ಶಿರಸಿ, ಕಾರವಾರದಿಂದ 2 ದಿನದ ಪ್ಯಾಕೇಜ್ ಟೂರ್; ದರ, ವೇಳಾಪಟ್ಟಿ
ಕಾರವಾರ, ನವೆಂಬರ್ 24; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ಘಟಕ ಎರಡು ದಿನದ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ಕರಾವಳಿಯ ಪ್ರೇಕ್ಷಣಿಯ ಸ್ಥಳಗಳ ದರ್ಶನ ಮಾಡುವವರು ಈ ಪ್ಯಾಕೇಜ್ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಶಿರಸಿ ಮತ್ತು ಕಾರವಾರದಿಂದ ಈ ಪ್ಯಾಕೇಜ್ ಟೂರ್ ಸೇವೆ ಲಭ್ಯವಿದೆ. 'ಕರಾವಳಿ ದೇವಸ್ಥಾನಗಳ ಮತ್ತು ಧರ್ಮಸ್ಥಳ ದರ್ಶನ' ಎಂದು ಎರಡು ದಿನಗಳ ಪ್ಯಾಕೇಜ ಟೂರ್‌ಗೆ ಹೆಸರು ಇಡಲಾಗಿದೆ. ಪ್ರತಿ ಶನಿವಾರ ಈ ಟೂರ್ ಆರಂಭವಾಗಲಿದೆ.
ಶಿರಸಿ ಹಾಗೂ ಕಾರವಾರದಿಂದ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಹ್ಮಣ್ಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಈ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸಹ ಟಿಕೆಟ್ ಬುಕ್ ಮಾಡಬಹುದಾಗಿದೆ.
ಪ್ಯಾಕೇಜ್ ವಿವರಗಳು; ಶಿರಸಿ-ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಮಣ್ಯದ ಎರಡು ದಿನದ ಪ್ಯಾಕೇಜ್ ಪ್ರತಿ ಶನಿವಾರ ಆರಂಭವಾಗಲಿದೆ. ವಯಸ್ಕರಿಗೆ ಪ್ರಯಾಣ ದರ 800 ರೂ. ಮತ್ತು ಮಕ್ಕಳಿಗೆ 600 ರೂ. ಆಗಿದೆ. (12 ವರ್ಷದೊಳಗಿನ). ಊಟ, ಉಪಹಾರ ವೆಚ್ಚ, ದೇವಾಲಯ ಪ್ರವೇಶ ಶುಲ್ಕ ಪೂಜಾ ಖರ್ಚು ಹೊರತುಪಡಿಸಿ ದರ ನಿಗದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ವೇಳಾಪಟ್ಟಿ; ಶಿರಸಿಯಿಂದ ಬಸ್ ಹೊರಡುವ ಸಮಯ 8 ಗಂಟೆ. ಶಿರಸಿ ನೂತನ ಬಸ್ ನಿಲ್ದಾಣ, ಐದು ರಸ್ತೆ ಸರ್ಕಲ್, ಮಂಜಗುಣಿ ಕ್ರಾಸ್, ಕುಮಟಾ ಬಸ್ ನಿಲ್ದಾಣದಲ್ಲಿ ಪಿಕ್ಅಪ್ ವ್ಯವಸ್ಥೆ ಇದೆ.
ಕೊಲ್ಲೂರಿಗೆ ಬಸ್ ತಲುಪುವ ಸಮಯ 12 ಗಂಟೆ. ಹೊರಡುವ ಸಮಯ 13 ಗಂಟೆ. ಸ್ಥಳ ವೀಕ್ಷಿಸಲು ನಿಗದಿಪಡಿಸಿದ ಸಮಯ 1 ತಾಸು. ಶ್ರೀ ಮೂಕಾಂಬಿಕಾ ದೇವಾಲಯ ದರ್ಶನ & ಊಟ.
ಉಡುಪಿ ತಲುಪುವ ಸಮಯ 15 ಗಂಟೆ, ಹೊರಡುವ ಸಮಯ 16 ಗಂಟೆ, ಸ್ಥಳ ವೀಕ್ಷಣೆ ಮಾಡಲು 1 ತಾಸು ಸಮಯ ನಿಗದಿಪಡಿಸಲಾಗಿದೆ. ದೇವಾಲಯ ದರ್ಶನ.
