KKRTC: ವಿಜಯಪುರದಿಂದ ಮಂತ್ರಾಲಯಕ್ಕೆ ಹೊಸ ನಾನ್ ಎಸಿ ಸ್ಲೀಪರ್ ಬಸ್
ವಿಜಯಪುರ, ಮಾರ್ಚ್ 22: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಜಯಪುರದಿಂದ ಮಂತ್ರಾಲಯಕ್ಕೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ನೀಡುತ್ತಿದೆ. ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್ ಆರಂಭಿಸಿದ್ದು, ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗ ನಾನ್ ಎಸಿ ಸ್ಟೀಪರ್ ಬಸ್ ಸೇವೆ ಪ್ರಾರಂಭಿಸಿದೆ. ವಿಜಯಪುರದಿಂದ ಈ ನಾನ್ ಎಸಿ ಸ್ಲೀಪರ್ ಬಸ್ ರಾತ್ರಿ 9.30 ಗಂಟೆಗೆ ಮಂತ್ರಾಲಯಯದ ಕಡೆಗೆ ಹೊರಡಲಿದೆ. ಇನ್ನು, ಮಂತ್ರಾಲಯದಿಂದ ವಿಜಯಪುರ ಕಡೆಗೆ ಹೊರಡಲಿರುವ ನಾನ್ ಎಸಿ ಸ್ಟೀಪರ್ ಬಸ್ ಕೂಡ ರಾತ್ರಿ 9.30 ಗಂಟೆಗೆ ಹೊರಡಲಿದೆ.

ಈ ಬಸ್‌ಗಳನ್ನು ಅಭಿ ಬಸ್, ರೆಡ್ ಬಸ್, ಕೆಎಸ್‌ಆರ್‌ಟಿಸಿ ಸೇರಿ ಹಲವು ಆಪ್‌ಗಳಲ್ಲಿ ಬುಕ್ ಮಾಡಬಹುದಾಗಿದೆ. ksrtc. karnataka.gov.in, www.ksrtcbooking.in ವೆಬ್‌ಸೈಟ್‌ಗಳಲ್ಲಿಯೂ ಕೂಡ ಟಿಕೆಟ್ ಬುಕ್ ಮಾಡಬಹದು. ಮುಂಗಡ ಟಿಕೇಟ್‌ಗಾಗಿ ದುರವಾಣಿ ಸಂಖ್ಯೆ 7760992270 ಯನ್ನು ಸಂಪರ್ಕಿಸಬಹುದು. ಜೊತೆಗೆ 08352-251344 ನಂಬರ್‌ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ
ಇನ್ನು, 25.03.2024 ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಸಂಸ್ಥೆ ಅನುಮತಿ ನೀಡಿದೆ. ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿ ಕರಾರಸಾ ನಿಗಮ ಬೆಂಗಳೂರು ಸುತ್ತೋಲೆ ಹೊರಡಿಸಿದ್ದು, ಅದರ ಅನ್ವಯ ಕೆಎಸ್‌ಆರ್‌ಟಿಸಿ ಕೂಡ ಉಚಿತ ಪ್ರಯಾಣ ಸೌಲಭ್ಯ ನೀಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ:25.03.2024 ರಿಂದ 06.04.2024 ರವರೆಗೆ ಪರೀಕ್ಷೆಗೆ ಹಾಜರಾಗುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ "ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರವೇಶ ಪತ್ರವನ್ನು" ತೋರಿಸಿ, ನಿಗಮದ ನಗರ, ಹೊರವಲಯ. ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.












Click it and Unblock the Notifications