ರಾಮನಗರದ ಬಳಿ ಏಕಾಏಕಿ ಬೇರ್ಪಟ್ಟ ರೈಲು ಬೋಗಿ, ರೈಲ್ವೆ ಅಧಿಕಾರಿಗಳು ಹೇಳಿದ್ದೇನು?, ಇಲ್ಲಿದೆ ವಿವರ

ರಾಮನಗರ, ಏಪ್ರಿಲ್‌, 24: ಭಾನುವಾರ (ಏಪ್ರಿಲ್ 23) ಮೈಸೂರು-ತೂತುಕುಡಿ ಎಕ್ಸ್‌ಪ್ರೆಸ್ (16236) ರೈಲಿನ ಬೋಗಿಗಳು ಬೇರ್ಪಟ್ಟ ಘಟನೆ ರಾಮನಗರ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೋಚ್‌ಗಳು ಬೇರ್ಪಟ್ಟ ಕಾರಣ ಆತಂಕಕ್ಕೆ ಒಳಗಾಗಿದ್ದು, ಸದ್ಯ ಪ್ರಯಾಣಿಕರಿಗೆ ಯಾವುದೆ ಸಮಸ್ಯೆಗಳು ಆಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಕಡೆಗೆ ಹೊರಟಿದ್ದ ಈ ರೈಲು ರಾತ್ರಿ 8 ಗಂಟೆ ಸುಮಾರಿಗೆ ರಾಮನಗರ ನಿಲ್ದಾಣ ತಲುಪಿತು. ಆಗ ಕೋಚ್‌ಗಳು ಬೇರ್ಪಟ್ಟ ವಿಷಯ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Two Coaches suddenly separated from moving Mysuru-Thoothukudi Express train in Ramanagara

ದಿ ಹಿಂದೂ ವರದಿ ಮಾಡಿದ ಪ್ರಕಾರ ಕಪ್ಲಿಂಗ್ ಮುರಿದ ನಂತರ, ಕೋಚ್ ಸಂಖ್ಯೆ 5 ಮತ್ತು 6 ಅನ್ನು ಪ್ರತ್ಯೇಕಿಸಲಾಗಿದೆ. ಘಟನೆಯ ನಂತರ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಹಂಪಿ ಎಕ್ಸ್‌ಪ್ರೆಸ್ ಮತ್ತು ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ವಸತಿ ಕಲ್ಪಿಸಲಾಗಿದೆ. ತೂತುಕುಡಿಗೆ ಟಿಕೆಟ್ ಕಾಯ್ದಿರಿಸಿದವರನ್ನು ಅಗತ್ಯ ದುರಸ್ತಿ ಕಾರ್ಯದ ನಂತರ ಅದೇ ರೈಲಿನಲ್ಲಿ ಕಳುಹಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಈ ಘಟನೆಯು ಬೆಂಗಳೂರು-ಮೈಸೂರು ವಿಭಾಗದಲ್ಲಿ ರೈಲು ಸಂಚಾರದ ಮೇಲೆ ಪರಿಣಾಮ ಬೀರಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ರೈಲು ಮೈಸೂರಿನಿಂದ ಬೆಂಗಳೂರು ಕಡೆಗೆ ಬರುತ್ತಿತ್ತು.

ಆಗ ಅಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದು, ಅದನ್ನು ರಾಮನಗರದಲ್ಲಿ ಬೇರ್ಪಡಿಸಲಾಗಿದೆ. ನಿಗದಿತ ತಪಾಸಣೆಯ ಸಮಯದಲ್ಲಿ, ನಾವು ಕೋಚ್‌ನಲ್ಲಿ ಸಮಸ್ಯೆಯನ್ನು ಕಂಡುಕೊಂಡಿದ್ದೇವೆ. ಮತ್ತು ಸೈಟ್‌ನಲ್ಲಿನ ಎಂಜಿನಿಯರ್‌ಗಳು ಸಮಸ್ಯೆಯನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡರು. ಅಲ್ಲದೆ ನಿಗದಿತ ಸ್ಥಳಗಳಿಗೆ ಪ್ರಯಾಣಿಕರನ್ನು ಕಳುಹಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಕೋಚ್‌ನಲ್ಲಿನ ಸಮಸ್ಯೆಗಳನ್ನು ನಾವು ಪರಿಶೀಲಿಸಿದ್ದೇನೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+