ಧರ್ಮಸ್ಥಳ (ಮೊದಲ ದಿನ) ತಲುಪುವ ಸಮಯ 19. ದೇವಾಲಯ ದರ್ಶನ & ಊಟ ವಸತಿ (ಪ್ರಯಾಣಿಕರ ಖರ್ಚಿನಲ್ಲಿ). ಧರ್ಮಸ್ಥಳ (2ನೇ ದಿನ) ಹೊರಡುವ ಸಮಯ 10 ಗಂಟೆ.
ಕುಕ್ಕೆ ಸುಬ್ರಮಣ್ಯ ತಲುಪುವ ಸಮಯ 11.30. ಹೊರಡುವ ಸಮಯ 13 ಗಂಟೆ, ಸ್ಥಳ ವೀಕ್ಷಣೆ ಮಾಡಲು ನಿಗದಿಪಡಿಸಿದ ಅವಧಿ 1.30 ತಾಸು. ಸುಬ್ರಮಣ್ಯ ದೇವಾಲಯ ದರ್ಶನ & ಊಟ. ಶಿರಸಿ ತಲುಪುವ ಸಮಯ 20 ಗಂಟೆ.
ಪ್ಯಾಕೇಜ್ ಟೂರ್ 2; ಕಾರವಾರ-ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಮಣ್ಯ. ಶನಿವಾರದಿಂದ ಪ್ಯಾಕೇಜ್ ಟೂರ್ ಆರಂಭ. ಇದು ಸಹ ಎರಡು ದಿನಗಳ ಪ್ಯಾಕೇಜ್ ಟೂರ್ ಆಗಿದೆ.
ಕಾರವಾರದಿಂದ ಬಸ್ ಹೊರಡುವ ಸಮಯ 8 ಗಂಟೆ. ಕಾರವಾರ ಬಸ್ ನಿಲ್ದಾಣ, ಅರಗಾ ನೌಕಾನೆಲೆ ಗೇಟ್, ಅಂಕೋಲಾ ಬಸ್ ನಿಲ್ದಾಣದಲ್ಲಿ ಪಿಕ್ ಮಾಡಲಾಗುತ್ತದೆ.

ಕೊಲ್ಲೂರು ತಲುಪುವ ಸಮಯ 12 ಗಂಟೆ. ಹೊರಡುವ ಸಮಯ 13 ಗಂಟೆ. ಸ್ಥಳ ವೀಕ್ಷಣೆ ಮಾಡಲು ನಿಗದಿಪಡಿಸಿದ ಅವಧಿ 1 ತಾಸು. ಶ್ರೀ ಮೂಕಾಂಬಿಕ ದೇವಾಲಯದಲ್ಲಿ ದರ್ಶನ, ಊಟ.
ಉಡುಪಿ ತಲುಪುವ ಸಮಯ 15 ಗಂಟೆ. ಹೊರಡುವ ಸಮಯ 16 ಗಂಟೆ. ಸ್ಥಳ ವೀಕ್ಷಿಸಲು ನಿಗದಿಪಡಿಸಿದ ಅವಧಿ 1 ತಾಸು. ದೇವಾಲಯ ದರ್ಶನ.
ಧರ್ಮಸ್ಥಳ ಮೊದಲ ದಿನ ತಲುಪುವ ಸಮಯ 19 ಗಂಟೆ. ದೇವಾಲಯ ದರ್ಶನ & ಊಟ ವಸತಿ (ಪ್ರಯಾಣಿಕರ ಖರ್ಚಿನಲ್ಲಿ). ಧರ್ಮಸ್ಥಳ (2ನೇ ದಿನ) ಹೊರಡುವ ಸಮಯ 10 ಗಂಟೆ.
ಸುಬ್ರಮಣ್ಯ ತಲುಪುವ ಸಮಯ 11.30, ಹೊರಡುವ ಸಮಯ 12.30. ಸ್ಥಳ ವೀಕ್ಷಣೆ ಸಮಯ 1 ತಾಸು. ಸುಬ್ರಮಣ್ಯ ದೇವಾಲಯ ದರ್ಶನ & ಊಟ. ಕಾರವಾರ ತಲುಪುವ ಸಮಯ 19.30.
ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್‌ಗಾಗಿ www.ksrtc.in ವೆಬ್ ಸೈಟ್ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‌ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಶಿರಸಿ 7760991625, ಕಾರವಾರ 7760991627 ಸಂಖ್ಯೆಗೆ ಕರೆ ಮಾಡಿ.












Click it and Unblock the Notifications