Nilakandi Waterfalls: ನೀಲಕಂಡಿ ಜಲಪಾತ ಸೃಷ್ಟಿಯಾಗಿದ್ದೇಗೆ? ಹಾಗೂ ಈ ಅದ್ಭುತ ತಾಣಕ್ಕೆ ತಲುಪುವ ಮಾರ್ಗಗಳ ವಿವರ ತಿಳಿಯಿರಿ
ಮಡಿಕೇರಿ, ಜುಲೈ, 31: ಕೊಡಗಿನಲ್ಲಿರುವ ಕೆಲವೇ ಕೆಲವು ಜಲಪಾತಗಳನ್ನು ಮಾತ್ರ ಪ್ರವಾಸಿಗರು ಸುಲಭವಾಗಿ ತಲುಪಬಹುದು. ಆದರೆ ಉಳಿದಂತೆ ಹೆಚ್ಚಿನ ಜಲಪಾತಗಳನ್ನು ನೋಡಬೇಕೆಂದರೆ ಶ್ರಮಪಡಲೇಬೇಕಾಗುತ್ತದೆ. ಅವುಗಳ ಬಳಿಗೆ ಹೋಗುವುದು ಕೂಡ ಸವಾಲಿನ ಕೆಲಸವಾಗಿದೆ. ಇಂತಹ ಜಲಪಾತಗಳ ಸಾಲಿಗೆ ಪಶ್ಚಿಮಘಟ್ಟದ ತಡಿಯಂಡಮೋಳ್ ಬೆಟ್ಟಶ್ರೇಣಿಯಲ್ಲಿರುವ ನೀಲಕಂಡಿ ಜಲಪಾತವೂ ಸೇರುತ್ತದೆ.
ಈ ಜಲಪಾತವನ್ನು ವೀಕ್ಷಿಸಬೇಕಾದರೆ ಒಂದು ದಿನ ಮೀಸಲಿಡಬೇಕು. ಕಲ್ಲುಮುಳ್ಳಿನ ಏರು ಹಾದಿಯಲ್ಲಿ ಬೆಟ್ಟವನ್ನೇರಬೇಕು, ಜಿಗಣೆಗಳೊಂದಿಗೆ ಹೋರಾಡಬೇಕು, ಇದು ಅಷ್ಟು ಸುಲಭದ ಕೆಲಸವಲ್ಲ. ಹಾಗೆಂದು ಕಷ್ಟವೂ ಅಲ್ಲ. ಎಲ್ಲದಕ್ಕೂ ತಯಾರಿ ಮಾಡಿಕೊಂಡು ಹೊರಟರೆ ಖುಷಿ ಮತ್ತು ಒಂದೊಳ್ಳೆಯ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಏರು ಹಾದಿಯಲ್ಲಿ ಉಸಿರು ಬಿಗಿಹಿಡಿದು ಹತ್ತುವಾಗ, ಬೆಟ್ಟಗುಡ್ಡಗಳ ಕಡಿದಾದ ಕಾಲು ದಾರಿಯಲ್ಲಿ ನಡೆಯುವಾಗ ತಡಿಯಂಡಮೋಳ್ ಬೆಟ್ಟಶ್ರೇಣಿಯ ವಿಹಂಗಮ ನೋಟ ಮೈಮನವನ್ನು ಪುಳಕಗೊಳಿಸುತ್ತದೆ. ಅಷ್ಟೇ ಅಲ್ಲದೆ ಮುಂದೆ ಸಾಗುವ, ಜಲಪಾತವನ್ನು ವೀಕ್ಷಿಸುವುದು ಹುಮ್ಮಸ್ಸು ತುಂಬುತ್ತದೆ.

