ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NWKRTC; ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಪ್ಯಾಕೇಜ್

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

|
Google Oneindia Kannada News

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ)ಯ ಉತ್ತರ ಕನ್ನಡ ವಿಭಾಗ, ಶಿರಸಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.

ವಾರಾಂತ್ಯದ ರಜೆಯಲ್ಲಿ ಜನರು ಈ ವಿಶೇಷ ಪ್ಯಾಕೇಜ್‌ಗಳ ಮೂಲಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಈ ಪ್ಯಾಕೇಜ್‌ನಲ್ಲಿ ವಯಸ್ಕರು ಮತ್ತು ಮಕ್ಕಳಿಗೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿದೆ.

IRCTC Goa tour package; ಪ್ರವಾಸಕ್ಕೆ ಈಗಲೇ ಪ್ಲಾನ್‌ ಮಾಡಿIRCTC Goa tour package; ಪ್ರವಾಸಕ್ಕೆ ಈಗಲೇ ಪ್ಲಾನ್‌ ಮಾಡಿ

ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ವಾಕರಸಾಸಂ ಕರಾವಳಿ, ದೇವಾಲಯಗಳ ಭೇಟಿ ಪ್ಯಾಕೇಜ್ ಸೇರಿದಂತೆ ವಿವಿಧ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದಕ್ಕೆ ಜನರಿಂದ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Mumbai-Surathkal train; ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು Mumbai-Surathkal train; ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು

NWKRTC Announced Package To Visit Tourist Places

ಈ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳ ಭೇಟಿಗಾಗಿಯೇ ವಾರಾಂತ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್‌ಗಳ ದರ ಊಟ, ಉಪಹಾರ, ಪ್ರವೇಶ ಶುಲ್ಕವನ್ನು ಒಳಗೊಂಡಿರುವುದಿಲ್ಲ.

ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ

ಪ್ಯಾಕೇಜ್ ಅಡಿಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿದಾಗ ವಸತಿ, ದೇವಾಲಯದ ಪೂಜೆಯ ಶುಲ್ಕ, ದೇವಾಲಯದ ಪ್ರವೇಶ ಶುಲ್ಕವನ್ನು ಪ್ಯಾಕೇಜ್ ದರ ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ಯಾಕೇಜ್ ವಿವರಗಳು; ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಈ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ವಯಸ್ಕರಿಗೆ ಪ್ರಯಾಣ ದರ 400 ರೂ.ಗಳು, ಮಕ್ಕಳಿಗೆ 300 ರೂ. ಗಳು. ಊಟ, ಉಪಹಾರ ವೆಚ್ಚ ಮತ್ತು ಎಂಟ್ರಿ ಶುಲ್ಕ ಹೊರತುಪಡಿಸಿ ದರ ನಿಗದಿ ಮಾಡಲಾಗಿದೆ.

NWKRTC Announced Package To Visit Tourist Places

ಕುಮಟಾ-ಗೋಕರ್ಣ (ಪ್ರತಿ ಶನಿವಾರ ಮತ್ತು ಭಾನುವಾರ), ಅಂಕೋಲಾ-ಗೋಕರ್ಣ (ಪ್ರತಿ ಶುಕ್ರವಾರ) ಎಂದು ಎರಡು ಪ್ಯಾಕೇಜ್ ಸಿದ್ಧಗೊಳಿಸಲಾಗಿದೆ.

ಈ ಪ್ಯಾಕೇಜ್ ಅಡಿ ಗೋಕರ್ಣ, ಮಿರ್ಜಾನ ಕೋಟೆ, ಅಪ್ಸರಕೊಂಡ, ಇಡಗುಂಜಿ, ಮುರುಡೇಶ್ವರ ಮತ್ತು ಹೊನ್ನಾವರ ವೀಕ್ಷಣೆ ಮಾಡಬಹುದಾಗಿದೆ.

ದೇವಸ್ಥಾನಗಳ ಪ್ಯಾಕೇಜ್; ವಾಕರಸಾಸಂ ದೇವಾಲಯಗಳನ್ನು ವೀಕ್ಷಿಸುವ ಜನರಿಗಾಗಿ ಪ್ರತಿ ಶನಿವಾರದ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್‌ನಲ್ಲಿಯೂ ಎರಡು ಮಾರ್ಗಗಳಿವೆ.

ಶಿರಸಿ-ಧರ್ಮಸ್ಥಳ ಪ್ಯಾಕೇಜ್‌ನಲ್ಲಿ ಕೊಲ್ಲೂರು, ಉಡುಪಿ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ ವೀಕ್ಷಣೆ ಮಾಡಬಹುದಾಗಿದೆ. ಈ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ದರ 900 ರೂ. ಮತ್ತು ಮಕ್ಕಳಿಗೆ ರೂ. 700 ದರವಿದೆ (ಊಟ, ಉಪಹಾರ, ವಸತಿ ವೆಚ್ಚ, ದೇವಾಲಯ ಪ್ರವೇಶ ಶುಲ್ಕ, ಪೂಜಾ ಖರ್ಚು ಹೊರತುಪಡಿಸಿ).

ಮತ್ತೊಂದು ಪ್ಯಾಕೇಜ್ ಕಾರವಾರ-ಧರ್ಮಸ್ಥಳವನ್ನು ಒಳಗೊಂಡಿದೆ. ಈ ಪ್ಯಾಕೇಜ್ ಅಡಿ ಕೊಲ್ಲೂರು, ಉಡುಪಿ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ ವೀಕ್ಷಣೆ ಮಾಡಬಹುದಾಗಿದೆ. ಈ ಪ್ಯಾಕೇಜ್‌ನಲ್ಲಿಯೂ ದರ ಊಟ, ಉಪಹಾರ, ವಸತಿ ವೆಚ್ಚ, ದೇವಾಲಯ ಪ್ರವೇಶ ಶುಲ್ಕ ಪೂಜಾ ಖರ್ಚು ಹೊರತುಪಡಿಸಿ ವಯಸ್ಕರಿಗೆ ರೂ. 900 ಮತ್ತು ಮಕ್ಕಳಿಗೆ 700 ರೂ. ದರವಿದೆ.

ವಿಶೇಷ ಬಸ್ ಸೇವೆ; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಜಾತ್ರೆಗಳಿಗೆ ತೆರಳುವ ಭಕ್ತರಿಗೆ ಅನುಕೂಲವಾಗಲು ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ. ಭಕ್ತಾದಿಗಳು ಈ ಬಸ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಶ್ರೀ ಯಲ್ಲಮ್ಮ ದೇವಿ ಜಾತ್ರೆ ಪ್ರಯುಕ್ತ ವಿಶೇಷ ಬಸ್ ಕಾರ್ಯಾಚರಣೆ ನಡೆಸುತ್ತಿದೆ. ದಿನಾಂಕ 02/2/2023 ರಿಂದ 20/02/2023ರ ತನಕ ಹುಬ್ಬಳ್ಳಿ ವಿಭಾಗ ಹಾಗೂ ದಿನಾಂಕ 2/2/2023 ರಿಂದ 8/2/2023ರವರೆಗೆ ಧಾರವಾಡ ಮತ್ತು ಬೆಳಗಾವಿ ವಿಭಾಗಗಳಿಂದ ಯಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ಸಂಚಾರ ನಡೆಸಲಿದೆ.

ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ 7760991652, ಧಾರವಾಡ 7760996271, ಬೆಳಗಾವಿ 7760991602 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

English summary
The North Western Karnataka Road Transport Corporation (NWKRTC) announced package to visit tourist places. Here are the fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X