ದಸರಾ ನಿರೀಕ್ಷೆಯಲ್ಲಿ ಸಿಂಗಾರ-ಬಂಗಾರ ಮೈಸೂರು ಅರಮನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಅರಮನೆ ನಗರಿ ಮೈಸೂರು ನಾಡ ಹಬ್ಬ ದಸರಾಕ್ಕೆ ಅಣಿಯಾಗುತ್ತಿದೆ. ನಗರದ ಪ್ರಮುಖ ಆಕರ್ಷಣೆಯ ಕೇಂದ್ರ ಹಾಗೂ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಅಂಬಾವಿಲಾಸ ಅರಮನೆ ಇದೀಗ ತನ್ನ ಸ್ನಿಗ್ಧ ಸೌಂದರ್ಯದಿಂದ ಎಲ್ಲರನ್ನೂ ಸ್ವಾಗತಿಸುತ್ತಿದೆ.

ಹಾಗೆ ನೋಡಿದರೆ ಮೈಸೂರು ಎಂದಾಕ್ಷಣ ಎಲ್ಲರ ಮನದಲ್ಲೂ ವಿದ್ಯುತ್ ದೀಪಗಳಿಂದ ಝಗಮಗಿಸುವ ಭವ್ಯ ಅಂಬಾವಿಲಾಸ ಅರಮನೆ ಚಿತ್ರಣ ಹಾದುಹೋಗುತ್ತದೆ. ನುರಿತ ಶಿಲ್ಪಿಗಳಿಂದ ವಿಶಿಷ್ಟ ವಾಸ್ತುಶಿಲ್ಪ ಹಾಗೂ ವಿನ್ಯಾಸದಿಂದ ನಿರ್ಮಾಣವಾಗಿರುವ ಈ ಅರಮನೆಗೆ ಸಾಟಿಯೇ ಇಲ್ಲ. ಇನ್ನು ದಸರಾ ದಿನಗಳಲ್ಲಿ ವಿದ್ಯುತ್ ಅಲಂಕೃತ ದೀಪಗಳಿಂದ ಝಗಮಗಿಸುತ್ತಿದ್ದರೆ ದೇವಲೊಕವೇ ಇಳಿದು ಬಂದಿದೆಯೇನೋ ಎಂಬಂತೆ ಭಾಸವಾಗುತ್ತದೆ.[ದಸರಾಕ್ಕೆ ಗೋಲ್ಡನ್ ಚಾರಿಯಟ್ ಸಂಚಾರ, ದರ ಪಟ್ಟಿ]

ಆಕಸ್ಮಿಕ ಬೆಂಕಿ

ಆಕಸ್ಮಿಕ ಬೆಂಕಿ

ಇತಿಹಾಸದ ದಿನಗಳನ್ನು ಮೆಲುಕು ಹಾಕಿದರೆ ಹಳೆಯ ಅರಮನೆಯನ್ನು 1800 ಮತ್ತು 1804ರಲ್ಲಿ ಕಟ್ಟಲಾಗಿತ್ತು. ಈ ಅರಮನೆಯು ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದರಿಂದ ಈ ಅರಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಯಿತು.

ನಲವತ್ತೊಂದು ಲಕ್ಷ ಖರ್ಚು

ನಲವತ್ತೊಂದು ಲಕ್ಷ ಖರ್ಚು

ಆ ನಂತರ 1897 ರಿಂದ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,913 ರುಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು.

ಕೋಟೆ, ಅರಮನೆ

ಕೋಟೆ, ಅರಮನೆ

ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ.

145 ಅಡಿ ಎತ್ತರ

145 ಅಡಿ ಎತ್ತರ

ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಫಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚುಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

ದಸರಾ ಸಂಭ್ರಮ

ದಸರಾ ಸಂಭ್ರಮ

ಅರಮನೆ ವೀಕ್ಷಿಸುವ ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ಕಂಗೊಳಿಸುವುದರೊಂದಿಗೆ ಮನ ಸೆಳೆಯುವುದಂತೂ ಸತ್ಯ. ಅದರಲ್ಲೂ ದಸರಾ ಬರುತ್ತಿದ್ದಂತೆಯೇ ಅರಮನೆ ನವ ವಧುವಿನಂತೆ ಸಿಂಗಾರಗೊಳ್ಳುತ್ತದೆ.

ಸಿಸಿ ಕ್ಯಾಮೆರಾ

ಸಿಸಿ ಕ್ಯಾಮೆರಾ

ಐತಿಹಾಸಿಕ ಅರಮನೆಗೆ ಹೈಟೆಕ್ ಭದ್ರತೆಯನ್ನು ಒದಗಿಸಲಾಗಿದ್ದು ಅರಮನೆಯ ಆಯಕಟ್ಟಿನಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಒಟ್ಟಾರೆ ಅರಮನೆ ತನ್ನದೇ ಆದ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವುದಂತು ಸತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru amba vilasa a beautiful palace. Mysuru dasara will start soon. On the back drop of dasara here some of the beautiful pictures of Mysuru amba vilasa palace.
Please Wait while comments are loading...