Bangalore-Kabini Trip: ವನ್ಯಜೀವಿಗಳೊಂದಿಗೆ ಒಡನಾಟ ಬೇಕೇ? ಮಿಸ್ ಮಾಡದೇ ಇಲ್ಲಿಗೆ ಟ್ರಿಪ್ ಪ್ಲಾನ್ ಮಾಡಿ
ವೀಕೆಂಡ್‌ನಲ್ಲಿ ರೆಸಾರ್ಟ್, ಮಾಲ್, ಶಾಪಿಂಗ್ ಅಂತಾ ಸುತ್ತಾಡಿ ಬೇಸರವಾಗಿದೆಯಾ..? ಮರ, ಬೆಟ್ಟ, ಗುಡ್ಡ, ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡುತ್ತಾ ಸಮಯ ಕಳೆಯಬೇಕು ಎಂದುಕೊಳ್ಳುತ್ತಿದ್ದೀರಾ..? ಕೇವಲ ಬೆಟ್ಟ ಗುಡ್ಡ ಟ್ರಕ್ಕಿಂಗ್ ಅಲ್ಲದೇ ಜಂಗಲ್ ಸಫಾರಿ ಮಾಡಬೇಕೆಂದುಕೊಳ್ಳುವವರಿಗಾಗಿ ಸೂಕ್ತವಾದ ಸ್ಥಳ ಇಲ್ಲಿದೆ.
ಬೆಂಗಳೂರಿನ ಒತ್ತಡ ಜೀವನದಿಂದ ರಿಲಾಕ್ಸ್ ಮೂಡ್ ತೆರಳಲು ಕಬಿನಿ ಒಂದೊಳ್ಳೆ ವಾರಾಂತ್ಯ ತಾಣವಾಗಿದೆ. ಇದೊಂದು ಸಾಹಸಮಯ ಪ್ರವಾಸವಾಗಿರಲಿದ್ದು, ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದಾದ ಅವಕಾಶ ನಿಮಗೆ ಸಿಗುತ್ತದೆ. ಜಂಗಲ್ ಸಫಾರಿಯು ನಿಮಗೆ ರೋಮಾಂಚಕ ಅನುಭವ ನೀಡಲಿದ್ದು, ನೀವು ಪ್ರವಾಸ ಕೈಗೊಂಡಿರುವ ಬೆಸ್ಟ್ ಸ್ಥಳಗಳಲ್ಲಿ ಕಬಿನಿ ಅತ್ಯುತ್ತಮ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರು ನಗರದ ಗದ್ದಲ, ಒತ್ತಡಕ್ಕೆ ಬ್ರೇಕ್ ಹಾಕಿ ಒಮ್ಮೆ ಕಬಿನಿಯತ್ತ ಮುಖ ಮಾಡಿದರೆ ಸಾಕು ನೀವು ಸ್ವರ್ಗದಲ್ಲಿದಂತೆ ಭಾಸವಾಗುತ್ತದೆ. ಕಣ್ಣು ಹಾಯಿಸಿದಷ್ಟೂ ಹಚ್ಚ ಹಸಿರು, ಚಿರತೆಗಳು, ಆನೆಗಳು, ಕಾಡೆಮ್ಮೆಗಳ ಓಡಾಟ, ಹೀಗೆ ಪ್ರತಿ ಹೆಜ್ಜೆಗೂ ಕಬಿನಿಯ ಓಡಾಟ ನಿಮಗೆ ರೋಮಾಂಚನಕಾರಿ ಅನುಭವ ನೀಡುತ್ತದೆ.
ಕಬಿನಿಯು ಬೆಂಗಳೂರಿನಿಂದ 220 ಕಿಮೀ ದೂರವಿದ್ದು ರಸ್ತೆ ಮಾರ್ಗದ ಮೂಲಕ ತೆರಳಿದರೆ ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೂ ಕಬಿನಿಯು ಮೈಸೂರಿನಿಂದ ಕೇವಲ 60 ಕಿಮೀ ದೂರದಲ್ಲಿದೆ. ಕಬಿನಿಗೆ ಮೈಸೂರು ರೈಲು ನಿಲ್ದಾಣ ಹತ್ತಿರದಾಗಿದ್ದು, ಬೆಂಗಳೂರಿನಿಂದ ಮೈಸೂರು ರೈಲು ನಿಲ್ದಾಣಕ್ಕೆ ಬಂದಿಳಿದ ಬಳಿಕ ಸ್ಥಳೀಯ ಬಸ್ ಹಾಗೂ ಟ್ಯಾಕ್ಸಿಯಿಂದ ಕಬಿನಿಗೆ ತೆರಳಬಹುದು.

