Get Updates
Get notified of breaking news, exclusive insights, and must-see stories!

ಪ್ರವಾಸಿಗರಿಗೆ ಮೈಸೂರು ಬೆಸ್ಟ್‌ ಸ್ಥಳ ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮೈಸೂರು, ಮಾರ್ಚ್ 03: ವಾರಪೂರ್ತಿ ಕೆಲಸದ ಒತ್ತಡದಲ್ಲಿದ್ದವರು ವಾರಾಂತ್ಯದ ದಿನವನ್ನು ಒಂದಷ್ಟು ಖುಷಿಯಾಗಿ, ನೆಮ್ಮದಿಯಾಗಿ ಪ್ರಕೃತಿ ಮಡಿಲಲ್ಲಿ ಕಳೆಯಬೇಕೆಂದು ಬಯಸುವುದು ಸಹಜ. ಹೀಗಾಗಿ ವಾರಕ್ಕೊಂದು ಹೊಸ ತಾಣಗಳನ್ನು ಅರಸಿಕೊಂಡು ಹೋಗುವುದು ಕೆಲವರಿಗೆ ಹವ್ಯಾಸವಾಗಿದೆ. ಹೀಗೆ ಹೋಗುವವರಿಗೆ ಬೆಟ್ಟ, ಗುಡ್ಡ, ಕಾಡು, ಮೇಡು, ನದಿ, ದೇಗುಲ ಹೀಗೆ ಎಲ್ಲವನ್ನೂ ಒಳಗೊಂಡ ತಾಣ ಸಿಕ್ಕಿಬಿಟ್ಟರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ. ಹಾಗಾದರೆ ಇಂತಹದೊಂದು ತಾಣ ಎಲ್ಲಿದೆ ಎಂಬ ಪ್ರಶ್ನೆಗಳು ತಲೆತುಂಬಾ ಗಿರಕಿ ಹೊಡೆಯಲು ಆರಂಭಿಸಿರಬಹುದಲ್ಲವೆ?

ವಾರಾಂತ್ಯದಲ್ಲಿ ಸಿಗುವ ಎರಡು ದಿನದ ರಜೆಯಲ್ಲಿ ನೂರಾರು ಕಿ.ಮೀ. ದೂರದ ತಾಣಗಳಿಗೆ ಹೋಗಿ ಬರುವುದು ಕೆಲವೊಮ್ಮೆ ವಾರಪೂರ್ತಿ ಮಾಡಿದ ಕೆಲಸಕ್ಕಿಂತಲೂ ತ್ರಾಸ ಎನಿಸಬಹುದು. ಹೀಗಾಗಿ ನಮ್ಮ ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಿ ಒಂದಷ್ಟು ಸಮಯ ಕಳೆದು ಬರುವುದು ಜಾಣತನವಾಗುತ್ತದೆ. ಇದರಿಂದ ಪ್ರಯಾಣದ ಸುಸ್ತಾಗಲೀ, ಹೆಚ್ಚಿನ ಹಣ ಖರ್ಚಾಗಲೀ ಆಗುವುದಿಲ್ಲ. ಬದಲಿಗೆ ವಿಶ್ರಾಂತಿಗೆ ಸಮಯವೂ ಸಿಗುತ್ತದೆ.

Travel News Why Mysuru Is The Best Place For Tourists

ಹಾಗೆನೋಡಿದರೆ ಮೈಸೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಪ್ರವಾಸ ಹೊರಡುವವರಿಗೆ ಹತ್ತು ಹಲವು ಅನುಕೂಲಗಳಿವೆ. ಮೈಸೂರು ವ್ಯಾಪ್ತಿಯಲ್ಲಿಯೇ ಹತ್ತಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ನೋಡಿಕೊಂಡು ಮೈಸೂರಿಗೆ ಹೊಂದಿಕೊಂಡಂತೆ ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಇರುವುದರಿಂದ ಇಲ್ಲಿರುವ ನಿಸರ್ಗ ಸುಂದರ ತಾಣಗಳಿಗೆ ಭೇಟಿ ನೀಡಿ ಪ್ರಾಕೃತಿಕ ಚೆಲುವಿಗೆ ಮೈಯೊಡ್ಡಿ ಒತ್ತಡ ಕಳೆದುಕೊಂಡು, ಮಾನಸಿಕ ಕ್ಷೋಬೆಯನ್ನು ದೂರಮಾಡಿ ಮೈಮನ ಹಗುರ ಮಾಡಿಕೊಂಡು ಬರಲು ಸಾಧ್ಯವಾಗಲಿದೆ.

ಮೈಸೂರಿನಿಂದ ಪ್ರವಾಸ ಹೊರಡಬಹುದು

ಮೈಸೂರು ನಗರದಲ್ಲಿ ವಾಸ್ತವ್ಯ ಹೂಡಿ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್ ಮಾಡಿದರೆ ಇನ್ನು ಒಳ್ಳೆಯದು. ಮೈಸೂರಿನಿಂದ ಕೊಡಗು, ಚಾಮರಾಜನಗರ ಮತ್ತು ಮಂಡ್ಯಕ್ಕೆ ಬಸ್ ಸೇರಿದಂತೆ ಬಾಡಿಗೆ ವಾಹನಗಳ ಸೌಕರ್ಯವಿದೆ. ಒಂದು ವೇಳೆ ಸ್ವಂತ ವಾಹನಗಳಲ್ಲಿ ತೆರಳುವವರು ಸುತ್ತಮುತ್ತಲ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳಿದರೂ ರಾತ್ರಿಯಾಗುತ್ತಿದ್ದಂತೆಯೇ ಮೈಸೂರಿಗೆ ತಲುಪಲು ಯಾವುದೇ ಅಡ್ಡಿಯಾಗುವುದಿಲ್ಲ.

ಮೈಸೂರಿನಿಂದ ಕೊಡಗಿಗೆ ಪ್ರವಾಸ ಹೊರಡುವ ಯೋಜನೆಯನ್ನು ಮಾಡಿಕೊಂಡಿದ್ದರೆ ಬೆಳಿಗ್ಗೆ ಹೊರಟರೆ ಹೋಗುವ ಮಾರ್ಗದಲ್ಲಿಯೇ ಕುಶಾಲನಗರ ಬಳಿ ಟಿಬೆಟಿಯನ್ ರ ಗೋಲ್ಡನ್ ಟೆಂಪಲ್ ಮುಂದಕ್ಕೆ ತೆರಳಿದರೆ ಕಾವೇರಿ ನಿಸರ್ಗಧಾಮ, ಅಲ್ಲಿಂದ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಹಾರಂಗಿ ಜಲಾಶಯ ಅದನ್ನು ನೋಡಿಕೊಂಡು ಮತ್ತೆ ಕುಶಾಲನಗರ ಕಡೆಗೆ ಬಂದು ಅಲ್ಲಿಂದ ಎಡಕ್ಕೆ ಸಿದ್ದಾಪುರ ರಸ್ತೆಯಲ್ಲಿ ತೆರಳಿದರೆ ದುಬಾರೆ ಆನೆ ಶಿಬಿರ ಅಲ್ಲಿಂದ ಮುಂದಕ್ಕೆ ಸಿದ್ದಾಪುರ ರಸ್ತೆಯಲ್ಲಿ ಬಲಕ್ಕೆ ಹೋದರೆ ಚಿಕ್ಲಿಹೊಳೆ ಜಲಾಶಯದ ಮೂಲಕ ಮಡಿಕೇರಿ ಕಡೆಗೆ ತೆರಳಿದರೆ ನಗರ ಪ್ರವೇಶಕ್ಕೆ ಮುನ್ನವೇ ಬಲಕ್ಕೆ ತಿರುಗಿದರೆ ಅಬ್ಬಿಪಾಲ್ಸ್ ಜಲಪಾತ ಮತ್ತು ಮಾಂದಾಲಪಟ್ಟಿಗೆ ತೆರಳಬಹುದು.

