Get Updates
Get notified of breaking news, exclusive insights, and must-see stories!

ಬೆಂಗಳೂರು ಸಮೀಪವಿರುವ ಪ್ರಸಿದ್ಧ ಶಿವನ ಕ್ಷೇತ್ರಗಳಿವು: ಶ್ರಾವಣ ಮಾಸದಲ್ಲಿ ಒಮ್ಮೆ ಹೋಗಿ ಬನ್ನಿ

ಶ್ರಾವಣ ಮಾಸ ಎಂದರೆ ಶಿವನಿಗೆ ಅಚ್ಚುಮೆಚ್ಚು ಎಂದು ಪುರಾಣಗಳು ಹೇಳುತ್ತವೆ. ಈ ಮಾಸದಲ್ಲಿ ಹೆಚ್ಚಿನ ಭಕ್ತರು ಶಿವನ ದರ್ಶನ ಮಾಡಲು ಬಯಸುತ್ತಾರೆ. ಪಾರ್ವತಿ ಶಿವನನ್ನು ಪತಿಯನ್ನಾಗಿ ಪಡೆಯಲು ಶ್ರಾವಣ ಮಾಸದಲ್ಲಿ ಕಠೋರ ತಪಸ್ಸು ಮಾಡಿದ್ದರು ಎಂದು ಭಕ್ತರು ನಂಬಿದ್ದಾರೆ.

ಬೆಂಗಳೂರಿನಲ್ಲೇ ಸಾಕಷ್ಟು ಶಿವನ ದೇವಸ್ಥಾನಗಳಿವೆ. ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ಸ್ವಾಮಿ, ಗಂಗಾಧರೇಶ್ವರ ದೇವಸ್ಥಾನಗಳು ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತವೆ.

ಆದರೆ ಬೆಂಗಳೂರಿಗೆ ಸಮೀಪವೇ ಸಾಕಷ್ಟು ಶಿವನ ಪುಣ್ಯ ಕ್ಷೇತ್ರಗಳಿವೆ ದ್ವಿಚಕ್ರ ವಾಹನವಿದ್ದರೂ ಸಾಕು ಒಂದು ದಿನದಲ್ಲಿ ಈ ಸ್ಥಳಗಳಿಗೆ ಹೋಗಿ ಬರಬಹುದು ಅಂತಹ ಕೆಲವು ಪ್ರಮುಖ ಶಿವನ ಕ್ಷೇತ್ರಗಳ ವಿವರ ಇಲ್ಲಿದೆ.

Must-Visit Shiva Temples near Bengaluru During Shravana Masa

1) ಕೋಟಿಲಿಂಗೇಶ್ವರ ದೇವಸ್ಥಾನ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಿಂದ 12 ಕಿಮೀ ದೂರದಲ್ಲಿರುವ ಕಮ್ಮಸಂದ್ರ ಊರು, ಕೋಟಿಲಿಂಗೇಶ್ವರ ಹೆಸರಿನಿಂದ ಖ್ಯಾತಿ ಪಡೆದುಕೊಂಡಿದೆ. ಬೆಂಗಳೂರಿನಿಂದ 95 ಕಿಮೀ ದೂರದಲ್ಲಿದ್ದು, ಏಷ್ಯಾದಲ್ಲಿಯೇ ಅತಿ ದೊಡ್ಡ ಮತ್ತು ಎತ್ತರದ ಶಿವಲಿಂಗ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

108 ಅಡಿ ಎತ್ತರದ ಶಿವಲಿಂಗ ಮತ್ತು 32 ಅಡಿ ಎತ್ತರದ ಬಸವ ಮೂರ್ತಿಯನ್ನು ಹೊಂದಿದೆ. ವಿಶಾಲ ಪ್ರದೇಶದಲ್ಲಿ ಭಕ್ತರು ಸ್ಥಾಪನೆ ಮಾಡಿರುವ ಲಕ್ಷಾಂತರ ಶಿವಲಿಂಗಗಳನ್ನು ಇಲ್ಲಿ ನೋಡಬಹುದಾಗಿದೆ. ಕೋಲಾರ ಗೋಲ್ಡ್ ಫೀಲ್ಡ್ (KGF) ಕೂಡ ಇಲ್ಲಿಗೆ ಸಮೀಪವೇ ಇದ್ದು ಸಮಯ ಇದ್ದರೆ ಅಲ್ಲಿಗೂ ಭೇಟಿ ನೀಡಬಹುದಾಗಿದೆ.

Must-Visit Shiva Temples near Bengaluru During Shravana Masa

2) ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ, ಅವನಿ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅವನಿ ಶಿವನ ಪುಣ್ಯಕ್ಷೇತ್ರವಾಗಿದೆ. ಬೆಂಗಳೂರಿನಿಂದ 95 ಕಿಲೋ ಮೀಟರ್ ದೂರವಿದ್ದು, ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿದೆ.

ಕ್ರಿಸ್ತಶಕ 10ನೇ ಶತಮಾನದಲ್ಲಿ ನೊಳಂಬ ರಾಜವಂಶದವರು ಇಲ್ಲಿ ಶಿವನ ದೇವಸ್ಥಾನ ನಿರ್ಮಿಸಿದ್ದು, ರಾಮಲಿಂಗೇಶ್ವರ ಹೆಸರಿನಲ್ಲು ಪೂಜೆ ನಡೆಸಲಾಗುತ್ತದೆ, ಚೋಳರ ಕಾಲದಲ್ಲಿ ದೇವಸ್ಥಾನವನ್ನು ನವೀಕರಿಸಲಾಗಿದೆ. ಕೆಜಿಎಫ್ ಈ ಪ್ರವಾಸಿ ಸ್ಥಳಕ್ಕೆ ಹತ್ತಿರದಲ್ಲೇ ಇದ್ದು ಅಲ್ಲಿಗೂ ಭೇಟಿ ನೀಡಬಹುದಾಗಿದೆ.

Must-Visit Shiva Temples near Bengaluru During Shravana Masa

3) ಆದಿಯೋಗಿ

ಈಶಾ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲಿ ಆದಿಯೋಗಿ ಮೂರ್ತಿ ಸ್ಥಾಪಿಸಲಾಗಿದೆ. ಇದನ್ನು ಸದ್ಗುರು ಸನ್ನಿಧಿ ಎಂದು ಕರೆಯಲಾಗುತ್ತದೆ.

ಆದಿಯೋಗಿ ಮೂರ್ತಿಯು 112 ಅಡಿ ಎತ್ತರವಿದ್ದು ನೋಡಲು ಆಕರ್ಷಣೀಯವಾಗಿದೆ. ಪ್ರತಿದಿನ ಇಲ್ಲಿ ಲೇಸರ್ ಶೋ ನಡೆಯುತ್ತದೆ ಇದನ್ನು ನೋಡಲು ಅದ್ಭುತ ಪ್ರದೇಶವಾಗಿದೆ.

Must-Visit Shiva Temples near Bengaluru During Shravana Masa

4) ಲೇಪಾಕ್ಷಿ ದೇವಸ್ಥಾನ

ಆಂಧ್ರಪ್ರದೇಶದ ಹಿಂದೂಪುರದಿಂದ 13 ಕಿಮೀ ದೂರದಲ್ಲಿರುವ ಲೇಪಾಕ್ಷಿಯಲ್ಲಿರುವ ಶಿವನ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಬೆಂಗಳೂರಿನಿಂದ ಸುಮಾರು 122 ಕಿ.ಮೀ ದೂರದಲ್ಲಿದ್ದು ಒಂದು ದಿನದ ಪ್ರವಾಸಕ್ಕೆ ಸೂಕ್ತವಾಗಿದೆ.

ಇಲ್ಲಿನ ಶಿವ, ವಿಷ್ಣು ಮತ್ತು ವೀರಭದ್ರ ದೇವಸ್ಥಾನ ಇಲ್ಲಿ ಪ್ರಮುಖವಾಗಿದೆ. ಅದರಲ್ಲೂ ವೀರಭ್ರದ ದೇವಸ್ಥಾನ ನೋಡಲು ನಯನಮನೋಹರವಾಗಿದೆ. ಕ್ರಿಸ್ತಶಕ 1529-42ರ ಅವಧಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಶಿವನ 14 ಅವತಾರಗಳನ್ನು ಈ ದೇವಸ್ಥಾನದಲ್ಲಿ ನೋಡಬಹುದಾಗಿದೆ. ಬೃಹತ್ ಗಾತ್ರದ ನಂದಿ ವಿಗ್ರಹ ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ.

