ಏಪ್ರಿಲ್ 1ರಿಂದ 5ರವೆರೆಗೆ ಈ ಮಾರ್ಗಗಳ ರೈಲು ಸಂಚಾರ ರದ್ದು- ಎಲ್ಲೆಲ್ಲಿ ಹಾಗೂ ಕಾರಣ ಏನು?

ಬೆಂಗಳೂರು, ಮಾರ್ಚ್‌, 23: ಸಾಮಾನ್ಯವಾಗಿ ಟ್ರ್ಯಾಕ್‌, ಅಳಿ ಕಾಮಗಾರಿ ವೇಳೆ ರೈಲುಗಳನ್ನು ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಏಪ್ರಿಲ್‌ 1ರಿಂದ 5ರವರೆಗೆ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗಾದರೆ ಯಾವೆಲ್ಲ ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ ಎನ್ನವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಯಾರ್ಡ್‌ನಲ್ಲಿ ಬಾಣಸವಾಡಿ-ಕರ್ಮಮೇಳಂ ಮಾರ್ಗದಲ್ಲಿ ಬಾಕ್ಸ್‌ ಸೇತುವೆ ನಿರ್ಮಾಣಕ್ಕಾಗಿ ಲೈನ್‌ ಬ್ಲಾಕ್‌ ಮತ್ತು ಪವರ್‌ ಬ್ಲಾಕ್‌ ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇವೆಲ್ಲ ಮಾರ್ಗಗಳಲ್ಲಿ ರೈಲು ರದ್ದು ಮಾಡಲಾಗುತ್ತದೆ. ಮಾಹಿತಿ ಇಲ್ಲಿ ಗಮನಿಸಿ.

Train will be cancelled From April 1 to 5th on this routes of Karnataka

ಯಶವಂತಪುರ-ಸೇಲಂ-ಯಶವಂತಪುರ ಎಕ್ಸ್‌ಪ್ರೆಸ್‌, ಮೈಸೂರು-ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್, ಯಶವಂತಪುರ-ತುಮಕೂರು-ಯಶವಂತಪುರ ಮೆಮು, ಯಶವಂತಪುರ-ಹೊಸೂರು-ಯಶವಂತಪುರ ಮೆಮು ವಿಶೇಷ ರೈಲು, ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ಮೆಮು ರೈಲುಗಳ ಸಂಚಾರ ಈ ಸಮಯದಲ್ಲಿ ರದ್ದಾಗಲಿದೆ.

ಮಾರ್ಗಗಳ ಬದಲಾವಣೆ: ಕಣ್ಣೂರು-ಯಶವಂತಪುರ-ಕಣ್ಣೂರು ಎಕ್ಸ್‌ಪ್ರೆಸ್‌ ರೈಲು, ಯಶವಂತಪುರ-ತುಮಕೂರು-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಕಾರ್ಮೆಲರಾಂ, ಬೈಯಪ್ಪನಹಳ್ಳಿ ಕ್ಯಾಬಿನ್‌, ಬೈಯಪ್ಪನಹಳ್ಳಿ, ಬೆಂಗಳೂರು ಎಸ್‌ಎಂವಿಟಿ ಮತ್ತು ಬಾಣಸವಾಡಿ ಮಾರ್ಗ ಮೂಲಕ ಸಂಚಾರ ಮಾಡಲಿದೆ.

ಯಶವಂತಪುರ-ಕೊಚುವೇಲಿ-ಯಶವಂತಪುರ ಎಕ್ಸ್‌ಪ್ರೆಸ್‌, ದಾದರ್‌-ತಿರುನೆಲ್ವೇಲಿ-ದಾದರ್‌ ಎಕ್ಸ್‌ಪ್ರೆಸ್‌, ಕೊಚುವಲಿ-ಯಶವಂತಪುರ-ಕೊಚುವೇಲಿ ರೈಲು ಬಾಣಸವಾಡಿ, ಎಸ್‌ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್‌, ಕಾರ್ಮೆಲರಾಂ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ.

ಮಂಗಳೂರಿನಿಂದ ನವದೆಹಲಿಗೆ ವಿಶೇಷ ರೈಲು ಸೇವೆ: ಮಾರ್ಚ್‌ 25ರಂದು ದೇಶದೆಲ್ಲೆಡೆ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಈಗಾಗಲೇ ಹಲವು ಕಡೆಗಳಿಗೆ ವಿಶೇಷ ರೈಲು ಬಿಡಲಾಗಿದೆ. ಹಾಗೆಯೇ ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹಾಗಾದರೆ ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್‌ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೋಳಿ ಹಬ್ಬ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಮಂಗಳೂರು-ನವದೆಹಲಿ ಏಕಮುಖ ಸಂಚಾರದ ವಿಶೇಷ ರೈಲು (Special ಸಂಚಾರ ಮಾಡಲಿದೆ. ಈ ರೈಲು ಮಾರ್ಚ್‌ 22ರಂದು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಮಧ್ಯಾಹ್ನ 2:50ಕ್ಕೆ ಹೊರಟು ಮಾರ್ಚ್‌ 24ರ ಸಂಜೆ 7:15ಕ್ಕೆ ನವದೆಹಲಿಯ ಹಜ್ರತ್‌ ನಿಜಾಮುದ್ದೀನ್‌ ರೈಲು ನಿಲ್ದಾಣವನ್ನು ತಲುಪಲಿದೆ. ಇನ್ನು 06090 ಸಂಖ್ಯೆಯ ವಿಶೇಷ ರೈಲು 20 ಸ್ಲೀಪರ್‌ ಹಾಗೂ 2 ಸೆಕೆಂಡ್‌ ಕ್ಲಾಸ್‌ ಕೋಚ್‌ಗಳನ್ನು ಹೊಂದಿವೆ.

ಇನ್ನು ಈ ರೈಲು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಹೊರಟು ಕೇರಳ ಮಾರ್ಗವಾಗಿ ಸಂಚಾರ ಮಾಡಲಿದೆ. ಕಣ್ಣೂರು, ಕೋಝಿಕ್ಕೋಡ್‌, ಶೋರನೂರು, ಪಾಲಕ್ಕಾಡ್‌, ಕೊಯ್ಯಮತ್ತೂರು, ತಿರಪ್ಪೂರು, ಈರೋಡ್‌, ಸೇಲಂ, ಜೋಲಾರ್‌ಪೇಟೆ, ಕಟ್ಪಾಡಿ, ಚಿತ್ತೂರು, ತಿರುಪತಿ, ರಾನಿಗುಂಟ, ಗುಡೂರು, ಓಂಗೋಲ್‌, ವಿಜಯವಾಡ, ವಾರಂಗಲ್‌, ಬಲ್ಹರ್ಷ, ನಾಗ್ಪುರ, ಬೇತುಲ್‌, ಇಟ್ರಾಸಿ, ಭೋಪಾಲ್‌, ಬಿನಾ, ಝಾನ್ಸಿ, ಗ್ವಾಲಿಯರ್‌, ಆಗ್ರಾ, ಮಥುರಾ ಇಲ್ಲೆಲ್ಲ ನಿಲುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+