Travel News Why Mysuru Is The Best Place For Tourists

ಕೊಡಗು, ಚಾಮರಾಜನಗರದಲ್ಲಿವೆ ಪ್ರವಾಸಿ ತಾಣಗಳು

ಆ ನಂತರ ಮಡಿಕೇರಿ ನಗರವನ್ನು ಪ್ರವೇಶಿಸುವ ಹಾದಿಯಲ್ಲಿಯೆ ಗದ್ದುಗೆ ಸಿಗುತ್ತದೆ ಅದನ್ನು ನೋಡಿಕೊಂಡು ಮಹದೇವಪೇಟೆ ಮೂಲಕ ಜನರಲ್ ತಿಮ್ಮಯ್ಯ ವೃತ್ತದ ಕಡೆಗ ಬಂದರೆ, ಹಾದಿ ಮಧ್ಯೆ ಮಡಿಕೇರಿ ಕೋಟೆ ಮತ್ತು ಅರಮನೆ ಸಿಗುತ್ತದೆ. ಅದನ್ನು ನೋಡಿಕೊಂಡು ಕೆಳಕ್ಕಿಳಿದರೆ ಓಂಕಾರೇಶ್ವರ ದೇಗುಲವಿದೆ. ಅದನ್ನು ನೋಡಿಕೊಂಡು ಮುಖ್ಯರಸ್ತೆ ಬಂದರೆ ಅಲ್ಲಿಂದ ರಾಜಾಸೀಟಿಗೆ ತೆರಳಬಹುದಾಗಿದೆ. ಅಲ್ಲೊಂದಷ್ಟು ಸಮಯ ಕಳೆದು ಮಂಗಳೂರು ರಸ್ತೆಯ ಮೂಲಕ ಸಾಗಿ ಎಡಕ್ಕೆ ಭಾಗಮಂಡಲ ರಸ್ತೆಯಲ್ಲಿ ಸಾಗಿದರೆ ಉಡೋತ್ತು ಮೊಟ್ಟೆ ಎಂಬಲ್ಲಿ ಗಾಜಿನ ಸೇತುವೆಗೆ ಹೋಗ ಬಹುದು. ಅಲ್ಲಿಂದ ಮುಂದಕ್ಕೆ ಭಾಗಮಂಡಲಕ್ಕೆ ಹೋಗಿ ಅಲ್ಲಿಂದ ತಲಕಾವೇರಿಗೆ ಹೋಗಿ ಬರಬಹುದಾಗಿದೆ.

ಇನ್ನು ಮೈಸೂರಿನಿಂದ ಚಾಮರಾಜನಗರದ ಕಡೆಗೆ ಪ್ರಯಾಣ ಬೆಳೆಸುವವರು ನಂಜನಗೂಡು ನೋಡಿಕೊಂಡು ಮುಂದಕ್ಕೆ ಗುಂಡ್ಲುಪೇಟೆಗೆ ತೆರಳಿ ಅಲ್ಲಿಂದ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಆ ನಂತರ ಚಾಮರಾಜನಗರಕ್ಕೆ ತೆರಳಿ ಚಾಮರಾಜೇಶ್ವರ ದೇಗುಲ, ಕರಿಬೆಟ್ಟ, ಸುವರ್ಣಾವತಿ ಜಲಾಶಯ, ನಾಗಮಲೆ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಯಳಂದೂರಿನ ಜಹಗೀರ್ ದಾರ್ ಬಂಗಲೆ, ಕೊಳ್ಳೇಗಾಲದ ಬಳಿಯ ಮರಡಿಗುಡ್ಡದಲ್ಲಿ ಜಿಪ್ ಲೈನ್ ಸಾಹಸ ಮಾಡಿ ಮೈಸೂರಿಗೆ ಹಿಂತಿರುಗಬಹುದಾಗಿದೆ. ಅಥವಾ ತಮಿಳುನಾಡಿನ ಊಟಿಗೋ, ಕೇರಳದ ವಯನಾಡಿಗೋ ತೆರಳಲು ಅವಕಾಶವಿದೆ.

Travel News Why Mysuru Is The Best Place For Tourists

ಮಂಡ್ಯದಲ್ಲಿವೆ ನಿಸರ್ಗ ಸುಂದರ ತಾಣಗಳು

ಮೈಸೂರಿನಿಂದ ಮಂಡ್ಯದ ಕಡೆಗೆ ಪ್ರವಾಸ ಹೊರಡುವವರು ಕೆಆರ್‌ಎಸ್‌ ತೆರಳಿ ಬೃಂದಾವನ ನೋಡಿಕೊಂಡು ಬಳಿಕ ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿರುವ ತಾಣಗಳಲ್ಲಿ ಓಡಾಡಿ ಅದಾದ ನಂತರ ಕರಿಘಟ್ಟ, ನೋಡಿ ಹಿಂತಿರುಗಿ ಅಲ್ಲಿ ಪಾಂಡವಪುರಕ್ಕೆ ತೆರಳಿ ಅಲ್ಲಿಂದ ಕೆರೆತೊಣ್ಣೂರು ಮುಂದೆ ಮೇಲುಕೋಟೆಗೆ ತೆರಳಬಹುದಾಗಿದೆ. ಕೆ.ಆರ್.ಪೇಟೆಗೆ ತೆರಳಿದರೆ ಕೆಆರ್ ಎಸ್ ಹಿನ್ನೀರಿನಲ್ಲಿರುವ ಭೂವರಹಸ್ವಾಮಿ ದೇಗುಲ, ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ಸಂಗಮ ಸ್ಥಳ ಮದ್ದೂರಿನ ಕೊಕ್ಕರೆ ಬೆಳ್ಳೂರು ಹೀಗೆ ಹಲವು ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರಲು ಸಾಧ್ಯವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+