Must-Visit Shiva Temples near Bengaluru During Shravana Masa

5) ದಕ್ಷಿಣ ಕಾಶಿ ಶಿವಗಂಗೆ

ಶಿವಗಂಗೆ ಬೆಂಗಳೂರು ಸಮೀಪದ ಮತ್ತೊಂದು ಪವಿತ್ರ ಕ್ಷೇತ್ರವಾಗಿದೆ. ಇದನ್ನು ದಕ್ಷಿಣ ಕಾಶಿ ಎಂದು ಕೂಡ ಕರೆಯಲಾಗುತ್ತದೆ. ಬೆಂಗಳೂರಿನಿಂದ 56 ಕಿಮೀ ದೂರದಲ್ಲಿದೆ, ಗಂಗಾಧರೇಶ್ವರ ದೇವಸ್ಥಾನ, ಹೊನ್ನದೇವಿ ದೇವಸ್ಥಾನ, ಒಳಕಲ್ಲು ತೀರ್ಥ, ಪಾತಾಳ ಗಂಗೆ ಪ್ರಮುಖ ಆಕರ್ಷಣೆಯಾಗಿದೆ.

ಟ್ರೆಕ್ಕಿಂಗ್ ಮಾಡಬೇಕು ಎನ್ನುವವರಿಗೂ ಇದು ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಹೊಯ್ಸಳ ರಾಜ ವಿಷ್ಣುವರ್ಧನನ ಪತ್ನಿ ಶಾಂತಲಾ ಈ ಬೆಟ್ಟದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ಪ್ರತೀತಿ ಇದ್ದು, ಇದನ್ನು ಶಾಂತಲಾ ಡ್ರಾಪ್ ಎಂದು ಗುರುತಿಸಲಾಗಿದೆ.

Must-Visit Shiva Temples near Bengaluru During Shravana Masa

6) ಸಿದ್ಧಗಂಗಾ ಕ್ಷೇತ್ರ

ತುಮಕೂರು ನಗರದಿಂದ 6 ಕಿಮೀ ದೂರದಲ್ಲಿದ್ದು ಬೆಂಗಳೂರಿನಿಂದ 64 ಕಿಮೀ ದೂರದಲ್ಲಿದೆ. ತ್ರಿವಿಧ ದಾಸೋಹಕ್ಕೆ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಲ್ಪಿಸಿಕೊಟ್ಟಿದೆ.

ಪ್ರತಿದಿನ ಇಲ್ಲಿ 10 ಸಾವಿರ ಮಕ್ಕಳು ಊಟ ಮಾಡುತ್ತಾರೆ. ಇಲ್ಲಿನ ಗೋಸಲ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆಯಬಹುದು. ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿ ಅವರ ದೇವಸ್ಥಾನ ಕೂಡ ಭಕ್ತಾದಿಗಳನ್ನು ಸೆಳೆಯುತ್ತದೆ.

Must-Visit Shiva Temples near Bengaluru During Shravana Masa

7) ಸಿದ್ದರಬೆಟ್ಟ

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯಲ್ಲಿರುವ ಸಿದ್ದರಬೆಟ್ಟ ಕ್ಷೇತ್ರ ಕರ್ನಾಟಕದ ಸಂಜೀವಿನಿ ಬೆಟ್ಟ ಎಂದು ಹೆಸರಾಗಿದೆ. ಹಲವು ಆಯುರ್ವೇದ ಗಿಡಮೂಲಿಕೆಗಳು ಈ ಬೆಟ್ಟದಲ್ಲಿದ್ದು, ಇಲ್ಲಿ ಸ್ನಾನ ಮಾಡಿದರೆ ಹಲವು ಚರ್ಮರೋಗಗಳು ವಾಸಿಯಾಗುತ್ತವೆ ಎಂದು ನಂಬಲಾಗಿದೆ.

ಅನಾದಿಕಾಲದಿಂದ ಇಲ್ಲಿ ಸಾಧು ಸಂತರು ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಸಮುದ್ರಮಟ್ಟದಿಂದ 2650 ಅಡಿ ಎತ್ತರದಲ್ಲಿದ್ದು ಇಲ್ಲಿನ ಗುಹೆಯಲ್ಲಿ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬೆಟ್ಟ ಹತ್ತಿದ ನಂತರ ಇಲ್ಲಿನ ನೀರಿನಲ್ಲಿ ಸ್ನಾನ ಮಾಡಿದರೆ ಆಯಾಸವೆಲ್ಲ ಕಳೆದು ಮನಸ್ಸು ಉಲ್ಲಸಿತವಾಗುತ್ತದೆ. ಬೆಂಗಳೂರಿನಿಂದ 108 ಕಿಮೀ ದೂರದಲ್ಲಿದ್ದು ಒಂದು ದಿನದ ಪ್ರವಾಸಕ್ಕೆ ಸೂಕ್ತ ತಾಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+