ಫೆಬ್ರವರಿ 15 ರಿಂದ 22 ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ; ಪಟ್ಟಿ

ನಾನ್ ಇಂಟರ್ ಲಾಕಿಂಗ್ ಮತ್ತು ಇಂಜಿನಿಯರಿಂಗ್ ಕಾಮಗಾರಿಯ ಕಾರಣಕ್ಕೆ ವಿವಿಧ ರೈಲುಗಳ ಸಂಚಾರ ರದ್ದಾಗಿದೆ. ರೈಲು ಸಂಚಾರ ಭಾಗಶಃ ರದ್ದಾಗಿದೆ. ಕೆಲವು ರೈಲು ಮಾರ್ಗ ಬದಲಾವಣೆಯಾಗಿದೆ.

ಬೆಂಗಳೂರು, ಫೆಬ್ರವರಿ 16; ಗುಂತಕಲ್ ವಿಭಾಗದ ನಾನ್ ಇಂಟರ್ ಲಾಕಿಂಗ್ ಜೋಡಿ ಮಾರ್ಗದ ಕಾಮಗಾರಿ, ಹೀಲಲಿಗೆ ಮತ್ತು ಕಾರ್ಮೆಲರಾಮ್ ನಿಲ್ದಾಣದ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಜೋಡಿ ಮಾರ್ಗ ಕಾಮಗಾರಿಗಾಗಿ ರೈಲು ಸಂಚಾರದಲ್ಲಿ ಹಲವು ಬದಲಾವಣೆ ಮಾಡಲಾಗಿದೆ.

ಚಿಗಿಚೆರ್ಲಾ- ಧರ್ಮಾವರಂ ನಿಲ್ದಾಣಗಳ ನಡುವಿನ ನಾನ್ ಇಂಟರ್‌ ಲಾಕಿಂಗ್ ಜೋಡಿ ಮಾರ್ಗದ ಕಾಮಗಾರಿಗೆ ಅನುಕೂಲವಾಗುವಂತೆ ಕೆಲವು ಬದಲಾವಣೆ ಮಾಡಲಾಗಿದೆ. ಆದ್ದರಿಂದ ಫೆಬ್ರವರಿ 15 ರಿಂದ 22ರ ತನಕ ಕೆಲವು ರೈಲುಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ನೈಋತ್ಯ ರೈಲ್ವೆ ಸಹ ಕೆಲವು ರೈಲು ಸೇವೆಗಳನ್ನು ರದ್ದು, ಭಾಗಶಃ ರದ್ದು ಹಾಗೂ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ವಾರಾಂತ್ಯದಲ್ಲಿ, ಮುಂದಿನ ವಾರ ಪ್ರವಾಸ ಕೈಗೊಳ್ಳುವವರು ಈ ಬದಲಾವಣೆ ಬಗ್ಗೆ ತಿಳಿಯಿರಿ.

South Western And South Central Railway Cancelled Trains From February 15 To 22

ರದ್ದುಗೊಂಡಿರುವ ರೈಲುಗಳು

* ಫೆಬ್ರವರಿ 15 ರಿಂದ 22ರ ವರೆಗೆ ಗುಂತಕಲ್‌ನಿಂದ ಹೊರಡುವ ರೈಲು ಸಂಖ್ಯೆ 07693 ಗುಂತಕಲ್-ಹಿಂದೂಪುರ ಪ್ರತಿದಿನದ ಪ್ಯಾಸೆಂಜರ್ ರೈಲನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ.

* ಫೆಬ್ರವರಿ 16 ರಿಂದ 23 ರವರೆಗೆ ಹಿಂದೂಪುರದಿಂದ ಹೊರಡುವ ರೈಲು ಸಂಖ್ಯೆ 07694 ಹಿಂದೂಪುರ-ಗುಂತಕಲ್ ಪ್ರತಿದಿನದ ಪ್ಯಾಸೆಂಜರ್ ರೈಲನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ.

ಯಾವ ರೈಲುಗಳ ಭಾಗಶಃ ರದ್ದು

* ಫೆಬ್ರವರಿ 15 ರಿಂದ 22 ರವರೆಗೆ ಕೆಎಸ್ಆರ್ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06595 ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ ರೈಲನ್ನು ಹಿಂದೂಪುರ-ಧರ್ಮಾವರಂ ನಿಲ್ದಾಣ ನಡುವೆ ಭಾಗಶಃ ರದ್ದು ಗೊಳಿಸಲಾಗುತ್ತದೆ. ಈ ರೈಲು ಧರ್ಮಾವರ ನಿಲ್ದಾಣದ ಬದಲಿಗೆ ಹಿಂದೂಪುರದಲ್ಲಿ ನಿಲ್ಲಲಿದೆ.

* ಫೆಬ್ರವರಿ 15 ರಿಂದ 22 ರವರೆಗೆ ಧರ್ಮಾವರಂದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06596 ಧರ್ಮಾವರಂ ಕೆಎಸ್‌ಆರ್ ಬೆಂಗಳೂರು ರೈಲನ್ನು ಧರ್ಮಾವರಂ ಹಿಂದೂಪುರ ನಿಲ್ದಾಣ ನಡುವೆ ಭಾಗಶಃ ರದ್ದು ಗೊಳಿಸಲಾಗುತ್ತದೆ. ಈ ರೈಲು ಧರ್ಮಾವರ ನಿಲ್ದಾಣದ ಬದಲು ಹಿಂದೂಪುರದಿಂದ ಹೊರಡಲಿದೆ.

ಮಾರ್ಗ ಬದಲಾವಣೆ

* ಫೆಬ್ರವರಿ 15 ರಿಂದ 22 ರವರೆಗೆ ತಿರುಪತಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07589 ತಿರುಪತಿ ಕದಿರಿದೇವರಪಲ್ಲಿ ಪ್ರತಿದಿನದ ವಿಶೇಷ ಪ್ಯಾಸೆಂಜರ್ ರೈಲು ತಿರುಪತಿ, ರಣಿಗುಂಟ, ಗುಂತಕಲ್ ಮತ್ತು ಬಳ್ಳಾರಿ ಮಾರ್ಗವಾಗಿ ಚಲಿಸುತ್ತಿದೆ.

South Western And South Central Railway Cancelled Trains From February 15 To 22

* ಫೆಬ್ರವರಿ 15 ರಿಂದ 22 ರವರೆಗೆ ಕದಿರಿದೇವರಪಲ್ಲಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07590 ಕದಿರಿದೇವರಪಲ್ಲಿ- ತಿರುಪತಿ ಪ್ರತಿದಿನದ ವಿಶೇಷ ಪ್ಯಾಸೆಂಜರ್ ರೈಲು ಬಳ್ಳಾರಿ, ಗುಂತಕಲ್, ರೆಣಿಗುಂಟ ಮತ್ತು ತಿರುಪತಿ ಮಾರ್ಗವಾಗಿ ಚಲಿಸುತ್ತಿದೆ.

ಹೀಲಲಿಗೆ ಮತ್ತು ಕಾರ್ಮೆಲರಾಮ್ ನಿಲ್ದಾಣದ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಜೋಡಿ ಮಾರ್ಗ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ.

ರೈಲುಗಳ ಸೇವೆ ರದ್ದು

* ಫೆಬ್ರುವರಿ 19 ಮತ್ತು 20ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06591 ಯಶವಂತಪುರ - ಹೊಸೂರು ವಿಶೇಷ ಮೆಮು ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ.

* ಫೆಬ್ರುವರಿ 19 ಮತ್ತು 20 ರಂದು ಹೊಸೂರಿನಿಂದ ಹೊರಡುವ ರೈಲು ಸಂಖ್ಯೆ 06592 ಹೊಸೂರು ಯಶವಂತಪುರ ವಿಶೇಷ ಮೆಮು ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ.

ರೈಲುಗಳ ಮಾರ್ಗ ಬದಲಾವಣೆ

* ಫೆಬ್ರವರಿ 19 ಮತ್ತು 20 ರಂದು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಪ್ರಾರಂಭವಾಗುವ ಸ‌ರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಾರೈಕಲ್ ಎಕ್ಸ್‌ಪ್ರೆಸ್ (16529) ರೈಲು ಬೆಯ್ಯಪ್ಪನಹಳ್ಳಿ, ಬಂಗಾರಪೇಟೆ, ಜೋಲಾರ್‌ಪೇಟೆ ಎ ಕ್ಯಾಬಿನ್, ತಿರುವತ್ತೂ‌ ಮತ್ತು ಸೇಲಂ ಮಾರ್ಗವಾಗಿ ಚಲಿಸುತ್ತದೆ.

