NWKRTC; ತಿರುಪತಿ, ಧರ್ಮಸ್ಥಳಕ್ಕೆ ವೇಗದೂತ ಬಸ್, ಸಮಯ ತಿಳಿಯಿರಿ
ಹಾವೇರಿ, ಡಿಸೆಂಬರ್ 26; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗ ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬಸ್‌ಗಳನ್ನು ಓಡಿಸಲಿದೆ. ವೇಗದೂತ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ.
ಹಾವೇರಿ ಜಿಲ್ಲೆಯ ಹಾವೇರಿ, ವಿವಿಧ ತಾಲೂಕುಗಳಿಂದ ಧಾರ್ಮಿಕ/ ಪ್ರೇಕ್ಷಣೀಯ ಸ್ಥಳಗಳಿಗೆ ಸಂಚಾರ ನಡೆಸುವ ಬಸ್‌ಗಳ ವಿವರಗಳನ್ನು ನಿಗಮ ನೀಡಿದೆ. ಜನರು ಈ ಬಸ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಹಾವೇರಿ ವಿಭಾಗ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಹಾವೇರಿ, ಹಾನಗಲ್, ಹಿರೇಕೆರೂರು, ಸವಣೂರು, ಬ್ಯಾಡಗಿ ಹೀಗೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಸಂಚಾರ ನಡೆಸುವ ಬಸ್‌ಗಳ ಮಾರ್ಗ, ಹೊರಡುವ, ಧಾರ್ಮಿಕ/ ಪ್ರೇಕ್ಷಣೀಯ ಸ್ಥಳಗಳಿಂದ ಬಸ್ ವಾಪಸ್ ಹೊರಡುವ ಸಮಯಗಳ ವಿವರಗಳನ್ನು ನೀಡಲಾಗಿದೆ.

ಧಾರ್ಮಿಕ/ ಪ್ರೇಕ್ಷಣೀಯ ಸ್ಥಳಗಳಿಗೆ ಸಂಚಾರ ನಡೆಸುವ ಜನರು ಈ ವೇಗದೂತ ಸಾರಿಗೆ ಸೌಲಭ್ಯದ ಉಪಯೋಗ ಪಡೆಯಬಹುದಾಗಿದೆ. ಬಸ್ ಹೊರಡುವ ಸಮಯ ನೋಡಿಕೊಂಡು ನಿಮ್ಮ ಪ್ರವಾಸದ ಯೋಜನೆ ರೂಪಿಸಬಹುದು.
ಬಸ್‌ಗಳ ವಿವರಗಳು ಹೀಗಿವೆ...
* ಹಾವೇರಿ-ಧರ್ಮಸ್ಥಳ ಬಸ್. ಹಾವೇರಿಯಿಂದ 8.45ಕ್ಕೆ ಹೊರಡಲಿದೆ. ಧರ್ಮಸ್ಥಳದಿಂದ 6 ಗಂಟೆಗೆ ಹೊರಡಲಿದೆ. ಹಾವೇರಿ ಮತ್ತು ಇಡಗುಂಜಿ ಬಸ್ ಹಾವೇರಿಯಿಂದ 6.30ಕ್ಕೆ ಮತ್ತು ಇಡಗುಂಜಿಯಿಂದ 13.30ಕ್ಕೆ ಹೊರಡಲಿದೆ.
* ಹಿರೇಕೆರೂರು-ಗುಡ್ಡಾಪುರ ನಡುವಿನ ವೇಗದೂತ ಬಸ್. ಹಿರೇಕೆರೂರಿನಿಂದ 7 ಗಂಟೆಗೆ ಮತ್ತು ಗುಡ್ಡಾಪುರದಿಂದಲೂ 7 ಗಂಟೆಗೆ ಹೊರಡಲಿದೆ ಎಂದು ಮಾಹಿತಿ ನೀಡಲಾಗಿದೆ. ಹಿರೇಕೆರೂರು -ಮೈಸೂರು ಮಾರ್ಗದ ಬಸ್. ಹಿರೇಕೆರೂರಿನಿಂದ 6.30 ಮತ್ತು ಮೈಸೂರಿನಿಂದ 5.45ಕ್ಕೆ ಹೊರಡಲಿದೆ.

