Vande Bharat Express: ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ಕಾರ್ಯಾಚರಣೆ ಯಾವಾಗ?-ಮಾಹಿತಿ, ವಿವರ

Vande Bharat Express: ಈಗಾಗಲೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಐಷಾರಾಮಿ ರೈಲು ದೇಶದ ಪ್ರಮುಖ ನಗರದಲ್ಲಿ ಸಂಚಾರ ಆರಂಭಿಸಿದೆ. ಅಲ್ಲದೆ ಹೆಚ್ಚೆಚ್ಚು ಪ್ರಯಾಣಿಕರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ. ಹಾಗೆಯೇ ಇದೀಗ ಎರ್ನಾಕುಲಂ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲಿಗೆ ಕೆಲ ದಿನಗಳಿಂದ ಬೇಡಿಕೆ ಇತ್ತು. ಆದರೂ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಸೌಲಭ್ಯ ಇಲ್ಲದ ಕಾರಣ ಇದುವರೆಗೂ ಈ ಮಾರ್ಗದಲ್ಲೆ ಸೇವೆಯನ್ನು ಒದಗಿಸಿರಲಿಲ್ಲ.

ದೇಶಾದ್ಯಂತ ಜನಪ್ರಿಯವಾಗುತ್ತಿರುವ ವಂದೇ ಭಾರತ್ ರೈಲು ವಿವಿಧ ಮಾರ್ಗಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ರೈಲು ಸೆಲೆಬ್ರಿಟಿಗಿಂತ ಕಡಿಮೆ ಇಲ್ಲ. ಪ್ರತಿಯೊಬ್ಬ ಪ್ರಯಾಣಿಕರು ಈ ರೈಲು ತಮ್ಮ ನಗರದ ಮೂಲಕ ಹಾದು ಹೋಗಬೇಕು ಎಂದು ಬಯಸುತ್ತಾರೆ. ಹಾಗೆಯೇ ಇದೀಗ ಶೀಘ್ರದಲ್ಲೇ ವಂದೇ ಭಾರತ್ ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಕಾರ್ಯಾಚರಿಸಲಿದೆ ಎಂದು ಹೇಳಲಾಗುತ್ತಿದೆ.

Vande Bharat Express When is the Vande Bharat operation between Bengaluru-Ernakulam Know details

ರೈಲು ಸೇವೆಯ ಸಮಯಗಳ ವಿವರ: ಒಂದು ವೇಳೆ ಇದು ನಿಜವಾದರೆ ದಕ್ಷಿಣ ಭಾರತದ ಎರಡು ಅತಿ ಹೆಚ್ಚು ಜನನಿಬಿಡ ರೈಲು ನಿಲ್ದಾಣಗಳಲ್ಲಿ ದಟ್ಟಣೆಯನ್ನು ನಿವಾರಿಸಿದಂತಾಗುತ್ತದೆ. ಹಾಗೂ ಈ ಭಾಗದ ಜನರಿಗೆ ರೈಲು ಸೇವೆಯ ಕೊರತೆಯನ್ನು ನೀಗಿಸಿದಂತಾಗುತ್ತದೆ. ಮೂಲಗಳ ಪ್ರಕಾರ, ರೈಲು ಎರ್ನಾಕುಲಂನಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 1:35ಕ್ಕೆ ಬೆಂಗಳೂರು ತಲುಪಲಿದೆ. ಮತ್ತೆ ಈ ರೈಲು ಬೆಂಗಳೂರಿನಿಂದ ಮಧ್ಯಾಹ್ನ 2:05ಕ್ಕೆ ಹೊರಟು ರಾತ್ರಿ 10:45ಕ್ಕೆ ಎರ್ನಾಕುಲಂ ತಲುಪಲಿದೆ. ಈ ವಂದೇ ಭಾರತ್ ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ಈರೋಡ್ ಮತ್ತು ಸೇಲಂನಂತಹ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಕೇರಳದಲ್ಲಿ ವಂದೇ ಭಾರತ್ ರೈಲುಗಳು ಭಾರೀ ಪ್ರಸಿದ್ಧಿಯಾಗಿವೆ. ಎರ್ನಾಕುಲಂ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲಿಗೆ ಕೆಲ ದಿನಗಳಿಂದ ಬೇಡಿಕೆ ಇದ್ದರೂ, ನಿರ್ವಹಣಾ ಕಾಮಗಾರಿ ಕೈಗೊಳ್ಳಲು ಯಾವುದೇ ಸೌಲಭ್ಯ ಕಲ್ಪಿಸದ ಕಾರಣ ಇನ್ನೂ ಒದಗಿಸಿಲ್ಲ. ಆದರೂ, ಎರ್ನಾಕುಲಂನಲ್ಲಿ ವಿದ್ಯುದ್ದೀಕರಿಸಿದ ಪಿಟ್ ಲೈನ್ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.

ಕೇರಳ ಸಂಸದ ಹೈಬಿ ಈಡನ್ ಅವರು ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ವಂದೇ ಭಾರತ್ ಓಡಿಸುವ ಬಗ್ಗೆ ವಿವರಿಸಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ 5 ಗಂಟೆಗೆ ಈ ರೈಲು ಓಡಿಸಿದರೆ, ಹೆಚ್ಚಿನ ಪ್ರಯಾಣಿಕರಿಗೆ ಇದರ ಪ್ರಯೋಜನವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+