KSRTC tour package; ಬೆಂಗಳೂರು-ಜೋಗ ಪ್ರಯಾಣ ದರ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 08; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪ್ರವಾಸ ಹೋಗುವ ಜನರಿಗಾಗಿಯೇ ಬೆಂಗಳೂರು ನಗರದಿಂದ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಪ್ರವಾಸ ಹೋಗುವ ಯೋಜನೆಯಲ್ಲಿರುವವರು ಪ್ಯಾಕೇಜ್ ಸಮಯ ಮತ್ತು ದರದ ಬಗ್ಗೆ ಮಾಹಿತಿ ತಿಳಿಯಿರಿ.
ಕೆಎಸ್ಆರ್‌ಟಿಸಿ ಬೆಂಗಳೂರು-ಜೋಗ ಜಲಪಾತ ವಯಾ ಶಿವಮೊಗ್ಗ, ಸಾಗರ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಈ ಪ್ಯಾಕೇಜ್‌ಗೆ ಬಳಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ವಾರಾಂತ್ಯದಲ್ಲಿ (ಶುಕ್ರವಾರ & ಶನಿವಾರ) ಪ್ಯಾಕೇಜ್ ಟೂರ್ ಲಭ್ಯವಿರುತ್ತದೆ. 11/8/2023ರಿಂದ ಈ ಪ್ಯಾಕೇಜ್ ಟೂರ್ ಲಭ್ಯವಿರುತ್ತದೆ ಎಂದು ಮಾಹಿತಿ ನೀಡಲಾಗಿದೆ. ಪ್ಯಾಕೇಜ್ ವೇಳಾಪಟ್ಟಿ, ದರದ ಮಾಹಿತಿ ಕೆಳಗಿನಂತಿದೆ.
ವೇಳಾಪಟ್ಟಿ, ದರ; ಬೆಂಗಳೂರು-ಜೋಗ ಜಲಪಾತ ವಯಾ ಶಿವಮೊಗ್ಗ, ಸಾಗರ ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ 2,500 ರೂ. ಮತ್ತು ಮಕ್ಕಳಿಗೆ (6 ರಿಂದ 12 ವರ್ಷ) 2,300 ರೂ. ದರವನ್ನು ನಿಗದಿ ಮಾಡಲಾಗಿದೆ.
ಬೆಂಗಳೂರು-ಸಾಗರ ಟೂರ್ ಪ್ಯಾಕೇಜ್ ಬಸ್ ಬೆಂಗಳೂರಿನಿಂದ ರಾತ್ರಿ 21.30ಕ್ಕೆ ಹೊರಡಲಿದೆ, 5 ಗಂಟೆಗೆ ಸಾಗರ ತಲುಪಲಿದೆ. 5 ರಿಂದ 7 ಗಂಟೆಯ ತನಕ ಹೋಟೆಲ್‌ನಲ್ಲಿ ವಿಶ್ರಾಂತಿ ಇರಲಿದೆ.
7 ರಿಂದ 7.15 ಉಪಹಾರ. 7.15 ರಿಂದ 7.30 ಸಾಗರದಿಂದ ವರದಹಳ್ಳಿಗೆ ಪ್ರಯಾಣ. ವರದಹಳ್ಳಿ-ವರದಾಮೂಲ 8.30 ರಿಂದ 9 ಗಂಟೆ. ವರದಾಮೂಲ-ಇಕ್ಕೇರಿ 9.15 ರಿಂದ 9.30.
Package tours from Bengaluru to Jog Falls and Bengaluru to Somanathapura. pic.twitter.com/QxzlKWJGUJ
— KSRTC (@KSRTC_Journeys) August 7, 2023
ಇಕ್ಕೇರಿ-ಕೆಳದಿ 10.30 ರಿಂದ 11. ಕೆಳದಿ-ಸಾಗರ 12 ರಿಂದ 12.30. ಮಧ್ಯಾಹ್ನ 12.45 ರಿಂದ 13.15 ಊಟ. ಸಾಗರ-ಜೋಗ ಜಲಪಾತ 1.30 ರಿಂದ 2.15. ಜೋಗ ಜಲಪಾತ-ಸಾಗರ 6.15 ರಿಂದ 7 ಗಂಟೆ. 7 ರಿಂದ 8 ಶಾಪಿಂಗ್ ಟೈಂ. 8.30 ರಿಂದ 8.45 ರಾತ್ರಿ ಭೋಜನ. ಸಾಗರದಿಂದ ರಾತ್ರಿ 10 ಗಂಟೆಗೆ ಹೊರಟು ಬೆಳಗ್ಗೆ 5ಗಂಟೆಗೆ ಬೆಂಗಳೂರಿಗೆ ವಾಪಸ್.
ಈ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಗಾಗಿ ಜನರು 7760990287 ಮತ್ತು 7760990988 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ದಾವಣಗೆರೆ, ಹುಬ್ಬಳ್ಳಿಯಿಂದಲೂ ಬಸ್; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗವು ಸಹ ದಾವಣಗೆರೆ ಹಾಗೂ ಹರಿಹರದಿಂದ ಶಿವಮೊಗ್ಗದ ಜೋಗ ಮತ್ತು ಶಿರಸಿಗೆ ಪ್ರತಿ ಭಾನುವಾರ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಜುಲೈ 16 ರಿಂದಲೇ ಈ ವಿಶೇಷ ಪ್ಯಾಕೇಜ್ ಟೂರ್ ಸಾರಿಗೆ ಬಸ್‌ಗಳು ಸಂಚಾರ ನಡೆಸುತ್ತಿವೆ.
ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಉತ್ತರ ಕರ್ನಾಟಕ ಭಾಗದ ಪ್ರವಾಸಿಗರ ಅನುಕೂಲಕ್ಕಾಗಿ ಹುಬ್ಬಳ್ಳಿ-ಜೋಗ ಜಲಪಾತ ನಡುವೆ ವಿಶೇಷ ಬಸ್ ಓಡಿಸುತ್ತಿದೆ. ಪ್ರತಿ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ಜೋಗಕ್ಕೆ ರಾಜಹಂಸ ಹಾಗೂ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಮೂಲಕ ಟೂರ್ ಸೌಲಭ್ಯ ಕಲ್ಪಿಸಲಾಗಿದೆ.











Click it and Unblock the Notifications