* ಹಿರೇಕೆರೂರು-ವಿಶಾಲಗಡ ವೇಗದೂತ ಬಸ್. ಹಿರೇಕೆರೂರುನಿಂದ 7.45 ಮತ್ತು ವಿಶಾಲಗಡದಿಂದ 6.30ಕ್ಕೆ ಹೊರಡಲಿದೆ. ಹಾನಗಲ್-ವಿಶಾಲಗಡ ಬಸ್. ಹಾನಗಲ್‌ನಿಂದ 9 ಮತ್ತು ವಿಶಾಲಗಡದಿಂದ 6.30ಕ್ಕೆ ಹೊರಡಲಿದೆ.
* ಹಾನಗಲ್-ತಿರುಪತಿ ಬಸ್. ಹಾನಗಲ್‌ನಿಂದ 3.45ಕ್ಕೆ, ತಿರುಪತಿಯಿಂದ 3.45ಕ್ಕೆ ಹೊರಡಲಿದೆ. ಬ್ಯಾಡಗಿ-ಮಂತ್ರಾಲಯ ಬಸ್. ಬ್ಯಾಡಗಿಯಿಂದ 8.45 ಮತ್ತು ಮಂತ್ರಾಲಯದಿಂದ 7 ಗಂಟೆಗೆ ಹೊರಡಲಿದೆ.
* ಬ್ಯಾಡಗಿ-ಬಾದಾಮಿ ಬಸ್. ಬ್ಯಾಡಗಿಯಿಂದ 7.30 ಮತ್ತು ಬಾದಾಮಿಯಿಂದ 13.45ಕ್ಕೆ ಹೊರಡಲಿದೆ. ಸವಣೂರು-ವಿಶಾಲಗಡ ಬಸ್ ಬಸ್. ಸವಣೂರಿನಿಂದ 6.45ಕ್ಕೆ ಮತ್ತು ವಿಶಾಲಗಡದಿಂದ 6 ಗಂಟೆಗೆ ಹೊರಡಲಿದೆ ಎಂದು ಮಾಹಿತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜನರು nwkrtc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 7760991687.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗ ಭಕ್ತರ ಅನುಕೂಲಕ್ಕಾಗಿ ಯಲ್ಲಾಪುರದಿಂದ ಧರ್ಮಸ್ಥಳಕ್ಕೆ ಎಕ್ಸ್‌ಪ್ರೆಸ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಶಿರಸಿ, ಸಿದ್ದಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ ಮಾರ್ಗವಾಗಿ ಸಾಗಲಿದೆ. ಈ ಬಸ್ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಸಂಸ್ಥೆಯು ಈ ಹಿಂದೆ ಸರಣಿ ರಜಾದಿನಗಳು ಬಂದಾಗ ಕರಾವಳಿ ದೇವಾಲಯಗಳು ಮತ್ತು ಧರ್ಮಸ್ಥಳದ ದರ್ಶನಕ್ಕಾಗಿ ಎರಡು ದಿನಗಳ ಪ್ಯಾಕೇಜ್ ಟೂರ್ ಘೋಷಣೆ ಮಾಡಿತ್ತು. ಶಿರಸಿ, ಕೊಲ್ಲೂರು, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ಸಾಗುವ ಬಸ್ ಬಳಿಕ ಶಿರಸಿಗೆ ವಾಪಸ್ ಆಗುತ್ತಿತ್ತು.
ಶಿರಸಿ ಹಾಗೂ ಕಾರವಾರದಿಂದ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಹ್ಮಣ್ಯ ಈ ಎರಡು ದಿನದ ವಿಶೇಷ ಪ್ಯಾಕೇಜ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಳಿಕ ವಿವಿಧ ಧಾರ್ಮಿಕ/ ಪ್ರವಾಸಿ ಸ್ಥಳಗಳಿಗೆ ಬಸ್ ಸೇವೆ ಆರಂಭಿಸಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಆಂಧ್ರ ಪ್ರದೇಶದ ತಿರುಪತಿಗೆ ಹಲವಾರು ಪ್ರಯಾಣಿಕರು ಸಂಚಾರ ನಡೆಸುವುದದಿಂದ ಕಡಿಮೆ ಟಿಕೆಟ್ ದರದ ವೇಗದೂತ ಬಸ್ ಸೇವೆಯನ್ನು ಆರಂಭಿಸಲಾಗಿದೆ.












Click it and Unblock the Notifications