ಈ ಕಾರಣಕ್ಕಾಗಿ ಬೆಳಂದೂರು ರೋಡ್, ಕಾರ್ಮೆಲರಾಮ್, ಹೀಲಲಗೆ, ಆನೇಕಲ್ ರೋಡ್, ಹೊಸೂರು, ಕೆಲಮಂಗಲಂ, ಪೆರಿಯಾನಾಗತುನೈ, ರಾಯಕ್ಕೊಟೆ, ಮರಂಡಹಳ್ಳಿ, ಪಾಲಕ್ಕೋಡು, ಧರ್ಮಪುರಿ, ಶಿವಾಡಿ, ಮುತ್ತಂಪಟ್ಟಿ, ತೊನ್ನೂರು, ಕರುವಲ್ಲಿ, ಸಮ್ಮಂಡಪ್ಪಟ್ಟ ಮತ್ತು ಓಮಲೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

* ಫೆಬ್ರವರಿ 19 ಮತ್ತು 20ರಂದು ಕಾರೈಕಲ್‌ನಿಂದ ಪ್ರಾರಂಭವಾಗುವ ಕಾರೈಕಲ್ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ (16530) ರೈಲು ಸೇಲಂ ತಿರುಪತ್ತೂರ್, ಜೋಲಾರ್‌ಪೇಟೆ ಎ ಕ್ಯಾಬಿನ್, ಬಂಗಾರಪೇಟೆ ಮತ್ತು ಬೆಯ್ಯಪ್ಪನಹಳ್ಳಿ ಮಾರ್ಗವಾಗಿ ಚಲಿಸುತ್ತದೆ.

ಈ ಕಾರಣಕ್ಕಾಗಿ ಓಮಲೂರು, ಸಮ್ಮಂಡಪ್ಪಟ್ಟಿ, ಕರುವಲ್ಲಿ, ತೊಪ್ಪರು, ಮುತ್ತಂಪಟ್ಟಿ, ಶಿವಾಡಿ, ಧರ್ಮಪುರಿ, ಪಾಲಕ್ಕೋಡು, ಮರಂಡಹಳ್ಳಿ, ರಾಯಕ್ಕೊ ಪೆರಿಯಾನಾಗತುನೈ, ಕೆಲಮಂಗಲಂ, ಹೊಸೂರು, ಆನೇಕಲ್ ರೋಡ್, ಹೀಲಲಗೆ, ಕಾರ್ಮೆಲರಾಮ್ ಮತ್ತು ಬೆಳಂದೂರು ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

* ಫೆಬ್ರವರಿ 19 ಮತ್ತು 20 ರಂದು ಕೆಎಸ್ಆರ್ ಬೆಂಗಳೂರಿನಿಂದ ಪ್ರಾರಂಭವಾಗುವ ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ (12677) ರೈಲು ಬೈಯ್ಯಪ್ಪನಹಳ್ಳಿ, ಬಂಗಾರಪೇಟೆ, ಜೋಲಾರ್‌ಪೆಟ್ಟೆ ಎ ಕ್ಯಾಬಿನ್, ತಿರುಪತ್ತೂರ್ ಮತ್ತು ಸೇಲಂ ಮಾರ್ಗವಾಗಿ ಚಲಿಸುತ್ತದೆ. ಈ ಕಾರಣಕ್ಕಾಗಿ ಕಾರ್ಮೆಲರಾಮ್, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

* ಫೆಬ್ರವರಿ 19 ಮತ್ತು 20 ರಂದು ಎರ್ನಾಕುಲಂದಿಂದ ಪ್ರಾರಂಭವಾಗುವ ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12678) ರೈಲು ಸೇಲಂ, ತಿರುಪತ್ತೂರು, ಜೋಲಾರ್‌ಪೆಟ್ಟೆ ಎ ಕ್ಯಾಬಿನ್, ಬಂಗಾರಪೇಟೆ ಮತ್ತು ಬೈಯ್ಯಪ್ಪನಹಳ್ಳ ಮಾರ್ಗವಾಗಿ ಚಲಿಸುತ್ತದೆ. ಈ ಕಾರಣಕ್ಕಾಗಿ ಧರ್ಮಪುರಿ, ಹೊಸೂರು ಮತ್ತು ಕಾರ್ಮೆಲರಾಮ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+