ಸದಾ ಕೆಲಸಗಳ ಒತ್ತಡದಲ್ಲಿರುವವರು, ಜನಜಂಗುಳಿ, ವಾಹನಗಳ ಆರ್ಭಟ, ಸದ್ದುಗದ್ದಲಗಳಲ್ಲಿ ದಿನ ಕಳೆಯುವವರು ಇಲ್ಲಿಗೆ ಬಂದರೆ ನಿಸರ್ಗದ ಹೊಸ ಪ್ರಪಂಚವೊಂದು ತೆರೆದುಕೊಂಡಂತೆ ಭಾಸವಾಗುತ್ತದೆ. ಪ್ರಕೃತಿಯ ಪ್ರಶಾಂತತೆ, ನೈಸರ್ಗಿಕ ನೋಟಗಳು ಹೊಸಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹೀಗೆ ಹೋಗುವಾಗ ಪ್ರತಿಹೆಜ್ಜೆಗೂ ಪ್ರಕೃತಿ ಮಾತೆ ಮನವೊಲ್ಲಾಸ ನೀಡುತ್ತದೆ. ಸುತ್ತಲ ಹಸಿರು ಗಿರಿ ಕಂದರ, ಬಂಡೆಕಲ್ಲು, ಕಂದಕಗಳ ನಡುವೆ ಚಿಮ್ಮುವ ಜಲ, ಚಿಲಿಪಿಲಿಗುಟ್ಟುವ ಹಕ್ಕಿಗಳು ಹೀಗೆ ಎಲ್ಲವೂ ಖುಷಿಕೊಡುತ್ತವೆ.
ನೀಲಕಂಡಿ ಜಲಪಾತ ಹೆಸರು ಬಂದಿದ್ದೇಗೆ?
ನೀಲಕಂಡಿ ಜಲಪಾತದ ಬಗ್ಗೆ ಹೇಳುವುದಾದರೆ ತಡಿಯಂಡಮೋಳ್ ಬೆಟ್ಟ ಶ್ರೇಣಿಯಲ್ಲಿ ಹುಟ್ಟಿ ಹರಿಯುವ ಪಾತಿ ನದಿಯಿಂದ ಜಲಪಾತ ಸೃಷ್ಟಿಯಾಗಿದೆ. ಆದರೆ ಈ ನದಿ ಕೇರಳದ ಕಡೆಗೆ ಹರಿದು ಹೋಗುತ್ತದೆ. ಬೆಟ್ಟದ ಕಡಿದಾದ ರಸ್ತೆಯಲ್ಲಿ ಸಾಗುತ್ತಿದ್ದಂತೆಯೇ ದೂರದ ಬೆಟ್ಟದಲ್ಲಿ ಕರಿಹೆಬ್ಬಂಡೆಗಳ ಮೇಲೆ ಮಿಂಚು ಹರಿದಂತೆ ಜಲಪಾತ ಕಾಣಿಸುತ್ತದೆ. ಈ ಜಲಪಾತದ ಹತ್ತಿರ ಹೋದಂತೆಲ್ಲ ಭೀಕರತೆ ಗೊತ್ತಾಗುತ್ತದೆಯಾದರೂ, ಕಾನನಗಳ ನಡುವೆ ಇರುವ ಕಾರಣ ಸಂಪೂರ್ಣ ಚೆಲುವು ಕಾಣಿಸುವುದಿಲ್ಲ.
ಹೀಗಾಗಿ ದೂರದಿಂದಲೇ ಜಲಪಾತವನ್ನು ವೀಕ್ಷಿಸುವುದು ಒಳಿತು. ನೀಲಕಂಡಿ ಜಲಪಾತವು ಸುಮಾರು 150 ಅಡಿಗಿಂತಲೂ ಹೆಚ್ಚು ಎತ್ತರದಿಂದ ವಿವಿಧ ಹಂತದಲ್ಲಿ ಧುಮುಕುತ್ತಾ ಕಂದಕವನ್ನು ಸೇರಿ ಹರಿದು ಹೋಗುತ್ತದೆ. ಇನ್ನು ನೀಲಕಂಡಿ ಜಲಪಾತ ಎಂಬ ಹೆಸರು ಹೇಗೆ ಬಂತು ಎಂಬುದನ್ನು ನೋಡುತ್ತಾ ಹೋದರೆ ಬೆಟ್ಟದ ಹೆಸರನ್ನೇ ಜಲಪಾತಕ್ಕೆ ಸ್ಥಳೀಯರು ಇಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ನೀಲಕಂಡಿ ಜಲಪಾತ ಇರುವ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುರುಂಜಿ ಗಿಡಗಳು ಬೆಳೆದಿವೆ. ಈ ಗಿಡಗಳು ಹತ್ತೋ, ಹನ್ನೆರಡೋ ವರ್ಷಗಳಿಗೊಮ್ಮೆ ಹೂ ಬಿಡುತ್ತವೆ. ಹೀಗೆ ಹೂ ಬಿಟ್ಟಾಗ ಇಡೀ ಬೆಟ್ಟ ನೀಲಿಯಾಗಿ ಗೋಚರಿಸುತ್ತದೆ.
