ಮಂಗಳೂರು-ಮಡಗಾವ್ ನಡುವಿನ ವಿಶೇಷ ರೈಲು ವೇಳಾಪಟ್ಟಿ ಬದಲಾವಣೆ, ಸಮಯಗಳ ವಿವರ ತಿಳಿಯಿರಿ
ಉಡುಪಿ, ಜನವರಿ, 14: ಕೆಲವು ಸಮಸ್ಯೆಗಳಿಂದ ಅಥವಾ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಹಾಗೆಯೇ ಇದೀಗ ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಹಿನ್ನೆಲೆ ಮಂಗಳೂರು ಸೆಂಟ್ರಲ್-ಮಡಗಾವ್ ಜಂಕ್ಷನ್ ಡೈಲಿ ವಿಶೇಷ ರೈಲು ಸಂಚಾರ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಹಾಗಾದರೆ ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.
ಮಂಗಳೂರು-ಮಡಗಾವ್ ವಿಶೇಷ ರೈಲಿನ ವೇಳಾಪಟ್ಟಿ
ಹೊಸ ವೇಳಾಪಟ್ಟಿಯಂತೆ ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ (06601) ರೈಲು ಮಡಗಾಂವ್ ಜಂಕ್ಷನ್‌ನಿಂದ ಮಧ್ಯಾಹ್ನ 1:50ರ ಬದಲಾಗಿ 2.10ಕ್ಕೆ ಹೊರಡಲಿದೆ. ಇದೇ ರೈಲು ರಾತ್ರಿ 9:05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಮಂಗಳೂರು ಸೆಂಟ್ರಲ್ ಮಡಗಾಂವ್ ಜಂಕ್ಷನ್ ನಿತ್ಯ ಸಂಚರಿಸುವ ವಿಶೇಷ ರೈಲು (06602) ಬೆಳಗ್ಗೆ 5:30ಕ್ಕೆ ಮಂಗಳೂರು ನಿಲ್ದಾಣದಿಂದ ಹೊರಟು, ಮಧ್ಯಾಹ್ನ 1:35ಕ್ಕೆ ಮಡಗಾಂವ್ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಮಾನ ಟಿಕೆಟ್ ದರ ಹೆಚ್ಚಳ: ಅಯೋಧ್ಯೆಯ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ಉದ್ಘಾಟನೆ ಮಾಡಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಇನ್ನು ಬೆಂಗಳೂರಿನಿಂದ ಆಯೋಧ್ಯೆಗೆ ವಿಶೇಷ ವಿಮಾನಗಳ ವ್ಯವಸ್ಥೆಯಿದ್ದು, ಟಿಕೆಟ್ ದರಗಳನ್ನು ಹೆಚ್ಚಳ ಮಾಡಲಾಗಿದೆ. ಹಾಗಾದರೆ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಜನವರಿ 22ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಇದೀಗ ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟವರಿಗೆ ಶಾಕ್‌ವೊಂದು ಎದುರಾಗಿದೆ. ಬೆಂಗಳೂರು-ಅಯೋಧ್ಯೆ ವಿಮಾನ ದರ 400% ರಷ್ಟು ಹೆಚ್ಚಳ ಆಗಿದೆ. ಜನವರಿ 20ರಂದು ಅಯೋಧ್ಯೆಗೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡುವುದಕ್ಕೆ ಹೊರಟವರು ಇದನ್ನು ಗಮನಿಸಲೇಬೇಕಿದೆ.
ಅತಿ ಕಡಿಮೆ ಟಿಕೆಟ್ ದರವೇ 24 ಸಾವಿರ ರೂಪಾಯಿ ಇದೆ. ವಿಮಾನದಲ್ಲಿ ಅಯೋಧ್ಯೆ ತಲುಪುವುದಕ್ಕೆ 24 ಸಾವಿರ ರೂಪಾಯಿ ಹಣ ನೀಡಬೇಕು. ಬೇರೆ ದಿನಕ್ಕೆ ಹೋಲಿಕೆ ಮಾಡಿದರೆ, ಈಗಿನ ಟಿಕೆಟ್ ದರದಲ್ಲಿ 395% ಏರಿಕೆ ಕಂಡು ಬಂದಿದೆ.
ಜನವರಿ 20ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿರುವ ವಿಮಾನ ಅದೇ ದಿನ ರಾತ್ರಿ 11 ಗಂಟೆಗೆ ಅಯೋಧ್ಯೆಗೆ ತಲುಪಲಿದೆ. ನಡುವೆ 5 ಗಂಟೆಗಳ ಕಾಲ ಈ ವಿಮಾನ ಅಹಮದಾಬಾದ್‌ನಲ್ಲಿ ಇರಲಿದ್ದು, ಈ ವಿಮಾನದ ಟಿಕೆಟ್ ದರ 29,700 ರೂಪಾಯಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications