ಬೆಂಗಳೂರು-ಕಲಬುರಗಿ ವಿಶೇಷ ರೈಲು ರದ್ದು, ಜನರ ಆಕ್ರೋಶ
ಬೆಂಗಳೂರು, ಮೇ 28: ಬೆಂಗಳೂರು-ಕಲಬುರಗಿ ನಡುವೆ ಹೆಚ್ಚುವರಿ ರೈಲು ಬೇಕು ಎಂಬ ಬೇಡಿಕೆಯ ನಡುವೆಯೇ ನೈಋತ್ಯ ರೈಲ್ವೆ ಉಭಯ ನಗರಗಳ ನಡುವಿನ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಳಿಸಿದೆ. ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನೈಋತ್ಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರು-ಕಲಬುರಗಿ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಳಿಸಲಾಗಿದೆ ಎಂದು ಹೇಳಿದೆ.

ಆದೇಶದ ವಿವರ: ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ 14 ಟ್ರಿಪ್‌ಗಳಿಗೆ ಸಂಚರಿಸುವ (ವಾರಕ್ಕೆ ಮೂರು ಬಾರಿ) ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06261/ 06262) ಸೇವೆ ರದ್ದುಪಡಿಸಲಾಗುತ್ತಿದೆ.
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಮೇ 29 ರಿಂದ ಜೂನ್ 27, 2024ರ ತನಕ ಮತ್ತು ಕಲಬುರಗಿಯಿಂದ ಮೇ 30 ರಿಂದ ಜೂನ್ 28, 2024ರ ತನಕ ರೈಲು ಸೇವೆ ರದ್ದು ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.
ರಾಜಧಾನಿ ಬೆಂಗಳೂರು-ಕಲಬುರಗಿ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲು ಬೇಕು ಎನ್ನುವ ಬೇಡಿಕೆ ಇದೆ. ಇದರ ನಡುವೆಯೇ ನೈಋತ್ಯ ರೈಲ್ವೆ ಬೇಸಿಗೆ ವಿಶೇಷ ರೈಲು ರದ್ದುಗೊಳಿಸಿ ಆದೇಶಿಸಿದೆ.
South Western Railway has announced the cancellation of the Tri-weekly Summer Special Express trains operating between SMVT Bengaluru and Kalaburagi stations
— South Western Railway (@SWRRLY) May 27, 2024
ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ
ಟರ್ಮಿನಲ್ ಮತ್ತು ಕಲಬುರಗಿ… pic.twitter.com/SX0ze5Q65b
ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಮತ್ತು ನೈಋತ್ಯ ರೈಲ್ವೆ ಟ್ಯಾಗ್ ಮಾಡಿ, ಸಮಸ್ಯೆ ಬೇಗ ಬಗೆಹರಿಸಿ ಉಭಯ ನಗರಗಳ ನಡುವೆ ರೈಲು ಓಡಿಸಿ ಎಂದು ಆಗ್ರಹಿಸುತ್ತಿದ್ದಾರೆ.
ತಾತ್ಕಾಲಿಕ ನಿಲುಗಡೆ ಸೌಲಭ್ಯ: ಪ್ರತಿದಿನ ಸಂಚಾರ ನಡೆಸುವ ರೈಲು ನಂಬರ್ 16222/ 16221 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲುಗಳನ್ನು ಡೋರನಹಳ್ಳಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಮಾಡಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಜೂನ್ 11 ರಿಂದ 14, 2024ರ ತನಕ ಈ ಸೌಲಭ್ಯ ಒದಗಿಸಲಾಗಿದೆ.
* ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಡೋರನಹಳ್ಳಿಗೆ ಮಧ್ಯಾಹ್ನ 14.35ಕ್ಕೆ ಬಂದು, 14.36 ಗಂಟೆಗೆ ಹೊರಡಲಿದೆ.
* ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು ಡೋರನಹಳ್ಳಿ ನಿಲ್ದಾಣಕ್ಕೆ ಮಧ್ಯಾಹ್ನ 14.20ಕ್ಕೆ ಬಂದು, 14.21 ಗಂಟೆಗೆ ಹೊರಡಲಿದೆ.
ತಾತ್ಕಾಲಿಕ ರದ್ದು ಮುಂದುವರಿಕೆ: ಗುಂಟೂರು ವಿಭಾಗದಲ್ಲಿ ನಡೆಯುತ್ತಿರುವ ಸುರಕ್ಷತಾ ಸಂಬಂಧಿತ ಕಾಮಗಾರಿ ಸಲುವಾಗಿ, ರೈಲುಗಳ ರದ್ದತಿಯನ್ನು ಮುಂದುವರಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಹೇಳಿದೆ.
* ರೈಲು ಸಂಖ್ಯೆ 17329 ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮತ್ತೆ ಜೂನ್ 30, 2024 ರವರೆಗೆ ರದ್ದು ಮಾಡಲಾಗುತ್ತಿದೆ. ಮೊದಲು ಮೇ 31, 2024 ರವರೆಗೆ ರದ್ದುಗೊಳಿಸಲಾಗಿತ್ತು.
* ರೈಲು ಸಂಖ್ಯೆ 17330 ವಿಜಯವಾಡ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮತ್ತೆ ಜುಲೈ 1, 2024ರವರೆಗೆ ರದ್ದು ಮಾಡಲಾಗುತ್ತಿದೆ. ಮೊದಲು ಜೂನ್ 1, 2024ರ ವರೆಗೆ ರದ್ದುಗೊಳಿಸಲಾಗಿತ್ತು.












Click it and Unblock the Notifications