Get Updates
Get notified of breaking news, exclusive insights, and must-see stories!

Zero ಬಜೆಟ್‌ನಲ್ಲಿ ಒಬ್ಬಂಟಿಯಾಗಿ ಭಾರತ ಸುತ್ತಿದ ಯುವತಿ: ಹೇಗೆ ಸಾಧ್ಯ?

ಈಗಿನ ಯುವ ಜನತೆಗೆ ಪ್ರವಾಸ ಎಂದರೆ ಖಂಡಿತಾ ಇಷ್ಟ ಇದ್ದೇ ಇರುತ್ತದೆ. ಕೆಲವರು ಕೆಲಸದ ಒತ್ತಡದಿಂದ ರಿಲ್ಯಾಕ್ಸ್‌ಗಾಗಿ ಪ್ರವಾಸದ ಮೊರೆ ಹೋದರೆ ಇನ್ನೂ ಕೆಲವರು ಪ್ರವಾಸವನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ವೀಕೆಂಡ್‌ ಬಂದರೆ ಸಾಕು ಈ ವಾರಾಂತ್ಯದ ಪಯಣ ಎಲ್ಲಿಗೆ ಎನ್ನುವ ಲೆಕ್ಕಾಚಾರ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ಲಾನ್‌ ಮಾಡಿದಷ್ಟು ಸುಲಭವಾಗಿ ಪ್ರವಾಸ ಮುಗಿಯುವುದು ತುಂಬಾ ಕಷ್ಟ. ಕೆಲವರ ಟ್ರಿಪ್‌ಗಳಂತೂ ಪ್ಲಾನ್‌ನಲ್ಲೇ ಆರಂಭವಾಗಿ ಪ್ಲಾನ್‌ನಲ್ಲೇ ಮುಗಿಯುತ್ತದೆ. ಇದಕ್ಕೆ ಮುಖ್ಯಕಾರಣ ಬಜೆಟ್‌. ಅಂದರೆ ಹಣಕಾಸಿನ ಸಮಸ್ಯೆ.

ಒಂದು ಪ್ರವಾಸ ಯಶಸ್ವಿಯಾಗಬೇಕು ಎಂದರೆ ಅಚಲ ಮನಸ್ಥಿತಿಯಷ್ಟೇ ಹಣಕಾಸಿನ ಸ್ಥಿತಿ ಕೂಡ ಮುಖ್ಯವಾಗಿರುತ್ತದೆ. ಜೊತೆಗೆ ಸಮಯ ಹಾಗೂ ಧೈರ್ಯ ಕೂಡ ಮುಖ್ಯ. ಈಗೀಗ ಗುಂಪಿನಲ್ಲಿ ಪ್ರವಾಸ ಹೋಗುವವರಿಗಿಂತ ಸೋಲೋ ಟ್ರಿಪ್‌ ಅಂದರೆ ಒಬ್ಬಂಟಿಯಾಗಿ ಸಂಚಾರ ನಡೆಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸೋಲೋ ಟ್ರಿಪ್‌ನಿಂದ ನಿಮಗಾಗಿ ನೀವು ಸಮಯ ಕೊಡಬಹುದು. ಈ ಹಿನ್ನೆಲೆಯಲ್ಲಿ ಅನೇಕರು ಸೋಲೋ ಟ್ರಿಪ್‌ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸೋಲೋ ಟ್ರಿಪ್‌ ಹೋಗಲು ಧೈರ್ಯ ಇರಬೇಕು ಅದರಲ್ಲೂ ಹೆಣ್ಣ ಮಕ್ಕಳಿಗಂತೂ ಎಷ್ಟು ಸುರಕ್ಷತೆ ಇದ್ದರೂ ಸಾಲದು.

Solo Travel in India Without Spending a Rupee Saraswati Iyer s Journey

ಹೀಗಾಗಿ ಒಂದು ಪ್ರವಾಸ ಅದರಲ್ಲೂ ಒಬ್ಬೊಂಟಿಯಾಗಿ ಪ್ರವಾಸ ಮಾಡಲು ಒಂದು ಹಣಕಾಸಿನ ಸ್ಥಿತಿ, ಮತ್ತೊಂದು ಮನಸ್ಥತಿ ಅಂದರೆ ಧೈರ್ಯ ಎರಡು ಕೂಡ ಮುಖ್ಯವಾಗಿರುತ್ತದೆ. ಇದೇ ಕಾರಣಕ್ಕೆ ಅನೇಕರ ಸೋಲೋ ಟ್ರಿಪ್‌ ಕಾರ್ಯ ರೂಪಕ್ಕೆ ಬರದೇ ಬರೀ ಪ್ಲಾನ್‌ನಲ್ಲೇ ಮುಕ್ತಾಯಗೊಳ್ಳುತ್ತದೆ. ಆದರೆ ಇಲ್ಲೊಬ್ಬ ಯುವತಿ ಒಂದು ರೂಪಾಯಿ ಇಲ್ಲದೇ ತನ್ನ ಒಬ್ಬೊಂಟಿಯಾಗಿ ಪ್ರವಾಸ ಪ್ರಾರಂಭಿಸಿದ್ದು, ಒಬ್ಬಳೇ ಸಂಪೂರ್ಣ ಭಾರತ ಸುತ್ತಬೇಕು ಎನ್ನುವ ಗುರಿಯನ್ನು ಅಚಲ ಮನಸ್ಸಿನಿಂದ ಸಾಧಿಸಿದ್ದಾರೆ.

ಧೈರ್ಯ ಇದ್ದರೆ ಸೋಲೋ ಟ್ರಿಪ್‌ ಹೇಗೋ ಹೋಗಬಹುದು ಆದರೆ ಒಂದು ರೂಪಾಯಿ ಕೂಡ ಬಜೆಟ್‌ ಇಲ್ಲದೇ ಭಾರತವನ್ನು ಸುತ್ತುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಸರಸ್ವತಿ ಅಯ್ಯರ್ ಎನ್ನುವ ಮಹಿಳೆ ಸುಮಾರು ಎರಡು ವರ್ಷಗಳ ಹಿಂದೆ ಸಂಪೂರ್ಣ ಭಾರತ ಸುತ್ತಬೇಕು ಎನ್ನುವ ಮಹಾತ್ವಾಕಾಂಕ್ಷೆಯಲ್ಲಿ ಕೆಲಸ ತೊರೆದು ಒಬ್ಬೊಂಟಿಯಾಗಿ ಪ್ರಯಾಣ ಆರಂಭಿಸಿದರು.

Solo Travel in India Without Spending a Rupee Saraswati Iyer s Journey

ಕೇವಲ ಎರಡು ಸೀರೆ, ಒಂದು ಚಾಪೆ ಹಾಗೂ ಒಂದು ಪವರ್‌ ಬ್ಯಾಂಕ್‌ನೊಂದಿಗೆ ಪ್ರಯಾಣ ಆರಂಭಿಸಿದ ಸರಸ್ವತಿ ಅಯ್ಯರ್ ಇಂದಿನವರೆಗೂ ಆಹಾರ, ವಸತಿ ಅಥವಾ ಸಾರಿಗೆಗಾಗಿ ಒಂದೇ ಒಂದು ರೂಪಾಯಿ ಖರ್ಚು ಮಾಡದೇ ಇಡೀ ದೇಶವನ್ನು ಸುತ್ತಿದ್ದಾರೆ. ಲಿಫ್ಟ್‌ ಪಡೆಯುವ ಮೂಲಕ, ಬೆಟ್ಟ ಹತ್ತುವ ಹಾಗೂ ನಡಿಗೆಯಲ್ಲೇ ಅನೇಕ ದೂರ ಕ್ರಮಿಸಿರುವ ಸರಸ್ವತಿ ಅಯ್ಯರ್, ಉಳಿದಂತೆ ಆಹಾರ, ವಸತಿ ಹಾಗೂ ಸಾರಿಗೆಗಾಗಿ ಅಲ್ಲಲ್ಲಿ ಕೆಲಸ ಮಾಡಿದಲ್ಲದೇ, ಧರ್ಮ ಶಾಲೆಗಳಲ್ಲಿ ಹಾಗೂ ಕೆಲವು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸರಸ್ವತಿ ಅಯ್ಯರ್ ಜನದಟ್ಟಣೆ ಇರುವ ಕಡೆಗಳಲ್ಲಿಯೇ ಹೆಚ್ಚು ತಂಗಿದ್ದಾರೆ. ಈ ಪ್ರವಾಸದಿಂದ ಸರಸ್ವತಿ ಅಯ್ಯರ್ ಹೊಸದಾದ ವಿಭಿನ್ನ ಅನುಭವ ಪಡೆದಿದ್ದು, ಅನೇಕ ಅಪರಿಚಿತರ ಸ್ನೇಹ ಸಂಪಾದಿಸಿದ್ದಾರೆ. ಸರಸ್ವತಿ ಅಯ್ಯರ್ ಅವರ ಈ ಸಾಧನೆ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+