ಬೆಂಗಳೂರು: ಮೇ 23ರಂದು ಈ ಮೆಮು ರೈಲುಗಳು ರದ್ದು

ಬೆಂಗಳೂರು, ಮೇ 22: ಬೆಂಗಳೂರು ನಗರದಲ್ಲಿ ಮೆಮು ರೈಲುಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಪ್ರಮುಖ ಮಾಹಿತಿಯೊಂದಿದೆ. ಬೈಯ್ಯಪ್ಪನಹಳ್ಳಿ ಕ್ಯಾಬಿನ್‌ನಲ್ಲಿ ಕೇಬಲ್ ಕಾಮಗಾರಿ ಇರುವ ಕಾರಣ ಹಲವು ಮೆಮು ರೈಲುಗಳ ಸಂಚಾರ ರದ್ದು, ಭಾಗಶಃ ರದ್ದಾಗಿದೆ.

ಮೇ 23 ಹಲವು ಮೆಮು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ರೈಲುಗಳ ಪಟ್ಟಿ ಇಲ್ಲಿದೆ.

MEMU Special Trains From Bengaluru Cancelled On May 23 List

ರೈಲು ನಂಬರ್ 01766 ವೈಟ್‌ಫೀಲ್ಡ್‌-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಸಂಪೂರ್ಣ ರದ್ದುಗೊಳಿಸಲಾಗಿದೆ. ಮೇ 23ರಂದು ಮಾತ್ರ ಈ ರೈಲು ಸಂಚಾರ ನಡೆಸುವುದಿಲ್ಲ.

ಭಾಗಶಃ ರದ್ದುಗೊಂಡ ರೈಲುಗಳು

* ರೈಲು ನಂಬರ್ 06389 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲು ಕೆಎಸ್ಆರ್ ಬೆಂಗಳೂರು-ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದು.

* ರೈಲು ನಂಬರ್ 06535 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಮೆಮು ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದಾಗಿದೆ.

* ರೈಲು ನಂಬರ್ 06536 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು ಬೆಂಗಳೂರು ಕಂಟೋನ್ಮೆಂಟ್-ಯಲಹಂಕ ನಡುವೆ ಭಾಗಶಃ ರದ್ದು.

* ರೈಲು ನಂಬರ್ 07773 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು ಕೆ. ಆರ್. ಪುರ-ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದು.

* ರೈಲು ನಂಬರ್ 01774 ಕೆಎಸ್‌ಆರ್‌ ಬೆಂಗಳೂರು-ಮಾರಿಕುಪ್ಪಂ ವಿಶೇಷ ಮೆಮು ರೈಲು ಕೆಎಸ್ಆರ್‌ ಬೆಂಗಳೂರು-ಕೆಆರ್ ಪುರ ನಡುವೆ ಭಾಗಶಃ ರದ್ದು.

* ರೈಲು ನಂಬರ್ 01776 ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ವಿಶೇಷ ಮೆಮು ರೈಲು ಕೆಆರ್ ಪುರ-ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದು.

* ರೈಲು ನಂಬರ್ 01775 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ವಿಶೇಷ ಮೆಮು ರೈಲು ಕೆಎಸ್ಆರ್ ಬೆಂಗಳೂರು-ಕೆಆರ್ ಪುರಂ ನಡುವೆ ಭಾಗಶಃ ರದ್ದು.

* ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ನಡುವಿನ ವಿಶೇಷ ಮೆಮು ರೈಲಾದ ರೈಲು ನಂಬರ್ 01793 ಬಂಗಾರಪೇಟೆ-ಕೆಆರ್ ಪುರಂ ನಡುವೆ ಭಾಗಶಃ ರದ್ದು.

* ರೈಲು ನಂಬರ್ 01794 ಕೆಆರ್ ಪುರಂ-ಮಾರಿಕುಪ್ಪಂ ವಿಶೇಷ ಮೆಮು ರೈಲು ಕೆಆರ್ ಪುರಂ-ಬಂಗಾರಪೇಟೆ ನಡುವೆ ಭಾಗಶಃ ರದ್ದಾಗಿದೆ.

* ಕೆಎಸ್ಆರ್‌ ಬೆಂಗಳೂರು-ಕುಪ್ಪಂ ನಡುವಿನ ರೈಲು ನಂಬರ್ 06529 ವಿಶೇಷ ಮೆಮು ರೈಲು ಕೆಎಸ್ಆರ್‌ ಬೆಂಗಳೂರು-ಕೆಆರ್ ಪುರಂ ನಡುವೆ ಭಾಗಶಃ ರದ್ದು.

ಯಲಹಂಕ-ತಿರುನಲ್ವೇಲಿ ವಿಶೇಷ ರೈಲು: ನೈಋತ್ಯ ರೈಲ್ವೆ ಬೆಂಗಳೂರಿನ ಯಲಹಂಕ ಮತ್ತು ತಿರುನಲ್ವೇಲಿ ನಡುವೆ ವಾರದ ವಿಶೇಷ ಬೇಸಿಗೆ ರೈಲು ಓಡಿಸುತ್ತಿದೆ. ರೈಲು ಒಟ್ಟು 4 ಟ್ರಿಪ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ರೈಲು ನಂಬರ್ 06045 ತಿರುನಲ್ವೇಲಿ-ಯಲಹಂಕ ವಾರದ ವಿಶೇಷ ರೈಲು ಪ್ರತಿ ಬುಧವಾರ ತಿರುನಲ್ವೇಲಿಯಿಂದ 15.15ಕ್ಕೆ ಮೇ 22, 29, ಜೂನ್ 5 ಮತ್ತು 12ರಂದು ಹೊರಡಲಿದೆ. ಯಲಹಂಕಕ್ಕೆ ಮರುದಿನ 03.15ಕ್ಕೆ ಆಗಮಿಸಲಿದೆ.

ರೈಲು ನಂಬರ್ 06046 ಯಲಹಂಕ-ತಿರುನಲ್ವೇಲಿ ವಾರದ ವಿಶೇಷ ರೈಲು ಪ್ರತಿ ಗುರುವಾರ ಯಲಹಂಕದಿಂದ 5 ಗಂಟೆಗೆ ಮೇ 23, 30, ಜೂನ್ 6 ಮತ್ತು 13ರಂದು ಹೊರಟು, ಅದೇ ದಿನ 18:45ಕ್ಕೆ ತಿರುನಲ್ವೇಲಿ ತಲುಪಲಿದೆ.

ರೈಲು ಮಾರ್ಗದಲ್ಲಿ ಕೋವಿಲಪಟ್ಟಿ, ಸಾತೂರು, ಮಧುರೈ, ದಿಂಡಿಗಲ್, ಕರೂರು, ನಮಕ್ಕಲ್, ಸೇಲಂ, ತಿರುಪುತ್ತೂರು, ಬಂಗಾರಪೇಟೆ, ಕೆಆರ್ ಪುರಂನಲ್ಲಿ ಎರಡೂ ದಿಕ್ಕಿನಲ್ಲಿ ನಿಲುಗಡೆ ಹೊಂದಿದೆ. ರೈಲು 18 ಕೋಚ್‌ಗಳನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+