ಚೆನ್ನೈ-ಶಿವಮೊಗ್ಗ ರೈಲಿಗೆ ಚಾಲನೆ: ವೇಳಾಪಟ್ಟಿ, ನಿಲ್ದಾಣ ಮಾಹಿತಿ

ಶಿವಮೊಗ್ಗ, ಜುಲೈ 13: ಶಿವಮೊಗ್ಗ ಮತ್ತು ಚೆನ್ನೈ ನಡುವೆ ಸಂಚಾರ ನಡೆಸುವ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಶನಿವಾರ ಚಾಲನೆ ದೊರೆಯಲಿದೆ. ವಾರಕ್ಕೊಮ್ಮೆ ಸಂಚಾರ ನಡೆಸುವ ರೈಲು ಸೇವೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ರೈಲು ಸೇವೆ ಕುರಿತು ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ 4.15ಕ್ಕೆ ಶಿವಮೊಗ್ಗ-ಚೆನ್ನೈ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಾಗುತ್ತದೆ. ಬಿ. ವೈ. ರಾಘವೇಂದ್ರ ರೈಲು ಸೇವೆಗೆ ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Shivamogga Chennai Train From July 13 Schedule And Stations

ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಕೆಲವು ದಿನಗಳ ಹಿಂದೆ ಈ ರೈಲು ಸೇವೆ ಬಗ್ಗೆ ಮಾಹಿತಿ ನೀಡಿದ್ದರು. ಕರ್ನಾಟಕದ ಜನತೆಗೆ ಸಂತಸದ ಸುದ್ದಿ. ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ ರೈಲು ಸಂಖ್ಯೆ 12691/ 12692 ಶಿವಮೊಗ್ಗ-ಚೆನ್ನೈ ರೈಲು ಸೇವೆಗೆ ಒಪ್ಪಿಗೆ ನೀಡಲಾಗಿದೆ. ಈ ರೈಲು ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿಯಲ್ಲಿ ನಿಲುಗಡೆ ಹೊಂದಿದೆ ಎಂದು ಹೇಳಿದ್ದರು.

ರೈಲು ವೇಳಾಪಟ್ಟಿ, ನಿಲ್ದಾಣ: ನೈಋತ್ಯ ರೈಲ್ವೆ ಶಿವಮೊಗ್ಗ-ಚೆನ್ನೈ ಎಕ್ಸ್‌ಪ್ರೆಸ್ ರೈಲು ಸೇವೆಯು ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಶಿವಮೊಗ್ಗ ಟೌನ್-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ರೈಲು ಸಂಖ್ಯೆ 12692 ಸಂಚಾರವನ್ನು ನಡೆಸಲಿದೆ. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಶಿವಮೊಗ್ಗ ಟೌನ್‌ ನಡುವೆ ರೈಲು ನಂಬರ್ 12691 ಸಂಚಾರ ನಡೆಸಲಿದೆ.

ಶಿವಮೊಗ್ಗ ಟೌನ್-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ರೈಲು ಶಿವಮೊಗ್ಗ ಟೌನ್, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕರೆ ಜಂಕ್ಷನ್, ತಿಪಟೂರು, ತುಮಕೂರು, ಎಸ್ಎಂವಿಟಿ ಬೆಂಗಳೂರು, ಕೆ. ಆರ್. ಪುರ, ವೈಟ್‌ಫೀಲ್ಡ್, ಬಂಗಾರಪೇಟೆ ಜಂಕ್ಷನ್, ಕುಪ್ಪಂ, ಜೋಲಾರಪಟ್ಟಿ ಜಂಕ್ಷನ್, ಕಟಪಾಡಿ ಜಂಕ್ಷನ್, ಅರಕ್ಕೋಣಂ ಜಂಕ್ಷನ್ ಮೂಲಕ ಚೆನ್ನೈ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಬೆಂಗಳೂರು ನಗರದಲ್ಲಿ ಬೆಂಗಳೂರು ಕಂಟೋನ್ಮೆಂಟ್, ಕೆಎಸ್ಆರ್ ಬೆಂಗಳೂರು, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿಲ್ಲ ಎಂದು ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಶಿವಮೊಗ್ಗ ಟೌನ್-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಶಿವಮೊಗ್ಗದಿಂದ ಹೊರಟು ತರೀಕೆರೆ, ಬೀರೂರು, ಕಡೂರು, ಅರಸೀಕರೆ ಜಂಕ್ಷನ್, ತಿಪಟೂರು, ತುಮಕೂರು, ಎಸ್ಎಂವಿಟಿ ಬೆಂಗಳೂರು, ಕೆ. ಆರ್. ಪುರ, ವೈಟ್‌ಫೀಲ್ಡ್ ಮೂಲಕ ಸಂಚಾರ ನಡೆಸುತ್ತದೆ. ಆದ್ದರಿಂದ ಶಿವಮೊಗ್ಗ-ಬೆಂಗಳೂರು ನಗರದ ಸಂಪರ್ಕಕ್ಕೆ ಮತ್ತೊಂದು ರೈಲು ಸಿಕ್ಕಿದಂತಾಗಿದೆ.

ಈ ರೈಲಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. ರೈಲು ಸೇವೆಯಿಂದ ಹೆಚ್ಚಿನ ಉಪಯೋಗ ಆಗುವುದಿಲ್ಲ. ರೈಲಿಗೆ ಯಶವಂತಪುರದಲ್ಲಿ ನಿಲುಗಡೆ ಬೇಕಿತ್ತು. ಅಲ್ಲದೇ ಶುಕ್ರವಾರದ ಬದಲು ಭಾನುವಾರ ಶಿವಮೊಗ್ಗದಿಂದ ಸಂಚಾರ ಆರಂಭಿಸಬೇಕಿತ್ತು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+