ಮಂಗನ ಕಾಯಿಲೆ; ಪಶ್ಚಿಮ ಘಟ್ಟದ ಪ್ರವಾಸಿಗರಿಗೆ ಮಹತ್ವದ ಮಾಹಿತಿ

ಬೆಂಗಳೂರು, ಫೆಬ್ರವರಿ 11: ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಂಗನ ಕಾಯಿಲೆ ಆರಂಭವಾಗಿದೆ. ಬೇಸಿಗೆ ಆರಂಭದ ಹಂತದಲ್ಲಿಯೇ ವಿವಿಧ ಜಿಲ್ಲೆಗಳಲ್ಲಿ ಕಾಯಿಲೆ ಕಂಡುಬಂದಿದ್ದು, ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಇದರಿಂದಾಗಿ ಪ್ರವಾಸ ಹೋಗುವವರಿಗೂ ಸಹ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 25 ಪಾಸಿಟಿವ್ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಚಿಕ್ಕಮಗಳೂರು 7 ಮತ್ತು ಉತ್ತರ ಕನ್ನಡದಲ್ಲಿ 38 ಪ್ರಕರಣಗಳಿವೆ. ರಜೆ ದಿನಗಳಲ್ಲಿ ಹಲವಾರು ಜನರು ಪಶ್ಚಿಮ ಘಟ್ಟ ಪ್ರದೇಶಕ್ಕೆ ಚಾರಣ ಹೋಗುತ್ತಾರೆ.

monkey-fever

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ (Kyasanur Forest Disease) ಕುರಿತು ಸಭೆಯನ್ನು ನಡೆಸಿದ್ದಾರೆ. "ಮಂಗನ ಕಾಯಿಲೆ ಬಾಧಿತ ಪ್ರದೇಶದ ಜನರು ಜ್ವರದಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೇ, ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು. ಮಂಗನ ಕಾಯಿಲೆ ಬಗ್ಗೆ ಗಾಬರಿಯಾಗುವುದು ಬೇಡ" ಎಂದು ಜನರಿಗೆ ಕರೆ ನೀಡಿದ್ದಾರೆ.

ಚಾರಣ ಹೋಗುವವರಿಗೆ ಎಚ್ಚರಿಕೆ; ಮಂಗನ ಕಾಯಿಲೆ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಆದ್ದರಿಂದ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಚಾರಣಕ್ಕೆ ಬರುವವರಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಾಡಿನಲ್ಲಿ ಚಾರಣ ಮಾಡುವವರು ಸಂಪೂರ್ಣ ದೇಹ ಮುಚ್ಚುವ ಬಟ್ಟೆ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.

ಕಾಡಿನಲ್ಲಿ ಉಣ್ಣೆಗಳು ಕಚ್ಚಿದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಚಾರಣದ ಬಳಿಕ ಆರೋಗ್ಯ ಸಮಸ್ಯೆ ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ. ಚಾರಣದ ಸಂದರ್ಭದಲ್ಲಿ ಯಾವುದೇ ಪ್ರಾಣಿ ಮೃತಪಟ್ಟಿರುವುದು ನೋಡಿದರೆ ಬರಿಗೈಯಲ್ಲಿ ಮುಟ್ಟಬೇಡಿ ಎಂದು ಸಲಹೆ ನೀಡಲಾಗಿದೆ.

ಏನು ಮಾಡಬಾರದು?

* ಕಾಡಿಗೆ ಭೇಟಿ ನೀಡುವಾಗ, ಚಾರಣಕ್ಕೆ ಹೋಗುವಾಗ ಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸಿ
* ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಡಿಇಪಿಎ ತೈಲವನ್ನು ಹಚ್ಚಿಕೊಳ್ಳಬೇಕು
* ಕಾಡಿನಿಂದ ಬಂದ ಬಳಿಕ ಬಿಸಿ ನೀರಿನಲ್ಲಿ ಬಟ್ಟೆಗಳನ್ನು ನೆನೆಸಿ, ತೊಳೆಯಿರಿ
* ಸೋಂಕು ನಿವಾರಕವನ್ನು ಮನೆ, ದನದ ಕೊಟ್ಟಿಗೆ ಸುತ್ತ ಸಿಂಪಡಿಸಿ
* ಕಾಡಿನಲ್ಲಿ ಮಂಗ ಸತ್ತಿರುವುದು ತಿಳಿದರೆ ತಕ್ಷಣ ಸ್ಥಳೀಯ ಆಡಳಿತಕ್ಕೆ ಮಾಹಿತಿ ಕೊಡಿ

ಏನು ಮಾಡಬಾರದು?

* ಕಾಡಿನಲ್ಲಿ ಬಿದ್ದಿರುವ ಮರ, ಎಲೆಗಳ ಮೇಲೆ ಕೂರಬೇಡಿ, ಮಲಗಬೇಡಿ
* ಯಾವುದೇ ಪ್ರಾಣಿಯ ಮಲ, ಮೂತ್ರವನ್ನು ಬರಿಗೈನಲ್ಲಿ ಮುಟ್ಟಬೇಡಿ
* ಮಂಗಗಳು ಸತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ
* ಚಾರಣದ ಸಂದರ್ಭದಲ್ಲಿ ಉಣ್ಣೆಗಳು ಕಚ್ಚಿದರೆ ನಿರ್ಲಕ್ಷ್ಯ ಮಾಡಬೇಡಿ

ಮಂಗನ ಕಾಯಿಲೆ ಗುಣಪಡಿಸಬಹುದು. ಇದು ವೈರಾಣು ಸೋಂಕಿನ ನಿಂಫ್ ಹಂತದಲ್ಲಿರುವ ಉಣ್ಣೆಗಳು ಕಚ್ಚುವುದರಿಂದ ಹರಡುತ್ತದೆ. ಮಂಗನ ಅಸ್ವಾಭಾವಿಕ ಸಾವು ಮಂಗನ ಕಾಯಿಲೆಯ ಕುರಿತಾದ ಎಚ್ಚರಿಕೆಯ ಗಂಟೆಯಾಗಿದೆ.

ಜ್ವರ, ತಲೆನೋವು ಇತರೆ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಹೋಗಬೇಕು. ಇದು ಮೊದಲನೇ ಹಂತ. ಈ ಹಂತದಲ್ಲಿ ಸೋಂಕನ್ನು ಗುಣಪಡಿಸಬಹುದು. ಎರಡನೇ ಹಂತದಲ್ಲಿ ಫಿಟ್ಸ್, ನರಸಂಬಂಧಿ ಸಮಸ್ಯೆ, ರಕ್ತಸ್ರಾವ ಉಂಟಾಗುತ್ತದೆ. 2022ರ ವರೆಗೆ ಮಂಗನ ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಇತ್ತು. ಇದೀಗ ಹೊಸ ಲಸಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+