ್ಯಗಳನ್ನುನವದೆಹಲಿ, ಅಕ್ಟೋಬರ್, 19: ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಸಂಚಾರ ಮಾಡುತ್ತಿರುವ ವಂದೇ ಭಾರತ್ ರೈಲು ಜನಮನ್ನಣೆಯನ್ನು ಪಡೆದಿದೆ. ಅಲ್ಲದೆ ಇದೀಗ ಈ ರೈಲನ್ನು ಬೇರೆ ರೂಪಗಳಲ್ಲಿ ಬಿಡಲು ಭಾರತೀರ ರೈಲ್ವೆ ನಿರ್ಧಾರ ಮಾಡಿದೆ. ಹಾಗೆಯೇ 2024ರ ಆರಂಭದಲ್ಲಿ ವಂದೇ ಭಾರತ್ ಮೆಟ್ರೋ ರೈಲುಗಳು ಸಂಚಾರ ಆಂರಭಿಸಲಿದೆ. ಹಾಗಾದರೆ ಇದರ ವಿಶೇಷತೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಕಡಿಮೆ ಅಂತರದ ಪ್ರಯಾಣಕ್ಕಾಗಿ ವೇಗದ, ಸಂಪೂರ್ಣ ವಾಯುನಿಯಂತ್ರಿತ ವಂದೇ ಭಾರತ್ ಮೆಟ್ರೋ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇದರ ಗರಿಷ್ಠ ವೇಗ ಗಂಟೆಗೆ 130 ಕಿಲೋ ಮೀಟರ್ ಇರಲಿದೆ ಎಂದು ರೈಲ್ವೆ ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ. 300 ಕಿಲೋ ಮೀಟರ್‌ವರೆಗಿನ ದೂರದ ಪ್ರಯಾಣಕ್ಕಾಗಿ ವಂದೇ ಮೆಟ್ರೋ ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ.

ಭವಿಷ್ಯದಲ್ಲಿ ಇದು ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ ರೈಲುಗಳ ಪರ್ಯಾಯ ಆಗಲಿದೆ. ಮೊದಲ ವಂದೇ ಭಾರತ್ ಮೆಟ್ರೋ ರೈಲಿನ ತಯಾರಿಕೆ ಕಾರ್ಯವು ಚೆನ್ನೈನ ರೈಲ್ವೆ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ನಡೆಯು ತ್ತಿದೆ ಎಂದು ಐಸಿಎಫ್ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಮಲ್ಯ ಮಾಹಿತಿ ನೀಡಿದ್ದಾರೆ.
ವಂದೇ ಮೆಟ್ರೋ ರೈಲುಗಳ ಪ್ರತಿ ಕೋಚ್‌ನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು 100 ಆಸನಗಳು ಇರಲಿದ್ದು, 200 ಮಂದಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಸ್ಥಳಾವಕಾಶ ಇರಲಿದೆ. ಸಿಸಿಟಿವಿ ಕ್ಯಾಮೆರಾಗಳು, ಎಲ್‌ಸಿಡಿ ಡಿಸ್‌ಪ್ಲೇ, ಹವಾ ನಿಯಂತ್ರಿತ ವ್ಯವಸ್ಥೆ, ಮಾಡ್ನೂಲರ್ ಶೌಚಾಲಯ, ಮೊಬೈಲ್ ಚಾರ್ಜಿಂಗ್ ಸಾಕೆಟ್ ಸೇರಿ ಅತ್ಯಾಧುನಿಕ ಸೌಲಭ್ಯ ಹೊಂದಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ ವಂದೇ ಭಾರತ್
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಿನದಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಲೇ ಇದೆ. ಇದು ಹೈಸ್ಪೀಡ್ ರೈಲಾಗಿದ್ದು, ಭಾರಿ ಜನಮನ್ನಣೆಯನ್ನೂ ಪಡೆದಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲು ವೇಗವಾಗಿ ಚಲಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲೇ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಇದು ಭಾರತೀಯ ರೈಲ್ವೇಯಿಂದ ಪ್ರಾರಂಭವಾಗಿದೆ. ಆಗಿನಿಂದ ಈ ರೈಲು ಭಾರತದಲ್ಲಿ ಪ್ರಸಿದ್ಧಿ ಎನ್ನುವ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಭಾರತೀಯ ರೈಲ್ವೆಯ ವಿಭಾಗವಾದ ದಕ್ಷಿಣ ರೈಲ್ವೆಯು ಚೆನ್ನೈ-ಮೈಸೂರು ಮಾರ್ಗದ ನಡುವೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸುಂದರವಾದ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಜನರು ಇದಕ್ಕೆ ಭಾರಿ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದ್ದರು.
ಚೆನ್ನೈ-ಮೈಸೂರು ಮಾರ್ಗದ ಮಧ್ಯೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಡಿಯೋವನ್ನು ದಕ್ಷಿಣ ರೈಲ್ವೆಯು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಇದು 130 kmph ವೇಗದಲ್ಲಿ ಕಾರ್ಯಾಚರಣೆ ಮಾಡುತ್ತದೆ. ಈ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುವ ದೃಶ್ಯವನ್ನು ನೋಡಲು ಹಲವಾರು ಜನರು ಕಾಯುತ್ತಿದ್ದರು. ರೈಲ್ವೆ ಇಲಾಖೆ ಹಂಚಿಕೊಂಡ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.












Click it and Unblock the Notifications