ಕಬಿನಿಗೆ ತೆರಳಿದರೆ ಒಂದು ದಿನವಾದರೂ ಅಲ್ಲೇ ಉಳಿಯುವಂತೆ ಪ್ಲಾನ್ ಮಾಡಬೇಕು. ಇಲ್ಲಿ ಅನೇಕ ವನ್ಯಜೀವಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಿವೆ. ಕಬಿನಿ ರಿವರ್ ಲಾಡ್ಜ್, ದಿ ಸೆರಾಯ್ ರೆಸಾರ್ಟ್‌ಗಳು, ಎವಾಲ್ವ್ ಬ್ಯಾಕ್ ರೆಸಾರ್ಟ್‌ಗಳು, ದಿ ಬೈಸನ್ ರೆಸಾರ್ಟ್, ರೆಡ್ ಅರ್ಥ್ ರೆಸಾರ್ಟ್ ಮತ್ತು ಮಚಾನ್ ವೈಲ್ಡರ್‌ನೆಸ್ ಲಾಡ್ಜ್ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿ ಐಷಾರಾಮಿ ಹೋಟೆಲ್‌ಗಳು ಇದ್ದು, ನಿಮಗೆ ಬೇಕಾದ ಎಲ್ಲಾ ಸೌಲಭ್ಯ ಕೂಡ ಲಭ್ಯ ಇರುತ್ತದೆ. ಇನ್ನು ಬಜೆಟ್ ಫ್ರೆಂಡ್ಲಿ ರೆಸಾರ್ಟ್ ಕೂಡ ಇದೆ.
ಕಬಿನಿ ಪ್ರವಾಸಕ್ಕೆ ನೀವು ಅತಿಯಾಗಿ ಪ್ಲಾನ್ ಮಾಡುವ ಅಗತ್ಯವಿಲ್ಲ. ಒಮ್ಮೆ ಅಲ್ಲಿಗೆ ತೆರಳಿದರೆ ಪ್ರತಿ ಸ್ಥಳವು ಪ್ರವಾಸಿ ಸ್ಥಳವೇ. ಕಬಿನಿಯ ಪ್ರವಾಸದಲ್ಲಿ ಮುಖ್ಯವಾಗಿ ಜಂಗಲ್ ಸಫಾರಿ ಕೈಗೊಳ್ಳಿ. ಜಂಗಲ್ ಸಫಾರಿಯಲ್ಲಿ ಜಿಂಕೆಗಳು, ಹುಲಿಗಳು, ಕರಡಿಗಳು ಮತ್ತು ಕಾಡೆಮ್ಮೆಗಳು ಸೇರಿದಂತೆ ಇನ್ನು ಅನೇಕ ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದಾಗಿದೆ. ಕಬಿನಿಯಲ್ಲಿ ಜೀಪ್, ಬಸ್ ಮತ್ತು ಆನೆ ಸಫಾರಿಗಳಿವೆ. ಅತ್ಯುತ್ತಮ ಅನುಭವಕ್ಕಾಗಿ ಜಂಗಲ್ ಸಫಾರಿ ವೇಳೆ ಜೀಪ್ ಆಯ್ಕೆ ಮಾಡಿಕೊಳ್ಳಿ.
ಕಬಿನಿಗೆ ತೆರಳಿದ ಬಳಿಕ ಕೊರಾಕಲ್ ಅಥವಾ ತೆಪ್ಪ ಸವಾರಿಯನ್ನು ಮೊದಲು ಆನಂದಿಸಿ, ಬೆಳಗಿನ ಅಥವಾ ಸಂಜೆ ವೇಳೆ ತೆಪ್ಪ ಸವಾರಿ ಮಾಡಿ. ಇಲ್ಲಿ ಸಾಂಪ್ರದಾಯಿಕ ಕೊರಾಕಲ್ ಬೋಟ್ ರೈಡ್‌ಗಳು ಕೂಡ ಲಭ್ಯವಿದ್ದು, ಮಿಸ್ ಮಾಡದೇ ಟ್ರೈ ಮಾಡಿ. ಈ ಅನುಭವ ನಿಮ್ಮ ಮನಸ್ಸಿನಲ್ಲಿದ್ದ ಒತ್ತಡವನ್ನು ಕಡಿಮೆ ಮಾಡಿ ಹೊಸ ಚೈತನ್ಯ ಮೂಡಿಸುತ್ತದೆ.
ಕಬಿನಿಗೆ ಭೇಟಿ ನೀಡಿದ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು 35 ಕಿ.ಮೀ ದೂರದಲ್ಲಿದ್ದು, ಇಲ್ಲಿಗೂ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಪೂರ್ಣಗೊಳಿಸಿ. ಈ ಪ್ರವಾಸ ಸಸ್ಯ ಸಂಪತ್ತು, ವನ್ಯಜೀವಿಗಳ ಒಡನಾಟದಿಂದ ನಿಮ್ಮ ಮನಸ್ಸಿಗೆ ಸಂತೋಷ ನೀಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications