ಮೈಸೂರು ಅರಮನೆ ಸೇರಿದಂತೆ ಪ್ರವಾಸಿಗರನ್ನು ಸೆಳೆಯುವ ಭಾರತದ ಅದ್ಭುತ ಹೆರಿಟೇಜ್ ತಾಣಗಳು

ಭಾರತವು ರಾಜರು, ಮಹಾರಾಜರು ಮತ್ತು ವೈಭವಯುತ ಅರಮನೆಗಳ ಇತಿಹಾಸಕ್ಕೆ ಖ್ಯಾತಿಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಇರುವ ಕೋಟೆಗಳು, ಅರಮನೆಗಳು ಮತ್ತು ಐತಿಹಾಸಿಕ ತಾಣಗಳು ಇಂದಿಗೂ ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಇವು ಕೇವಲ ಪ್ರವಾಸಿ ತಾಣಗಳಷ್ಟೇ ಅಲ್ಲದೆ ಭಾರತದ ಶ್ರೀಮಂತ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ರಾಜಮನೆತನದ ಜೀವನಶೈಲಿಯ ಪ್ರತಿಬಿಂಬಗಳಾಗಿವೆ. ವಿಶೇಷವಾಗಿ ಕರ್ನಾಟಕದ ಮೈಸೂರು ಅರಮನೆ ದೇಶದ ಪ್ರಸಿದ್ಧ ರಾಜಪರಂಪರೆಯ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

Mysore Palace and Top Heritage Places

ಮೈಸೂರು ಅರಮನೆ - ಕರ್ನಾಟಕ

ನಮ್ಮ ಕರ್ನಾಟಕದ ಹೆಮ್ಮೆಯಾದ ಮೈಸೂರು ಅರಮನೆ ಭಾರತದ ಅತ್ಯಂತ ಜನಪ್ರಿಯ ಅರಮನೆಗಳಲ್ಲಿ ಒಂದಾಗಿದೆ. ಅಂಬಾ ವಿಲಾಸ್ ಅರಮನೆ ಎಂದೂ ಕರೆಯಲಾಗುವ ಈ ಅರಮನೆ ತನ್ನ ಅದ್ಭುತವಾದ ವಾಸ್ತುಶಿಲ್ಪ, ಭವ್ಯ ದರ್ಬಾರ್ ಹಾಲ್ ಮತ್ತು ದಸರಾ ಸಂದರ್ಭದಲ್ಲಿ ನಡೆಯುವ ಬೆಳಕಿನ ಅಲಂಕಾರಕ್ಕಾಗಿ ವಿಶ್ವಪ್ರಸಿದ್ಧವಾಗಿದೆ. ಒಡೆಯರ್ ರಾಜವಂಶದವರ ಅಧಿಕೃತ ನಿವಾಸವಾಗಿದ್ದ ಇದು ಇಂಡೋ-ಸಾರಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಅರಮನೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ನಡೆಯುವ ದೀಪಾಲಂಕಾರಕ್ಕೆ ವಿಶ್ವವಿಖ್ಯಾತವಾಗಿದೆ. ಒಳಾಂಗಣದ ಚಿತ್ರಕಲೆ, ಕಂಚಿನ ಕೆಲಸ ಮತ್ತು ಅಲಂಕಾರಿಕ ಬಾಗಿಲುಗಳು ಪ್ರವಾಸಿಗರ ಗಮನ ಸೆಳೆಯುತ್ತವೆ.

ಭೇಟಿ ನೀಡುವ ಸಮಯ: ಪ್ರತಿಧಿನ ಬೆಳಿಗ್ಗೆ 10 ರಿಂದ ಸಂಜೆ 5.30

ಶುಲ್ಕ: ಭಾರತೀಯರಿಗೆ ಸುಮಾರು 100 ರೂ. ಮತ್ತು ವಿದೇಶಿಯರಿಗೆ 500 ರೂ.

Mysore Palace and Top Heritage Places

ಆಂಬರ್ ಪೋರ್ಟ್ - ರಾಜಸ್ಥಾನ

ರಾಜಸ್ಥಾನದ ಜೈಪುರದಲ್ಲಿರುವ ಅಂಬರ್ ಕೋಟೆ(ಅಮೇರ್ ಕೋಟೆ) ತನ್ನದೆ ಆದ ಅದ್ಬುತವಾದ ವಾಸ್ತುಶಿಲ್ಪ ಮತ್ತು ಶ್ರೀಮಂತ ಇತಿಹಾಸ ಹೊಂದಿರುವ ಕೋಟೆ ಆಗಿದೆ. ಜೈಪುರದಿಂದ ಸುಮಾರು 11 ಕಿ,ಮೀ ದೂರದಲ್ಲಿರುವ ಈ ಕೋಟೆಯು ರಜಪೂತ ಮತ್ತು ಮೊಘಲ್ ಶೈಲಿಗಳ ಸಮ್ಮಿಶ್ರಣವಾಗಿದೆ. ಇದನ್ನು 1952 ರಲ್ಲಿ ರಾಜ್ ಮಾನ್ ಸಿಂಗ್ ನಿರ್ಮಿಸಿದರು. ಅರಾವಳಿ ಪರ್ವತಗಳ ಮಧ್ಯೆ ನಿರ್ಮಾಣಗೊಂಡಿರುವ ಈ ಕೋಟೆ ರಾಜಸ್ಥಾನದ ಐತಿಹಾಸಿಕ ವೈಭವವನ್ನು ಪರಿಚಯಿಸುತ್ತದೆ.

ಭೇಟಿ ನೀಡುವ ಸಮಯ: ಪ್ರತಿಧಿನ ಬೆಳಿಗ್ಗೆ 8 ರಿಂದ ಸಂಜೆ 5.30

ಶುಲ್ಕ: ಭಾರತೀಯರಿಗೆ ಸುಮಾರು 100 ರೂ. ಮತ್ತು ವಿದೇಶಿಯರಿಗೆ 500 ರೂ.

ಭಾರತದ ಅತಿದೊಡ್ಡ ಕೋಟೆ ಯಾವುದು ಗೊತ್ತಾ? ರಾಜಸ್ಥಾನದ ಈ ಕೋಟೆಯ ಇತಿಹಾಸ ರೋಚಕ
ಭಾರತದ ಅತಿದೊಡ್ಡ ಕೋಟೆ ಯಾವುದು ಗೊತ್ತಾ? ರಾಜಸ್ಥಾನದ ಈ ಕೋಟೆಯ ಇತಿಹಾಸ ರೋಚಕ

ಉದಯಪುರ ಸಿಟಿ ಪ್ಯಾಲೆಸ್, ರಾಜಸ್ಥಾನ

ರಾಜಸ್ಥಾನದ ಉದಯಪುರದಲ್ಲಿರುವ ಸಿಟಿ ಪ್ಯಾಲೇಸ್ ಪಿಚೋಲಾ ಸರೋವರದ ಪೂರ್ವ ದಂಡೆಯಲ್ಲಿರುವ ಒಂದು ಸುಂದರವಾದ ಅರಮನೆಯಾಗಿದೆ. ಇದು ರಾಜಸ್ಥಾನಲ್ಲಿರುವ ಅರಮನೆಗಳಲ್ಲಿ ಅತಿ ದೊಡ್ಡದಾದ ಅರಮನೆಗಳಲ್ಲಿ ಒಂದು ಇದು ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಅರಮನೆಯೊಳಗಿನ ಮ್ಯೂಸಿಯಂ, ಉದ್ಯಾನಗಳು ಮತ್ತು ಅಂಗಳಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ಭೇಟಿ ನೀಡುವ ಸಮಯ: ಪ್ರತಿಧಿನ ಬೆಳಿಗ್ಗೆ 9:30 ರಿಂದ ಸಂಜೆ 5.30

ಶುಲ್ಕ: ಭಾರತೀಯರಿಗೆ ಸುಮಾರು 300 ರೂ. ಮತ್ತು ಮಕ್ಕಳಿಗೆ 100 ರೂ.

"ಪರ್ವತಗಳ ರಾಣಿ" ಎಂದೇ ಖ್ಯಾತಿ ಪಡೆದಿರುವ ನಗರ ಯಾವುದು? ಮಸ್ಸೂರಿ ಕುರಿತು ವಿಶೇಷ ಮಾಹಿತಿ

ಮೆಹ್ರಾನ್‌ಗಢ್ ಕೋಟೆ - ಜೋಧ್ಪುರ

ರಾಜಸ್ಥಾನದ ಜೋಧ್‌ಪುರದಲ್ಲಿರುವ ಮೆಹ್ರಾನ್‌ಗಢ್ ಕೋಟೆಯು ಭಾರತದ ಅತಿ ದೊಡ್ಡ ಮತ್ತು ಭವ್ಯವಾದ ಕೋಟೆಗಳಲ್ಲಿ ಒಂದಾಗಿದೆ. ಗುಡ್ಡದ ಮೇಲಿರುವ ಮೆಹ್ರಾನ್‌ಗಢ್ ಕೋಟೆ ತನ್ನ ಬೃಹತ್ ಗೋಡೆಗಳು ಮತ್ತು ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇದನ್ನು 1459ರಲ್ಲಿ ರಜಪೂತ ದೊರೆ ರಾವ್ ಜೋದಾ ನಿರ್ಮಿಸಿದರು. 400 ಅಡಿ ಎತ್ತರದ ಕಲ್ಲಿನ ಮೇಲಿರುವ ಈ ಕೋಟೆಯು ಸುಮಾರು 1200 ಎಕರೆ ವಿಸ್ತೀರ್ಣವಿದೆ.

ಕೋಟೆಯೊಳಗಿನ ಮ್ಯೂಸಿಯಂನಲ್ಲಿ ರಾಜಮನೆತನ ಬಳಸುತ್ತಿದ್ದ ಪಲ್ಲಕ್ಕಿಗಳು, ಶಸ್ತ್ರಾಸ್ತ್ರಗಳು ಮತ್ತು ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಜೋಧ್ಪುರ ನಗರದ ಸುಂದರ ದೃಶ್ಯವೂ ಇಲ್ಲಿಂದ ಕಾಣಿಸುತ್ತದೆ.

ಭೇಟಿ ನೀಡುವ ಸಮಯ: ಪ್ರತಿಧಿನ ಬೆಳಿಗ್ಗೆ 9 ರಿಂದ ಸಂಜೆ 5

ಶುಲ್ಕ: ಭಾರತೀಯರಿಗೆ ಸುಮಾರು 100 ರೂ. ಮತ್ತು ವಿದೇಶಿಯರಿಗೆ 200 ರೂ.

Mysore Palace and Top Heritage Places

ಗೋಲ್ಕೊಂಡಾ ಕೋಟೆ, ತೆಲಂಗಾಣ

ತೆಲಂಗಾಣ ಹೈದರಾಬಾದ್ ನಲ್ಲಿರುವ ಗೋಲ್ಕೊಂಡಾ ಕೋಟೆಯು 400 ಅಡಿ ಎತ್ತರ ಗ್ರಾನೈಟ್ ಗುಡ್ಡದ ಮೇಲೆ ನಿರ್ಮಿಸಲಾದ ಭವ್ಯವಾದ ಐತಿಹಾಸಿಕ ತಾಣವಾಗಿದೆ. ಕಾಕತೀಯರು ನಿರ್ಮಿಸಿ ಬಳಿಕ ಕುತ್ಬ್ ಶಾಹಿ ವಂಶದ ಆಡಳಿತದಲ್ಲಿದ್ದ ಗೋಲ್ಕೊಂಡಾ ಕೋಟೆ ತನ್ನ ಧ್ವನಿಶಾಸ್ತ್ರ ವಿನ್ಯಾಸಕ್ಕಾಗಿ ಪ್ರಸಿದ್ಧವಾಗಿದೆ. ಕೋಟೆಯ ಪ್ರವೇಶ ದ್ವಾರದಲ್ಲಿ ಚಪ್ಪಾಳೆ ತಟ್ಟಿದ ಶಬ್ದ ಮೇಲಿನ ಭಾಗದವರೆಗೂ ಕೇಳಿಸಿಕೊಳ್ಳುವುದು ಇದರ ವಿಶೇಷತೆ. ಅರಮನೆ ಅವಶೇಷಗಳು ಮತ್ತು ಭವ್ಯ ದ್ವಾರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಭೇಟಿ ನೀಡುವ ಸಮಯ: ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5.30

ಶುಲ್ಕ: ಭಾರತೀಯರಿಗೆ ಸುಮಾರು 25 ರೂ. ಮತ್ತು ವಿದೇಶಿಯರಿಗೆ 300 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+