Rajahamsa Bus: ಬಳ್ಳಾರಿ-ಹುಬ್ಬಳ್ಳಿ ಮಾರ್ಗದಲ್ಲಿ ರಾಜಹಂಸ ಸಾರಿಗೆ ಪ್ರಾರಂಭ, ದರ ತಿಳಿಯಿರಿ
ಬಳ್ಳಾರಿ, ಜೂನ್. 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ಪ್ರಯಾಣಿಕರಿಗೆ ಉತ್ತಮ ಸೇವೆ ಒಗಿಸಲು ಮತ್ತಷ್ಟು ಯೋಜನೆಗಳನ್ನು ನೀಡುತ್ತಿದೆ. ಹಲವು ಮಾರ್ಗಗಳಲ್ಲಿ ತನ್ನ ಬಸ್‌ಗಳ ವ್ಯವಸ್ಥೆಯನ್ನು ವ್ಯಾಪಿಸುತ್ತಿದೆ. ಸದ್ಯ ಬಳ್ಳಾರಿಯಿಂದ ಹುಬ್ಬಳ್ಳಿಗೆ ವಿಶೆಷವಾಗಿ ಎರಡು ರಾಜಹಂಸ ಬಸ್‌ಗಳನ್ನು ಬಿಡುಗಡೆ ಮಾಡುತ್ತಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಬಳ್ಳಾರಿಯಿಂದ ಹುಬ್ಬಳ್ಳಿಗೆ ಜೂನ್ 27 ರಿಂದ 2 ರಾಜಹಂಸ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತಿದೆ . ಈ ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಮಾಹಿತಿ ನೀಡಿದ್ದಾರೆ.

ಹೊಸ ಎರಡು ರಾಜಹಂಸ ಬಸ್‌ಗಳು ಬಳ್ಳಾರಿ ಹುಬ್ಬಳ್ಳಿಗೆ ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗದಲ್ಲಿ ಚಲಿಸಲಿದ್ದು, ಕೇವಲ ಸೀಮಿತ ನಿಲುಗಡೆಯನ್ನು ಮಾತ್ರ ಕಲ್ಪಿಸಲಾಗಿದೆ. ಇದು ಬಳ್ಳಾರಿ ಮತ್ತು ಹುಬ್ಬಳ್ಳಿ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಉಪಯೋಗ ನೀಡಲಿದೆ.
ರಾಜಹಂಸ ಬಸ್ ಸಂಚರಿಸುವ ವೇಳೆ
ಹೊಸ ರಾಜಹಂಸ ಬಸ್‌ಗಳು ಬಳ್ಳಾರಿಯಿಂದ ಬೆಳಗ್ಗೆ 5.30 ಮತ್ತು 07 ಗಂಟೆಗೆ ಹೊರಟು, ಹುಬ್ಬಳ್ಳಿಗೆ ಬೆಳಗ್ಗೆ 10.30 ಮತ್ತು ಮಧ್ಯಾಹ್ನ 12 ಗಂಟೆಗೆ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 11 ಗಂಟೆ ಮತ್ತು 01 ಗಂಟೆಗೆ ಹೊರಟು, ಬಳ್ಳಾರಿಗೆ ಸಂಜೆ 04 ಗಂಟೆ ಮತ್ತು 06 ಗಂಟೆಗೆ ತಲುಪಲಿದೆ.
ರಾಜಹಂಸ ಟಿಕೆಟ್ ದರ 430 ರೂಪಾಯಿ ಇರಲಿದೆ. ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ಗೆ ಭೇಟಿ ನೀಡಬಹುದು. ರಾಜಹಂಸ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications