ಬಾಗಲಕೋಟೆ-ಪುಣೆ ನಾನ್ ಎಸಿ ಸ್ಲೀಪರ್ ಬಸ್: ವೇಳಾಪಟ್ಟಿ, ಮಾರ್ಗ
ಹುಬ್ಬಳ್ಳಿ, ಜೂನ್ 15: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಹೊಸ ಮಾರ್ಗವೊಂದನ್ನು ಘೋಷಣೆ ಮಾಡಿದೆ. ಅಂತರರಾಜ್ಯದ ಮಾರ್ಗದಲ್ಲಿ ಸಂಸ್ಥೆ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಓಡಿಸುತ್ತಿದೆ.
ಬಾಗಲಕೋಟೆ-ಪುಣೆ ನಡುವೆ ವಾಕರಸಾಸಂ ನಾನ್ ಎಸಿ ಸ್ಲೀಪರ್ ಬಸ್ ಓಡಿಸುತ್ತಿದೆ. ಪ್ರಯಾಣಿಕರ ಬಸ್ ಸಂಚಾರದ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಬಸ್ ವೇಳಾಪಟ್ಟಿ, ಮಾರ್ಗ: ಬಾಗಲಕೋಟೆ-ಪುಣೆ ನಡುವಿನ ನಾನ್ ಎಸಿ ಸ್ಲೀಪರ್ ಬಸ್ ಬಾಗಲಕೋಟೆಯಿಂದ 19:28ಕ್ಕೆ ಹೊರಡಲಿದೆ. ಪುಣೆಯನ್ನು 06:30ಕ್ಕೆ ತಲುಪಲಿದೆ. ಪುಣೆಯಿಂದ 21:05ಕ್ಕೆ ಹೊರಡುವ ಬಸ್, ಬಾಗಲಕೋಟೆಯನ್ನು 08:04ಕ್ಕೆ ತಲುಪಲಿದೆ.
ಈ ಮಾರ್ಗ ಲೋಕಾಪೂರ, ಮುಧೋಳ, ಜಮಖಂಡಿ, ಬನಹಟ್ಟಿ, ರಬಕವಿ, ಸತಾರ ಮೂಲಕ ಸಂಚಾರ ನಡೆಸುತ್ತಿದೆ. ಬಾಗಲಕೋಟೆ-ಪುಣೆ ನಡುವಿನ ಪ್ರಯಾಣ ದರ 849 ರೂ.ಗಳು ಎಂದು ನಿಗದಿ ಮಾಡಲಾಗಿದೆ.
ಪ್ರಯಾಣಿಕರ ಮುಂಗಡ ಟಿಕೆಟ್ ಬುಕ್ ಮಾಡಲು www.ksrtc. in ವೆಬ್ಸೈಟ್ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760993878.
ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ :
— North Western Karnataka Road Transport Corporation (@nw_krtc) June 12, 2024
ಬಾಗಲಕೋಟೆ 🔁 ಪುಣೆ
ಆನ್ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ https://t.co/P8O6ADKul2 ಗೆ ಭೇಟಿ ನೀಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 77609 93878#NWKRTC #bagalkot #NonAc #Pune #Bus #BusStand #BookTicket #PublicTransport #Travel@PriyangaMadhan pic.twitter.com/T5j9lB0oY5
ಹುಬ್ಬಳ್ಳಿ-ಸೋಲಾಪುರ ರಾಜಹಂಸ ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಹುಬ್ಬಳ್ಳಿ-ಸೋಲಾಪುರ ನಡುವೆ ರಾಜಹಂಸ ಬಸ್ ಸೇವೆಯನ್ನು ಆರಂಭಿಸಿದೆ. ಬಸ್ ಮಾರ್ಗ, ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಬಸ್ ಹುಬ್ಬಳ್ಳಿಯಿಂದ 22:15ಕ್ಕೆ ಹೊರಟು ಸೋಲಾಪುರವನ್ನು 06:15ಕ್ಕೆ ತಲುಪುತ್ತದೆ. ಸೋಲಾಪುರವನ್ನು 22:00ಕ್ಕೆ ಬಿಟ್ಟು, ಹುಬ್ಬಳ್ಳಿಯನ್ನು 06:00ಕ್ಕೆ ತಲುಪುತ್ತದೆ. ವಿಜಯಪುರ ಮಾರ್ಗದ ಮೂಲಕ ಬಸ್ ಸಂಚಾರ ನಡೆಸುತ್ತದೆ. ಈ ಮಾರ್ಗದ ಪ್ರಯಾಣ ದರ 480 ರೂ.ಗಳು.
ಅಂತರರಾಜ್ಯ ಪ್ರಯಾಣಿಕರ ಅನುಕೂಲ ಕಲ್ಪಿಸಲು ವೇಗದೂತ ಬಸ್ಗಳನ್ನು ಹುಬ್ಬಳ್ಳಿ-ಹೈದರಾಬಾದ್ ನಡುವೆ ಪರಿಚಯಿಸಿದೆ. ಈ ಮಾರ್ಗದ ಪ್ರಯಾಣ ದರ 700 ರೂ.ಗಳು ಎಂದು ನಿಗದಿ ಮಾಡಲಾಗಿದೆ.
ಈ ಬಸ್ ಹುಬ್ಬಳ್ಳಿಯಿಂದ ಹೊರಟು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್ ನಗರ ತಲುಪಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ಗೆ ವೆಬ್ಸೈಟ್ಗೆ ಭೇಟಿ ನೀಡಬಹುದು. ಈ ಬಸ್ ಬಸ್ ಹುಬ್ಬಳ್ಳಿಯಿಂದ 15:00 ಗಂಟೆಗೆ ಹೊರಡಲಿದೆ. ಹೈದರಾಬಾದ್ ತಲುಪುವ ವೇಳೆ 05:00.
ವಾಕರಸಾಸಂ ಕುಮಟಾ-ತಿರುಪತಿ ನಡುವೆಯೂ ವೇಗದೂತ ಬಸ್ ಸಂಚಾರವನ್ನು ಆರಂಭಿಸಿದೆ. ವೇಗದೂತ ಬಸ್ ಪ್ರಯಾಣ ದರ 855 ರೂ.ಗಳು. ಕುಮಟಾ-ತಿರುಪತಿ ನಡುವಿನ ಬಸ್ ಶಿರಸಿ, ಸಿದ್ಧಾಪುರ, ಶಿವಮೊಗ್ಗ, ಬೆಂಗಳೂರು ಮೂಲಕ ಸಂಚರಿಸಲಿದ್ದು, ಹಲವು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.
ಬಸ್ ಕುಮಟಾದಿಂದ 16:00ಕ್ಕೆ ಹೊರಟು, ತಿರುಪತಿಯನ್ನು 09:30ಕ್ಕೆ ತಲುಪಲಿದೆ. ಹಾಗೆಯೇ ತಿರುಪತಿಯಿಂದ 16:00 ಗಂಟೆಗೆ ಹೊರಟು, ಕುಮಟಾವನ್ನು 10.30ಕ್ಕೆ ತಲುಪಲಿದೆ.
-
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ











Click it and Unblock the Notifications