ನೀಜಲಪಾತದ ಬಳಿಗೆ ಹೋಗುವುದು ಹೇಗೆ?
ಕುರುಂಜಿ ಹೂ ಬಿಟ್ಟು ಬೆಟ್ಟ ನೀಲಿಯಾಗಿ ಕಾಣುವುದರಿಂದ ಅಲ್ಲದೆ, ಬೆಟ್ಟದ ನಡುವೆ ಕಿಂಡಿಯಂತಹ ಕಂದಕ ಇರುವುದರಿಂದ ನೀಲಕಂಡಿ ಎಂಬ ಹೆಸರು ಬಂದಿರಬಹುದು. ಇನ್ನು ಈ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಾಗ ಬೆಟ್ಟದ ಮೇಲಿಂದ ಹರಿದುಬರುವ ನೀರು ಹೆಬ್ಬಂಡೆಯ ಮೇಲೆ ಧುಮುಕುವಾಗ ಜಲಪಾತ ಸೃಷ್ಟಿಯಾಗುತ್ತದೆ ಅದುವೇ ನೀಲಕಂಡಿ ಜಲಪಾತವಾಗಿದೆ.
ಎತ್ತರ ಪ್ರದೇಶದಿಂದ ಭೋರ್ಗರೆದು ಧುಮ್ಮಿಕ್ಕುವ ಜಲಧಾರೆ ತಳ ಸೇರುವ ವೇಳೆಗೆ ಚಿಕ್ಕಾತಿ ಚಿಕ್ಕ ಜಲಪಾತವನ್ನು ಸೃಷ್ಠಿಮಾಡಿ ಬಳಿಕ ಕಂದಕದೊಳಗೆ ಹೀಗೆ ಹರಿದು ಹೋಗುವ ನದಿಯ ಸದ್ದು ಪ್ರಶಾಂತತೆಯನ್ನು ಸೀಳಿಕೊಂಡು ನಮ್ಮ ಕಿವಿಗೆ ಅಪ್ಪಳಿಸುತ್ತದೆ. ನೀಲಕಂಡಿ ಜಲಪಾತಕ್ಕೆ ತೆರಳುವುದಾದರೆ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ನಾಪೋಕ್ಲಿಗೆ ಹೋಗಬೇಕಾಗುತ್ತದೆ. ನಂತರ ಅಲ್ಲಿಂದ ಕಕ್ಕಬ್ಬೆಯ ಕಬ್ಬಿನಕಾಡಿಗೆ ಹೋಗಿ, ಬಲಕ್ಕೆ ಏರು ರಸ್ತೆಯಲ್ಲಿ ಸುಮಾರು 3 ಕಿ.ಮೀ. ಸಾಗಬೇಕು.
ಹೀಗೆ ಏರುರಸ್ತೆಯಲ್ಲಿ ಸಾಗುವುದು ವಿಶಿಷ್ಟ ಅನುಭವ ಆದಂತಾಗುತ್ತದೆ. ಫೋರ್‌ವೀಲ್ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸಾಗುವುದು ಸ್ವಲ್ಪ ಕಷ್ಟವೇ. ಆದರೂ ಕಷ್ಟಪಟ್ಟು ಸಾಗಿದರೆ ಹನಿವ್ಯಾಲಿ ಎಂಬ ಎಸ್ಟೇಟ್ ಸಿಗುತ್ತದೆ. ಅಲ್ಲಿಂದ ಮತ್ತೆ ಏರು ಹಾದಿಯಲ್ಲಿ ನಡೆಯುತ್ತಾ ಸುಮಾರು ಮೂರು ಕಿ.ಮೀ.ನಷ್ಟು ಸಾಗಿದರೆ ಸುಮಾರು ಒಂದೂವರೆ ಕಿ.ಮೀ.ದೂರದಿಂದಲೇ ನೀಲಕಂಡಿ ಜಲಧಾರೆಯ ದರ್ಶನವಾಗುತ್ತದೆ. ಅಲ್ಲಿಂದ ಮುಂದಕ್ಕೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications